
ಶಹದೋಲ್ (ಮ.ಪ್ರ.): ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಪೊಲೀಸ್ ಉಪ ಮಹಾನಿರೀಕ್ಷಕಿಯೊಬ್ಬರು (ಡಿಐಜಿ) ವಿದ್ಯಾರ್ಥಿಗಳನ್ನುದ್ದೇಶಿಸಿ, ‘ತೇಜಸ್ವಿ ಮಕ್ಕಳನ್ನು ಪಡೆಯುವುದು ಹೇಗೆ?’ ಎಂಬ ಬಗ್ಗೆ ನೀಡಿದ ಉಪನ್ಯಾಸದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದ್ದು, ಅದರಲ್ಲಿ ಅವರು, ‘ಹುಣ್ಣಿಮೆ ದಿನ ಗರ್ಭ ಧರಿಸಬಾರದು’ ಎಂದು ಯುವತಿಯರಿಗೆ ಕರೆ ನೀಡಿದ್ದಾರೆ.
ಇಲ್ಲಿನ ಡಿಐಜಿ ಸವಿತಾ ಸೋಹನೆ, ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ‘ಮೈ ಹೂ ಅಭಿಮನ್ಯ’ ಕಾರ್ಯಕ್ರಮದ ಭಾಗವಾಗಿ ಖಾಸಗಿ ಶಾಲೆಯೊಂದರ 10ರಿಂದ 12ನೇ ತರಗತಿಯ ಮಕ್ಕಳಿಗೆ ಈ ಕುರಿತು ಅ.4ರಂದು ಉಪನ್ಯಾಸ ನೀಡಿದ್ದರು.‘ಹೊಸ ಪೀಳಿಗೆಯನ್ನು ಭೂಮಿಗೆ ತರಲಿರುವ ನೀವು, ಅದಕ್ಕಾಗಿ ಯೋಜನೆ ರೂಪಿಸಬೇಕು. ಹುಣ್ಣೆಮೆಯಂದು ಗರ್ಭ ಧರಿಸಬಾರದು. ತೇಜಸ್ವಿ ಸಂತಾನಕ್ಕಾಗಿ ಸೂರ್ಯದೇವನಿಗೆ ನಮಿಸಿ ಜಲ ಅರ್ಪಿಸಿ ನಮಸ್ಕರಿಸಬೇಕು’ ಎಂದು ಅವರು ಹೇಳಿದ್ದಾರೆ. ವಿಪರ್ಯಾಸವೆಂದರೆ, ಇಂತಹ ಸಲಹೆಗಳನ್ನಿತ್ತ ಸವಿತಾ ಅವಿವಾಹಿತೆ.
ಇದನ್ನೂ ಓದಿ: ಪಾಪಿಷ್ಟರು ಮಾತ್ರ ಕುಂಭಮೇಳಕ್ಕೆ ಹೋಗ್ತಾರೆ.. ಭೀಮ್ ಆರ್ಮಿ ಚಂದ್ರಶೇಖರ ಆಜಾದ್ ವಿವಾದಾತ್ಮಕ ಹೇಳಿಕೆ!
ಈ ವೈರಲ್ ವಿಡಿಯೋ ಬಗ್ಗೆ ಸವಿತಾರ ಅಭಿಪ್ರಾಯ ಕೇಳಿದಾಗ, ‘ನಾನು ಹಿಂದೂ ಆಧ್ಯಾತ್ಮಿಕ ಗುರುಗಳ ಉಪದೇಶ ಕೇಳುತ್ತೇನೆ ಹಾಗೂ ಅದರ ಆಧಾರದಲ್ಲಿ ಉಪನ್ಯಾಸ ನೀಡುತ್ತೇನೆ. ಪೊಲೀಸ್ ಸೇವೆಗೆ ಸೇರುವ ಮೊದಲು ನಾನು ಶಿಕ್ಷಕಿಯಾಗಿದ್ದೆ. ಈಗಲೂ ಪ್ರತಿ ತಿಂಗಳು ಶಾಲೆಗಳಲ್ಲಿ ಉಪನ್ಯಾಸ ನೀಡುತ್ತೇನೆ.’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ