
ನವದೆಹಲಿ(ಏ.15) ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಕಾರ್ಮೋಡದಲ್ಲಿ ಭಾರತೀಯರು ಸಿಲುಕಿದ್ದಾರೆ. ಈಗಾಗಲೇ ಇರಾನ್ ದಾಳಿ ಆರಂಭಿಸಿದೆ. ಇಸ್ರೇಲಿ ಮೂಲದ ಸರಕು ಹಡಗಿನಲ್ಲಿ ಇರಾನ್ ಸೇನೆ ದಾಳಿ ನಡೆಸಿ ಹೈಜಾಕ್ ಮಾಡಿದೆ. ಈ ಹಡಗಿನ 25 ಸಿಬ್ಬಂದಿಗಳ ಪೈಕಿ 17 ಸಿಬ್ಬಂದಿಗಳು ಭಾರತೀಯರಾಗಿದ್ದಾರೆ. ಇದೀಗ ಈ ಸಿಬ್ಬಂದಿಗಳು ಇಸ್ರೇಲ್ ಸೇನೆ ವಶದಲ್ಲಿದ್ದಾರೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಕಾರ್ಯಪ್ರವೃತ್ತರಾದ ಭಾರತ, ಇರಾನ್ ಜೊತೆಗೆ ಮಾತುಕತೆ ನಡೆಸಿ ರಾಜತಾಂತ್ರಿಕ ಗೆಲುವು ಪಡೆದುಕೊಂಡಿದೆ. ಭಾರತೀಯರ ಬಿಡುಗಡೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾತುಕತೆ ನಡೆಸಿದ್ದಾರೆ. ಈ ವೇಳೆ ವಶದಲ್ಲಿರುವ 17 ಭಾರತೀಯರನ್ನು ಭೇಟಿಯಾಗಲು ಇರಾನ್ ಅವಕಾಶ ನೀಡಿದೆ.
ಇರಾನ್ ವಿದೇಶಾಂಗ ಸಚಿವ ಡಾ. ಅಮಿರ್ ಅಬ್ದಾಹೈನ್ ಜೊತೆ ಮಾತನಾಡಿದ ಎಸ್ ಜೈಶಂಕರ್, 17 ಭಾರತೀಯರ ಬಿಡುಗಡೆ ಕುರಿತು ಚರ್ಚಿಸಿದ್ದಾರೆ. ಇರಾನ್ ಹೈಜಾಕ್ ಮಾಡಿರುವ MSC ಏರಿಸ್ ಹಡಗಿನಲ್ಲಿರುವ ಭಾರತೀಯ ಸಿಬ್ಬಂದಿ ಬಿಡುಗಡೆ ಕುರಿತು ಮಾತುಕತೆ ನಡೆಸಿದ್ದೇನೆ. ಯುದ್ಧ ಕಾರ್ಮೋಡದಿಂದ ಭಾರತ ಹಾಗೂ ಇರಾನ್ ನಡುವಿನ ರಾಜತಾಂತ್ರಿಕ ಸಂಬಂಧ ಉತ್ತವಾಗಿಟ್ಟುಕೊಳ್ಳುವುದು ಹಾಗೂ ಸಂಯಮ ಪಾಲಿಸುವ ಅಗತ್ಯತೆಯನ್ನು ಒತ್ತಿ ಹೇಳಲಾಗಿದೆ. ಇದೇ ವೇಳೆ 17 ಭಾರತೀಯರ ಭೇಟಿಗೆ ಅವಕಾಶ ನೀಡಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಇಸ್ರೇಲ್ ಮೇಲೆ ಇರಾನ್ ಯುದ್ಧ ಸಾಧ್ಯತೆ, ಈ ದೇಶಕ್ಕೆ ಪ್ರಯಾಣ ಮಾಡದಂತೆ ಭಾರತೀರಿಗೆ MEA ಮನವಿ!
ಇದೇ ವೇಳೆ ಭಾರತೀಯರ ಸುರಕ್ಷತೆ ಕುರಿತು ಜೈಶಂಕರ್ ಇರಾನ್ ಜೊತೆ ಮಾತನಾಡಿದ್ದಾರೆ. ಭಾರತದ ಕಳವಳಕ್ಕೆ ಸ್ಪಂದಿಸಿರುವ ಇರಾನ್, ಮೊದಲ ಹಂತವಾಗಿ ವಶದಲ್ಲಿರುವ 17 ಭಾರತೀಯರ ಭೇಟಿಗೆ ಅವಕಾಶ ನೀಡಿದೆ. ಶೀಘ್ಲದಲ್ಲೇ ಭಾರತೀಯರು ಇರಾನ್ ವಶದಿಂದ ಮುಕ್ತಿಗೊಳ್ಳುವ ಸಾಧ್ಯತೆ ಇದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ವಾತಾವರಣದ ನಡುವೆಯೇ ಇರಾನ್ ಮಿಲಿಟರಿ ಪಡೆ ಏಪ್ರಿಲ್ 13ರಂದು 17 ಭಾರತೀಯ ಸಿಬ್ಬಂದಿಗಳಿದ್ದ ‘ಎಂಎಸ್ ಸಿ ಆರೀಸ್ ’ ಹೆಸರಿನ ಇಸ್ರೇಲಿ ಹಡಗನ್ನು ದಾಳಿ ನಡೆಸಿ ವಶಪಡಿಸಿಕೊಂಡಿತ್ತು. ಈ ಹಡಗಿನಲ್ಲಿ ಒಟ್ಟು 25 ಸಿಬ್ಬಂದಿಗಳಿದ್ದರು. ಈ ಪೈಕಿ 17 ಸಿಬ್ಬಂದಿ ಭಾರತೀಯರಾಗಿದ್ದಾರೆ. ಈ ಸಿಬ್ಬಂದಿಗಳಿಗೆ ಪೈಕಿ ಕೇರಳದ ಮೂವರು ಸೇರಿದ್ದಾರೆ.
ಇಸ್ರೇಲ್ ಟಾರ್ಗೆಟ್ ದಾಳಿ ಆರಂಭ, 17 ಭಾರತೀಯ ಸಿಬ್ಬಂದಿಗಳಿದ್ದ ಹಡಗು ವಶಪಡಿಸಿದ ಇರಾನ್!
ಇರಾನ್ ದೇಶವು ಇಸ್ರೇಲ್ ಮೇಲೆ ವಾಯುದಾಳಿ ಮಾಡಿದ್ದನ್ನು ಭಾರತ ಖಂಡಿಸಿದೆ.ತಕ್ಷಣ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಮನವಿ ಮಾಡಿದೆ.ಭಾರತದ ವಿದೇಶಾಂಗ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿ, ‘ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ಕರೆ ನೀಡುತ್ತೇವೆ. ಹಿಂಸಾಚಾರದ ಮಾರ್ಗದಲ್ಲಿ ಹೋಗುವ ಬದಲು ರಾಜತಾಂತ್ರಿಕ ಮಾರ್ಗದಲ್ಲಿ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಿ. ಈ ಘಟನೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ’ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ