PM Modi security lapse : ಮುಖ್ಯ ಕಾರ್ಯದರ್ಶಿಗೆ ಕೋವಿಡ್ ಪಾಸಿಟಿವ್, ಆ ಕಾರಣದಿಂದ ಪ್ರಧಾನಿ ಸ್ವಾಗತಕ್ಕೆ ಬಂದಿರಲಿಲ್ಲ!

By Suvarna NewsFirst Published Jan 5, 2022, 7:17 PM IST
Highlights

ಫಿರೋಜ್ ಪುರ ಎಸ್ ಎಸ್ ಪಿ ಸಸ್ಪೆಂಡ್
ಸಂಪೂರ್ಣ ವಿವರವಾದ ವರದಿ ನೀಡಿ ಎಂದ ಗೃಹ ಸಚಿವ ಅಮಿತ್ ಷಾ
ಸಿಎಸ್ ಗೆ ಕೋವಿಡ್ ಪಾಸಿಟಿವ್ ಆದ ಕಾರಣ ಪ್ರಧಾನಿ ಅವರ ಭೇಟಿ ಸಾಧ್ಯವಾಗಿರಲಿಲ್ಲ ಎಂದ ಸಿಎಂ
 

ಚಂಡೀಗಢ (ಜ.5): ರೈತರ ಪ್ರತಿಭಟನೆಯಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ಬೆಂಗಾವಲು ಪಡೆ ಅಂದಾಜು 20 ನಿಮಿಷಗಳ ಕಾಲ ಪಂಜಾಬ್ ನ ಮೇಲ್ಸೇತುವೆಯಲ್ಲಿ ಸಿಲುಕಿ ಹಾಕಿಕೊಂಡಿತ್ತು. ಖಾಸಗಿ ಕಾರುಗಳು ಕೂಡ ಸಂಚಾರ ನಡೆಸುತ್ತಿದ್ದ ಈ ಸಂದರ್ಭದಲ್ಲಿ ದೇಶದ ಪ್ರಧಾನಿ ಅವರ ಭದ್ರತೆಯಲ್ಲಿ ದೊಡ್ಡ ಮಟ್ಟದ ಲೋಪವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತಂತೆ ಕೆಲ ಪಂಜಾಬ್ ಕಾಂಗ್ರೆಸ್ ನಾಯಕರು ಚರಣ್ ಜಿತ್ ಸಿಂಗ್ ಚನ್ನಿ ನೇತೃತ್ವದ ಪಂಜಾಬ್ ಸರ್ಕಾರವನ್ನು ಟೀಕೆ ಮಾಡಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯೊಂದಿಗೆ ಪಂಜಾಬ್ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮುಖ್ಯಸ್ಥರು ತೆರಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ದೇಶಾದ್ಯಂತ ಈ ಕುರಿತಾಗಿ ಟೀಕೆಗಳು ವ್ಯಕ್ತವಾದ ಬಳಿಕ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಗ್ ಚನ್ನಿ ಬುಧವಾರ ಸಂಜೆಯ ವೇಳೆಗೆ ಸುದ್ದಿಗೋಷ್ಠಿ ನಡೆಸಿ ಕೆಲ ಸ್ಪಷ್ಟೀಕರಣ ನೀಡಿದ್ದಾರೆ.

ರಾಜ್ಯಕ್ಕೆ ಬಂದ ಪ್ರಧಾನಮಂತ್ರಿಯನ್ನು ಸ್ವಾಗತಿಸುವುದು ಆಯಾ ರಾಜ್ಯದ ಮುಖ್ಯಮಂತ್ರಿಯ ಕರ್ತವ್ಯ ಅದಾಗದೇ ಇದ್ದಲ್ಲಿ, ಮುಖ್ಯ ಕಾರ್ಯದರ್ಶಿಯಾದರೂ ಹಾಜರಿರಬೇಕು. ಆದರೆ, ಬುಧವಾರ ಇವರಿಬ್ಬರಲ್ಲಿ ಯಾರೊಬ್ಬರೂ ಇದ್ದಿರಲಿಲ್ಲ.  ಈ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಚರಣ್ ಜಿತ್ ಸಿಂಗ್ ಚನ್ನಿ, "ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ನಾನೇ ಹೋಗಬೇಕಾಗಿತ್ತು. ಆದರೆ, ನಮ್ಮ ಮುಖ್ಯಕಾರ್ಯದರ್ಶಿಗೆ ಕೋವಿಡ್-19 ಪಾಸಿಟಿವ್ ಆದ ಕಾರಣ ತೆರಳಲು ಸಾಧ್ಯವಾಗಿಲ್ಲ' ಎಂದು ಹೇಳಿದರು. ಇಂದು ಏನು ನಡೆದಿದೆಯೋ ಅದು ದುರದೃಷ್ಟಕರ. ಪಂಜಾಬ್ ಗೃಹ ಸಚಿವರು ಈ ಕುರಿತಾಗಿ ನನಗೆ ಮಾಹಿತಿ ನೀಡಿದ್ದರು ನಾವು ಅವರನ್ನು ಸಮಾಧಾನ ಮಾಡಲು ಪ್ರಯತ್ನಪಟ್ಟಿದ್ದೆವು. ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ನಾವು ಮಾಡಿದ್ದೆವು. ಅದಲ್ಲದೆ, ಹಣಕಾಸು ಸಚಿವರನ್ನು ನಾವು ಪ್ರಧಾನಿ ಸ್ವಾಗತಕ್ಕೆ ಕಳುಹಿಸಿದ್ದೆವು' ಎಂದು ಹೇಳಿದ್ದಾರೆ.
"

ಇನ್ನು ಪಂಜಾಬ್ ಮುಖ್ಯಮಂತ್ರಿಯ ವರ್ತನೆಗೆ ಅವರದೇ ಪಕ್ಷದ ಹಿರಿಯ ನಾಯಕ ಸುನೀಲ್ ಜಕ್ಕರ್ ಟೀಕೆ ಮಾಡಿದ್ದಾರೆ. ಇದು ಪಂಜಾಬಿಯತ್ ಎನಿಸಿಕೊಳ್ಳುವುದಿಲ್ಲ. ದೇಶದ ಪ್ರಧಾನಿಗೆ ಇಷ್ಟು ಭದ್ರತಾ ಲೋಪ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ವಿವರವಾದ ವರದಿ ನೀಡಿ ಎಂದ ಗೃಹಸಚಿವಾಲಯ: ಪ್ರಧಾನಿ ಮೋದಿ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗಿರುವ ಕುರಿತು ಪಂಜಾಬ್ ಸರ್ಕಾರದ ಮೇಲೆ ಕೆಂಗಣ್ಣು ಬೀರಿರುವ ಕೇಂದ್ರ ಗೃಹ ಸಚಿವಾಲಯ ಸಂಪೂರ್ಣ ವಿವರವಾದ ವರದಿಯನ್ನು ಆದಷ್ಟು ಶೀಘ್ರವಾಗಿ ನೀಡುವಂತೆ ಹೇಳಿದೆ.  "ಪ್ರಧಾನಿ ಭೇಟಿಯಲ್ಲಿ ಭದ್ರತಾ ಕಾರ್ಯವಿಧಾನದ ಇಂತಹ ಲೋಪವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದಕ್ಕೆ ಹೊಣೆ ಹೊರಬೇಕಾಗಿದೆ" ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

Modi Security Breach ಮೋದಿಗೆ ಭದ್ರತಾ ಲೋಪ, ಪಂಜಾಬ್ ಸರ್ಕಾರದ ವಿರುದ್ಧ ಬೊಮ್ಮಾಯಿ ಆಕ್ರೋಶ
ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಲೋಪ: ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಪ್ರಧಾನಿ ಭದ್ರತಾ ಲೋಪದಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಂದ ದೊಡ್ಡ ಮಟ್ಟದ ಕರ್ತವ್ಯ ಲೋಪವಾಗಿದೆ ಎಂದಿದ್ದಾರೆ. ಇದು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತೋರಿಸುತ್ತದೆ ಎಂದಿದ್ದಾರೆ. ದೇಶದ ಪ್ರಧಾನಿಗೆ ಸುಗಮ ಮಾರ್ಗವನ್ನು ಒದಗಿಸಲು ಸಾಧ್ಯವಾಗದೇ ಇದ್ದಾಗ, ಪಾಕಿಸ್ತಾನದ ಗಡಿಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ ಉಳಿಯಲು ನಿಮಗೆ ಯಾವುದೇ ಹಕ್ಕಿಲ್ಲ. ಆದ್ದರಿಂದ ನಿಮ್ಮ ಪದವಿಯನ್ನ ತ್ಯಜಿಸಿ ಎಂದು ಮುಖ್ಯಮಂತ್ರಿಯನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.

Punjab Elections: ಮೋದಿ ಭದ್ರತೆಯಲ್ಲಿ ಭಾರೀ ಲೋಪ, ಇದರಲ್ಲಿದೆಯೇ ಪಂಜಾಬ್ ಸರ್ಕಾರದ ಪಾಲು?​​​​​​​
ಫಿರೋಜ್ ಪುರ ಎಎಸ್ ಪಿ ಸಸ್ಪೆಂಡ್: ಪ್ರಕರಣಕ್ಕೆ ಸಂಬಂಧಪಟ್ಟಂತೆ ಫಿರೋಜ್ ಪುರ ಎಎಸ್ ಪಿಯನ್ನು ಸಸ್ಪೆಂಡ್ ಮಾಡಲಾಗಿದ್ದು, ಅವರ ವಿರುದ್ಧ ವಿಚಾರಣೆಗೆ ಆದೇಶ ನೀಡಲಾಗಿದೆ.

click me!