
ಕೊಚ್ಚಿ: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಚಿಲ್ಲರೆ ಮಾರಾಟ ದರದಲ್ಲೇ ಡೀಸೆಲ್ ಮಾರಾಟ ಮಾಡುವಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಕೇರಳ ಹೈಕೋರ್ಟ್ (Kerala High Court) ಮಧ್ಯಂತರ ಆದೇಶ (interim order) ನೀಡಿದೆ. ಕಳೆದ ತಿಂಗಳು ಡೀಸೆಲ್ ಸಗಟು ಖರೀದಿಯ ಮೇಲಿನ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಹಾಗಾಗಿ ಚಿಲ್ಲರೆ ಮಾರಾಟ ದರ ಮತ್ತು ಸಗಟು ಮಾರಾಟದ ನಡುವೆ 22 ರೂ.ಗಳ ವ್ಯತ್ಯಾಸ ಉಂಟಾಗಿತ್ತು. ಸಗಟು ದರದಲ್ಲಿ ಡೀಸೆಲ್ ಖರೀದಿಸುತ್ತಿದ್ದ ಸಾರಿಗೆ ಸಂಸ್ಥೆಗೆ ಇದು ಭಾರೀ ಪರಿಣಾಮ ಬೀರಿತ್ತು.
ಈ ಬೆಲೆ ವ್ಯತ್ಯಾಸ ಪ್ರಶ್ನಿಸಿ ಸಾರಿಗೆ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎನ್. ನಗರೇಶ್ (Nagaresh), ‘ಬೆಲೆ ಹೆಚ್ಚಳದ ಕುರಿತು ಅಳವಡಿಸಿಕೊಂಡಿರುವ ಕಾರ್ಯ ವಿಧಾನಗಳು ಏನೇ ಇರಲಿ, ಪ್ರಾಥಮಿಕವಾಗಿ ವಿಧಿಸಿರುವ ದರ ವಿಪರೀತವಾಗಿದೆ. ಇದು ಯಾವುದೇ ಒಪ್ಪಂದದ ಅನುಸಾರವಾಗಿದ್ದರೂ ಸಹ ಅಸಮರ್ಥನೀಯವಾಗಿದೆ. ಹಾಗಾಗಿ ಚಿಲ್ಲರೆ ಮಾರಾಟ ದರದಲ್ಲೇ ಸಾರಿಗೆ ಸಂಸ್ಥೆಗೆ ಡೀಸೆಲ್ ಪೂರೈಸಬೇಕು’ ಎಂದರು.
ED investigation ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇರಳದ ಪಿಎಫ್ಐ ನಾಯಕನ ಬಂಧನ!
ಮಾ.22ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಚ್, ತೈಲ ಕಂಪನಿಗಳ ಬೆಲೆ ಏರಿಕೆಯ ಕುರಿತಾಗಿ ವಿವರ ಸಲ್ಲಿಸುವಂತೆ ಸೂಚನೆ ನೀಡಿತ್ತು. ‘ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹಲವು ಅಂಶಗಳನ್ನು ಆಧರಿಸಿರುತ್ತದೆ. ಅಂತಾರಾಷ್ಟ್ರೀಯ ಬೆಲೆ ಏರಿಕೆಯೂ (international price hike) ಇದರ ಮೇಲೆ ಪರಿಣಾಮ ಬೀರುತ್ತದೆ’ ಎಂದು ತೈಲ ಕಂಪನಿಗಳು ಬುಧವಾರ ಕೋರ್ಟ್‌ಗೆ ವರದಿ ನೀಡಿದವು.
ಒಂದೆಡೆ ಅಂತಾರಾಷ್ಟ್ರೀಯ ಕಚ್ಚಾತೈಲ (International Crude Oil Price Today) ಬೆಲೆ ಬ್ಯಾರೆಲ್‌ಗೆ 105 ಡಾಲರ್ ಮುಟ್ಟಿದೆ. ಇತ್ತ ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್ - ಡೀಸೆಲ್ (Petrol – Diesel) ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ. ಪೆಟ್ರೋಲ್ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಡೀಸೆಲ್ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತವೆ. ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ. ಪ್ರತಿನಿತ್ಯ 80 ಪೈಸೆಯಷ್ಟು ಬೆಲೆ ಏರಿಕೆಯಾಗುತ್ತಲೇ ಇದೆ. ಇದು ಹೀಗೇ ಮುಂದುವರೆದರೆ ಜನ ಇಂಧನ ಖರೀದಿ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
Petrol, Diesel Price Today: ರಾಜ್ಯದ 18 ಜಿಲ್ಲೆಗಳಲ್ಲಿ ಇಳಿದ ಪೆಟ್ರೋಲ್, ಡೀಸೆಲ್ ದರ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ