ಲೋಕಸಭಾ ಚುನಾವಣೆ: ಅಸ್ಸಾಂನ ಈ ಕುಟುಂಬದಲ್ಲಿದ್ದಾರೆ 1200 ಮಂದಿ; ಅದರಲ್ಲಿ 350 ಮತದಾರರು!

By Suvarna NewsFirst Published Apr 15, 2024, 5:09 PM IST
Highlights

ಅಸ್ಸಾಂನ ದಿವಂಗತ ರಾನ್ ಬಹದ್ದೂರ್ ಥಾಪಾ ಅವರ ಕುಟುಂಬವು ಅದರ ಗಾತ್ರಕ್ಕೆ ಹೆಸರುವಾಸಿಯಾಗಿದೆ ಮತ್ತು ರಾಜ್ಯದ ಅತಿ ದೊಡ್ಡ ಕುಟುಂಬವೆಂದು ಗುರುತಿಸಲ್ಪಟ್ಟು ದಾಖಲೆ ಮಾಡಿದೆ.

ಅಸ್ಸಾಂನ ದಿವಂಗತ ರಾನ್ ಬಹದ್ದೂರ್ ಥಾಪಾ ಅವರ ಕುಟುಂಬವು ಅದರ ಗಾತ್ರಕ್ಕೆ ಹೆಸರುವಾಸಿಯಾಗಿದೆ ಮತ್ತು ರಾಜ್ಯದ ಅತಿ ದೊಡ್ಡ ಕುಟುಂಬವೆಂದು ಗುರುತಿಸಲ್ಪಟ್ಟು ದಾಖಲೆ ಮಾಡಿದೆ. ಬರೋಬ್ಬರಿ 1200 ಸದಸ್ಯರ ಈ ದೊಡ್ಡ ಕುಟುಂಬದಲ್ಲಿ 350ಕ್ಕೂ ಹೆಚ್ಚು ಮತದಾರರಿದ್ದಾರೆ. ಇದು ಜಗತ್ತಿನಲ್ಲಿಯೇ ಅತಿ ದೊಡ್ಡ ಕುಟುಂಬ ಎಂಬ ದಾಖಲೆ ಮಾಡಬಹುದಿತ್ತು. ಆದರೆ, ಇವರು ಒಂದೇ ಹಳ್ಳಿಯಲ್ಲಿ ಬೇರೆ ಬೇರೆ ಮನೆ ಮಾಡಿಕೊಂಡಿದ್ದರಿಂದ ಈ ಹೆಸರು ತಪ್ಪಿಹೋಗಿದೆ. ಇವರಿರುವ ಹಳ್ಳಿಯಲ್ಲಿ ಕೇವಲ ಥಾಪಾ ವಂಶಸ್ಥರಷ್ಟೇ ಇರೋದು.

ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಫುಲೋಗುರಿಯಲ್ಲಿ ಏಪ್ರಿಲ್ 19ರಂದು ಲೋಕಸಭೆಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಇಲ್ಲಿನ ನೇಪಾಳಿ ಪಾಮ್‌ನಲ್ಲಿ ವಾಸಿಸುತ್ತಿದ್ದ ದಿವಂಗತ ರಾನ್ ಬಹದ್ದೂರ್ ಥಾಪಾ ಅವರ ಕುಟುಂಬದ ಸುಮಾರು 350 ಮತದಾರರು ಇದರಲ್ಲಿ ಭಾಗವಹಿಸಲಿದ್ದಾರೆ. ಅವರ ಪ್ರದೇಶ, ಫುಲೋಗುರಿ ನೇಪಾಳಿ ಪಾಮ್, ರಂಗಪಾರ ವಿಧಾನಸಭಾ ಕ್ಷೇತ್ರ ಮತ್ತು ಸೋನಿತ್‌ಪುರ ಸಂಸದೀಯ ವಿಭಾಗದ ಭಾಗವಾಗಿದೆ.
ರಾನ್ ಬಹದ್ದೂರ್ ಥಾಪಾಗೆ ಐವರು ಪತ್ನಿಯರು, 12 ಪುತ್ರರು ಮತ್ತು 9 ಪುತ್ರಿಯರಿದ್ದು, 150ಕ್ಕೂ ಹೆಚ್ಚು ಮೊಮ್ಮಕ್ಕಳಿದ್ದಾರೆ. ಅವರ ಕುಟುಂಬದ ಎಲ್ಲಾ ಸದಸ್ಯರು ಸೋನಿತ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಲಿದ್ದಾರೆ. ಒಟ್ಟು 1200 ಕುಟುಂಬ ಸದಸ್ಯರಿದ್ದರೂ ಅವರಲ್ಲಿ ಸುಮಾರು 350 ಮಂದಿ ಮಾತ್ರ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ.

ಐಎಂಡಿಬಿ ರೇಟಿಂಗ್ 8.2 ಪಡೆದ ಆರ್ಟಿಕಲ್ 370 ಒಟಿಟಿ ಬಿಡುಗಡೆ ದಿನಾಂಕ, ಪ್ಲ್ಯಾಟ್‌ಫಾರಂ ಮತ್ತಿತರೆ ವಿವರ..
 

ಫುಲೋಗುರಿ ನೇಪಾಳಿ ಪಾಮ್ ಪ್ರದೇಶದಲ್ಲಿ ಸುಮಾರು 300 ಕುಟುಂಬಗಳಿವೆ, ಅವರೆಲ್ಲ ರಾನ್ ಬಹದ್ದೂರ್ ಥಾಪಾ ವಂಶಾವಳಿಯೇ. ಒಂದೇ ಮನೆಯಲ್ಲಿ ಎಲ್ಲರೂ ಇರಲು ಸಾಧ್ಯವಾಗದ್ದರಿಂದ ಇಡೀ ಊರನ್ನೇ ಈ ಕುಟುಂಬ ಹಬ್ಬಿಕೊಂಡು ಹೆಚ್ಚು ಮನೆಗಳನ್ನು ಮಾಡಿಕೊಂಡು ಸಾಗಿದೆ. ಹೆಣ್ಣುಮಕ್ಕಳನ್ನು ಕೂಡಾ ಸಾಧ್ಯವಾದಷ್ಟು ತನ್ನ ಹಳ್ಳಿಯಲ್ಲೇ ಮದುವೆ ಮಾಡಿಕೊಟ್ಟಿದೆ. ಹೊರಗೆ ಹೋದವರೂ ತೀರಾ ದೂರ ಹೋಗದಂತೆ ನೋಡಿಕೊಂಡಿದೆ. 

'ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದರು. ಆದರೆ ಯಾವುದೇ ಸರ್ಕಾರಿ ಕೆಲಸ ಸಿಗಲಿಲ್ಲ. ನಮ್ಮ ಕುಟುಂಬದ ಕೆಲವರು ಬೆಂಗಳೂರಿಗೆ ಹೋಗಿ ಖಾಸಗಿ ಉದ್ಯೋಗಗಳನ್ನು ಕಂಡುಕೊಂಡರು. ಕೆಲವರು ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ನಾನು 1989ರಿಂದ ಗ್ರಾಮ ಪ್ರಧಾನನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ 8 ಪುತ್ರರು ಮತ್ತು 3 ಹೆಣ್ಣುಮಕ್ಕಳು ಇದ್ದಾರೆ' ಎಂದು ರಾನ್ ಪುತ್ರ ತಿಲ್ ಬಹದ್ದೂರ್ ಹೇಳುತ್ತಾರೆ.

ಅಂಬಾನಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್‌‌ ಜೊತೆ ಪೈಜಾಮ ಪಾರ್ಟಿ ಮಾಡಿದ ಜಾನ್ವಿ ಕಪೂರ್, ಇಶಾ ಅಂಬಾನಿ ಮತ್ತು ಬೆಸ್ಟೀಸ್..
 

ಮತ್ತೊಬ್ಬ ಪುತ್ರ 64 ವರ್ಷದ ಸರ್ಕಿ ಬಹದ್ದೂರ್ ಅವರು ತನಗೆ ಮೂವರು ಹೆಂಡತಿಯರು ಮತ್ತು 12 ಮಕ್ಕಳಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಒಬ್ಬೊಬ್ಬ ಪುರುಷರೂ ಬಹುವಿವಾಹವಾಗಿರುವುದರಿಂದ ಈ ಕುಟುಂಬ ಇಷ್ಟು ದೊಡ್ಡದಾಗಿದೆ ಎಂದು ಅಂದಾಜಿಸಬಹುದು. 

click me!