
ನವದೆಹಲಿ (ಜೂ.27) : ಎನ್‌ಎಫ್‌ಪಿಆರ್‌ಸಿ (ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಆ್ಯಂಡ್ ಚೇಂಜ್ ಫೌಂಡೇಶನ್) ಸಂಸ್ಥೆಯು ಇಲ್ಲಿನ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಗುರುವಾರ ಜನಪ್ರತಿನಿಧಿಗಳಿಗೆ ಕಾರ್ಯಾಗಾರವನ್ನು ಆಯೋಜಿಸಿತ್ತು. ಇದರಲ್ಲಿ ಸಾಕ್ಷ್ಯಾಧಾರಿತ ನೀತಿ ರೂಪಣೆ, ಕಾರ್ಮಿಕರ ಔಪಚಾರಿಕೀಕರಣ, ಸಾಮಾಜಿಕ ಭದ್ರತೆ, ಕೌಶಲ್ಯಾಭಿವೃದ್ಧಿ ಮತ್ತು ಪರಿಣಾಮಕಾರಿ ಸಾರ್ವಜನಿಕ ಸಂವಹನದ ಮೂಲಕ ಶಾಸಕರ ಸಾಮರ್ಥ್ಯವನ್ನು ವೃದ್ಧಿಸುವ ಬಗ್ಗೆ ಚರ್ಚಿಸಲಾಯಿತು.
ಎನ್‌ಎಫ್‌ಪಿಆರ್‌ಸಿ ಮುಖ್ಯಸ್ಥರಾದ ತರುಣ್ ಚುಗ್, ಹರ್ವಿಂದರ್ ಕಲ್ಯಾಣ್, ಕೇಂದ್ರ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು, ಹೊಸ ಕಾರ್ಮಿಕ ಸಂಹಿತೆ, ಇ-ಶ್ರಮ್ ಹಾಗೂ ಸ್ಕಿಲ್ ಇಂಡಿಯಾದಂತಹ ಡಿಜಿಟಲ್ ವೇದಿಕೆಗಳ ಮೂಲಕ ಸಾಮಾಜಿಕ ಭದ್ರತೆ ವಿಸ್ತರಣೆ, ಉದ್ಯೋಗ ಕೌಶಲ್ಯಾಭಿವೃದ್ಧಿ, ಪರಿಣಾಮಕಾರಿ ಡಿಜಿಟಲ್ ಸಂವಹನ ಮತ್ತು ಶಾಸಕರ ಆಡಳಿತಾತ್ಮಕ ಸಾಮರ್ಥ್ಯವನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಈ ಕಾರ್ಯಗಾರದಲ್ಲಿ 70 ಸಂಸದರು ಹಾಗೂ ಶಾಸಕರು ಭಾಗವಹಿಸಿದ್ದರು.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರು “ಸಾರ್ವತ್ರಿಕ ಸಾಮಾಜಿಕ ಭದ್ರತೆ ಮತ್ತು ಕಾರ್ಮಿಕರ ಔಪಚಾರಿಕೀಕರಣ: ಹೊಸ ಕಾರ್ಮಿಕ ರಚನೆ” ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರ ನಡೆಸಿಕೊಟ್ಟರು. ಹೊಸ ಕಾರ್ಮಿಕ ಸಂಹಿತೆಗಳು, ಇ-ಶ್ರಮ್ ಪೋರ್ಟಲ್, ನ್ಯಾಷನಲ್ ಕರಿಯರ್ ಸರ್ವಿಸ್ (NCS) ಮತ್ತು ಡಿಜಿಟಲ್ ಲೇಬರ್ ಚೌಕ್ ಮುಂತಾದ ಡಿಜಿಟಲ್ ಉಪಕ್ರಮಗಳು ದೇಶದ ಅಸಂಘಟಿತ ಹಾಗೂ ಗಿಗ್ ಕಾರ್ಮಿಕರ ಜೀವನವನ್ನು ಹೇಗೆ ಉತ್ತಮಗೊಳಿಸುತ್ತಿವೆ ಎಂಬುದನ್ನು ಅವರು ಸುದೀರ್ಘವಾಗಿ ವಿವರಿಸಿದರು.
ರಾಜ್ಯಸಭಾ ಸದಸ್ಯ ವಿನೋದ್ ತಾವ್ಡೆ ಅವರು ಶಾಸಕರಿಗೆ ಪರಿಣಾಮಕಾರಿ ಸಂವಹನ, ಸಾಮಾಜಿಕ ಮಾಧ್ಯಮ ನಿರ್ವಹಣೆ ಮತ್ತು ಸುಳ್ಳು ಸುದ್ದಿಗಳನ್ನು (Misinformation) ಎದುರಿಸುವ ತಂತ್ರಗಳ ಕುರಿತು ಸಾಮರ್ಥ್ಯ ವೃದ್ಧಿ ತರಬೇತಿ ನೀಡಿದರು. ಎನ್‌ಎಸ್‌ಡಿಸಿ (NSDC) ಸಿಇಒ ಶ್ರೀ ಅರುಣ್‌ಕುಮಾರ್ ಪಿಳ್ಳೈ ಅವರು 'ಸ್ಕಿಲ್ ಇಂಡಿಯಾ ಡಿಜಿಟಲ್' ಪರಿಸರ ವ್ಯವಸ್ಥೆಯ ಮೂಲಕ ಭವಿಷ್ಯದ ಸನ್ನದ್ಧ ಕಾರ್ಯಪಡೆಯನ್ನು ಹೇಗೆ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಅಂತಿಮವಾಗಿ NFPRC ಮಂಡಳಿ ಸದಸ್ಯ ಡಾ. ಅಭಿನವ್ ಪ್ರಕಾಶ್ ಅವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವು ಡಿಜಿಟಲ್ ರೂಪಾಂತರ ಮತ್ತು ನಾಗರಿಕ ಕೇಂದ್ರಿತ ಆಡಳಿತದ ಹಂಚಿಕೆಯ ದೃಷ್ಟಿಕೋನದೊಂದಿಗೆ ಮುಕ್ತಾಯಗೊಂಡಿತು.
ಜಾಪ್ರಭುತ್ವದ ಆಡಳಿತವನ್ನು ಗಟ್ಟಿಗೊಳಿಸಲು ಮತ್ತು ಪರಿಣಾಮಕಾರಿ ಸಾರ್ವಜನಿಕ ಸೇವೆ ನೀಡಲು ಶಾಸಕರ ಸಾಮರ್ಥ್ಯ ವೃದ್ಧಿ ಹಾಗೂ ಸಾಕ್ಷ್ಯ ಆಧಾರಿತ ನೀತಿ ನಿರೂಪಣೆ ಅತ್ಯಗತ್ಯ ಎಂದು ಪ್ರತಿಪಾದಿಸಿದರು. NFPRC ಫೌಂಡೇಶನ್‌ನ ಅಧ್ಯಕ್ಷ ತರುಣ್ ಚುಗ್ ಅವರು ಸ್ವಾಗತ ಭಾಷಣ ಮಾಡಿ, 'ವಿಕ್ಷಿತ್ ಭಾರತ್ @2047' ಗುರಿ ಸಾಧನೆಗಾಗಿ ಕಾರ್ಮಿಕರ ಔಪಚಾರಿಕೀಕರಣ, ಉದ್ಯೋಗ ಸನ್ನದ್ಧತೆ ಮತ್ತು ಡಿಜಿಟಲ್ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ