
ನವದೆಹಲಿ (ಡಿ.19): ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಪ್ರತಾಪ್ ಸಾರಂಗಿ ತಲೆಗೆ ಗಂಭೀರವಾಗಿ ಗಾಯ ಮಾಡಿಕೊಂಡಿದ್ದಾರೆ. ಸಂಸತ್ ಭವನದ ಎದುರು ರಾಹುಲ್ ಗಾಂಧಿ ಸಂಸದರನ್ನು ತಳ್ಳಿದ್ದರು. ಈ ವೇಳೆ ಸಂಸದನೊಬ್ಬ ನನ್ನ ಮೇಲೆ ಬಿದ್ದಿದ್ದರಿಂದ ತಲೆಗೆ ಗಾಯವಾಗಿದೆ ಎಂದು ಬಿಜೆಪಿ ಸಂಸದ ಹೇಳಿಕೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಎಫ್‌ಐಆರ್ ದಾಖಲಿಸಲು ಸಿದ್ಧತೆ ಮಾಡುತ್ತಿದೆ. ಪ್ರತಿಭಟನೆಯ ವೇಳೆ ನಾನು ಮೆಟ್ಟಿಲುಗಳ ಮೇಲೆ ನಿಂತಿದ್ದೆ. ಈ ವೇಳೆ ರಾಹುಲ್ ಗಾಂಧಿ ಸಂಸದರೊಬ್ಬರನ್ನು ತಳ್ಳಿದ್ದಾರೆ. ಆ ಸಂಸದ ನನ್ನ ಮೇಲೆ ಬಿದ್ದಿದ್ದರಿಂದ ನಾನು ಉರುಳಿಬಿದ್ದೆ ಎಂದು ಸಾರಂಗಿ ತಿಳಿಸಿದ್ದಾರೆ. ತಲೆಗೆ ಗಂಭೀರವಾಗಿ ಗಾಯವಾಗಿ ರಕ್ತ ಸುರಿಯಲು ಆರಂಭಿಸಿದ್ದರಿಂದ ಕರ್ನಾಟಕದ ಸಂಸದ ಹಾಗೂ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ಅಪ್‌ಡೇಟ್‌ಗಳು ಇಲ್ಲಿವೆ...
- ಪ್ರತಾಪ್ ಸಾರಂಗಿ ಅವರ ಆರೋಗ್ಯ ವಿಚಾರಿಸಲು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಆಗಮಿಸಿದರು. ಆಸ್ಪತ್ರೆಯಿಂದ ಬಂದ ನಂತರ, ಪ್ರತಾಪ್ ಸಾರಂಗಿ ಮತ್ತು ಮುಖೇಶ್ ರಜಪೂತ್ ಪ್ರಸ್ತುತ ಐಸಿಯುನಲ್ಲಿದ್ದಾರೆ ಎಂದು ಪಾತ್ರಾ ಹೇಳಿದ್ದಾರೆ. ಇಬ್ಬರಿಗೂ ಸಾಕಷ್ಟು ರಕ್ತ ಹೋಗಿದೆ. ಅವರನ್ನು ವೈದ್ಯರ ನಿಗಾದಲ್ಲಿ ಇರಿಸಲಾಗಿದೆ ಎಂದಿದ್ದಾರೆ.
- ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಹುಲ್ ಗಾಂಧಿ ಒಬ್ಬ ಊಳಿಗಮಾನ್ಯವಾದಿ ಎಂದು ಹೇಳಿದ್ದಾರೆ. ಈ ದೇಶ ಅವನ ಸ್ವತ್ತಲ್ಲ. ಈ ಕುಟುಂಬ ಏನು ಮಾಡಲು ಬಯಸುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ.
- ಸಂಸತ್ ಆವರಣದಲ್ಲಿ ನಡೆದ ತಳ್ಳಾಟದ ಕುರಿತು ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಕಿರಣ್ ರಿಜಿಜು, ಇದು ದೈಹಿಕ ಶಕ್ತಿ ಪ್ರದರ್ಶಿಸುವ ಸ್ಥಳವಲ್ಲ ಎಂದು ಹೇಳಿದ್ದಾರೆ. ಎಲ್ಲರೂ ತಮ್ಮ ಶಕ್ತಿ ಪ್ರದರ್ಶಿಸಲು ಪ್ರಾರಂಭಿಸಿದರೆ ಸಂಸತ್ತು ಹೇಗೆ ನಡೆಯುತ್ತದೆ? ಕುಸ್ತಿ ತೋರಿಸುವುದರ ಅರ್ಥವೇನು? ಇದು ಕರಾಟೆ ಅಥವಾ ಕುಂಗ್ ಫೂಗೆ ಸ್ಥಳವಲ್ಲ. ಇದು ಯಾವುದೇ ರಾಜನ ವೈಯಕ್ತಿಕ ಆಸ್ತಿಯಲ್ಲ ಆದರೆ ಪ್ರಜಾಪ್ರಭುತ್ವದ ದೇವಾಲಯವಾಗಿದೆ. ಇದು ಜಾಣತನವನ್ನು ತೋರಿಸುವ ಸ್ಥಳವಲ್ಲ. ಸಂಸತ್ತು ಕುಸ್ತಿ ವೇದಿಕೆಯಲ್ಲ. ರಾಹುಲ್ ದೈಹಿಕ ಸಾಮರ್ಥ್ಯ ತೋರಿದ್ದಾರೆ. ಇದು ಬಾಕ್ಸಿಂಗ್ ಅಖಾಡವಲ್ಲ. ನಾನು ರಾಹುಲ್ ಗಾಂಧಿಯನ್ನು ಖಂಡಿಸುತ್ತೇನೆ ಎಂದಿದ್ದಾರೆ.
- ಸಂಸತ್ತು ಕುಸ್ತಿ ವೇದಿಕೆಯಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಸಂಸದರ ವಿರುದ್ಧ ರಾಹುಲ್ ಗಾಂಧಿ ತಮ್ಮ ಶಕ್ತಿ ಪ್ರದರ್ಶನ ಮಾಡಬಾರದು ಎಂದಿದ್ದಾರೆ.
ಬಿಜೆಪಿ ಸಂಸದ ಪ್ರತಾಪ್ ಸಾರಂಗಿಯ ತಳ್ಳಿದ ರಾಹುಲ್ ಗಾಂಧಿ, ಚಿಕಿತ್ಸೆ ನೀಡಿದ ಡಾ. ಸಿಎನ್ ಮಂಜುನಾಥ್!
- ಮೂಲಗಳ ಪ್ರಕಾರ, ಪ್ರತಾಪ್ ಸಾರಂಗಿ ಪ್ರಕರಣದಲ್ಲಿ ಬಿಜೆಪಿ ಪ್ರತಿಭಟನೆಯ ವೀಡಿಯೊಗಳನ್ನು ಪರಿಶೀಲಿಸುತ್ತಿದೆ. ತಳ್ಳಿದ ಆರೋಪವನ್ನು ಪರಿಶೀಲಿಸಲು, ರಾಹುಲ್ ಬಿಜೆಪಿ ಸಂಸದರನ್ನು ತಳ್ಳುತ್ತಿರುವ ವಿಡಿಯೋ ಕಂಡುಬಂದರೆ, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಎಫ್‌ಐಆರ್ ದಾಖಲಿಸಬಹುದು.
- ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಪ್ರಹ್ಲಾದ್ ಜೋಶಿ ಮತ್ತು ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ತೆರಳಿದ್ದು, ಪ್ರತಾಪ್ ಸಿಂಹ ಸಾರಂಗಿ ಅವರ ಸ್ಥಿತಿ ತಿಳಿಯಲು ಸಚಿವರು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ