ಕೊನೆಯ ಸಲ ಮಗಳ ಮುಖ ನೋಡಲೂ ಬಿಡ್ಲಿಲ್ಲ: Ankita Bhandari ತಾಯಿ ಆಕ್ರೋಶ

By BK AshwinFirst Published Sep 26, 2022, 3:39 PM IST
Highlights

ಭಾನುವಾರ ಸಂಜೆ ಅವಸರವಾಗಿ ಅಂಕಿತಾ ಭಂಡಾರಿಯ ಅಂತ್ಯಕ್ರಿಯೆ ನಡೆಸಲಾಗಿದೆ. ಹಾಗೂ ತನ್ನನ್ನು ಸುಮ್ಮನೇ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೃತ ಯುವತಿಯ ತಾಯಿ ಉತ್ತರಾಖಂಡ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ. 

ಉತ್ತರಾಖಂಡದಲ್ಲಿ ರಿಸೆಪ್ಷನಿಸ್ಟ್‌ (Receptionist) ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಅಂಕಿತಾ ಭಂಡಾರಿಯ ಹತ್ಯೆ ಪ್ರಕರಣ (Murder Case) ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಮಗಳ ಸಾವಿನ ಬಗ್ಗೆ ಮಾತನಾಡಿದ ಅಂಕಿತಾ ಭಂಡಾರಿಯ ತಾಯಿ, ತನ್ನ ಮಗಳ ಮೃತದೇಹವನ್ನು ಅವಸರವಾಗಿ ಅಂತ್ಯಸಂಸ್ಕಾರ (Cremation) ಮಾಡಲಾಗಿದೆ. ಹಾಗೂ, ತನ್ನ ಮಗಳ ಮುಖವನ್ನು ಕೊನೆಯ ಬಾರಿಗೆ ನೋಡಲೂ ಬಿಡ್ಲಿಲ್ಲ ಎಂದು ಅಂಕಿತಾ ಭಂಡಾರಿ ಆರೋಪಿಸಿದ್ದಾಳೆ. ತನ್ನ ಮಗಳ ಬಳಿ ಕರೆದುಕೊಂಡು ಹೋಗುವುದಾಗಿ ಹೇಳಿದ ಸರ್ಕಾರ, ತನ್ನನ್ನು ಮೋಸಗೊಳಿಸಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದೆ ಎಂದು ದೂರಿದ್ದಾರೆ. 

ಅಂಕಿತಾ ಭಂಡಾರಿ ತಾಯಿಗೆ ಅನಾರೋಗ್ಯ ಹಿನ್ನೆಲೆ ಆಕೆ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಈ ಹಿಂದೆ ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ತಾನು ಆರಾಮಾಗೇ ಇದ್ದೇನೆ. ತನಗೆ ಸುಳ್ಳು ಹೇಳಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹತ್ಯೆಗೀಡಾದ ಯುವತಿ ಅಂಕಿತಾ ಭಂಡಾರಿಯ ತಾಯಿ ಹೇಳಿಕೆ ನೀಡಿರುವ ವಿಡಿಯೋ (Video) ದಾಖಲಾಗಿದೆ. ಅವರು ನನ್ನ ಪತಿಯನ್ನು ಬಲವಂತವಾಗಿ ಕರೆದೊಯ್ದರು, ಆದರೆ ತನ್ನನ್ನು ಕರೆದುಕೊಂಡು ಹೋಗಲಿಲ್ಲ. ಅಲ್ಲದೆ, ನನ್ನ ಮಗಳನ್ನು ನೋಡಬಹುದೆಂದು ಹೇಳಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ ಎಂದು ಅಸಮಾಧಾನಗೊಂಡಿರುವ ಮಹಿಳೆ ಆಸ್ಪತ್ರೆಯಲ್ಲೇ ವಿಡಿಯೋ ಮಾಡಿ ಉತ್ತರಾಖಂಡ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. 

ಇದನ್ನು ಓದಿ: Ankita Bhandari Murder: ವಾಟ್ಸಾಪ್‌ ಚಾಟ್‌ ತನಿಖೆ ನಡೆಸಲಿದೆ ಎಸ್‌ಐಟಿ; ಅಂತ್ಯಕ್ರಿಯೆಗೆ ಕುಟುಂಬ ನಿರಾಕರಣೆ
 
ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ನಾನು ಪದೇ ಪದೇ ಕೇಳುತ್ತಿದ್ದೆ. ಅವರು, ನನ್ನ ಮಗಳ ಬಳಿ ಕರೆದುಕೊಂಡು ಹೋಗುತ್ತೇನೆ ಎಂದು ಭರವಸೆ ನೀಡುತ್ತಿದ್ದರು ಎಂದೂ ಹತ್ಯೆಗೀಡಾಗಿರುವ ಅಂಕಿತಾ ಭಂಡಾರಿ ತಾಯಿ ಹೇಳಿದ್ದಾರೆ. ನಂತರ, ವೈದ್ಯರು ನನ್ನನ್ನು ವ್ಹೀಲ್‌ಚೇರ್‌ನಲ್ಲಿ ಕರೆದುಕೊಂಡು ಹೋದರು. ಇದ್ಯಾಕೆ ಎಂದು ಕೇಳಿದರೂ ಆಸ್ಪತ್ರೆಗೆ ಕರೆದುಕೊಂಡು ಹೋದರು. ಬಳಿಕ ಡ್ರಿಪ್‌ ಹಾಕಿ ವಿಡಿಯೋ ರೆಕಾರ್ಡ್‌ ಮಾಡಿದರು ಎಂದೂ ಅಂಕಿತಾ ಭಂಡಾರಿ ಹೇಳಿದರು. 

ಅಂಕಿತಾ ಭಂಡಾರಿ ತಾಯಿ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದು ಹೀಗೆ.. 
ತನ್ನ ಸಂಕಟವನ್ನು ವಿವರಿಸಿದ ಅಂಕಿತಾ ಭಂಡಾರಿ ತಾಯಿ, 4 - 5 ಜನರು ತನ್ನ ಬಳಿಗೆ ಬಂದರು ಮತ್ತು ಅವರು ತನ್ನನ್ನು ತನ್ನ ಮಗಳ ಅಂತ್ಯಸಂಸ್ಕಾರ ನಡೆಯುತ್ತಿರುವ ಸ್ಥಳಕ್ಕೆ ಕರೆದೊಯ್ಯುವುದಾಗಿ ಹೇಳಿದರು. "ನಾನು ಅವಳ ತಾಯಿ ಎಂದು ನಾನು ಹೇಳಿದೆ, ನಾನು ಅವಳನ್ನು ನೋಡುವವರೆಗೂ ನಾನು ಏನನ್ನೂ ಮಾಡುವುದಿಲ್ಲ, ನೀವು ನನ್ನ ಮಗಳನ್ನು ನನಗೆ ತೋರಿಸುವವರೆಗೆ ನಾನು ಬಗ್ಗುವುದಿಲ್ಲ ಎಂದೂ ನಾನು ಹೇಳಿದೆ. ನನಗೆ ಸ್ವಲ್ಪವೂ ಅನಾರೋಗ್ಯವಿಲ್ಲ. ಅವರು ನನ್ನನ್ನು ಇಲ್ಲಿಗೆ ಬರುವಂತೆ ಮೋಸ ಮಾಡಿದರು. ನಾನು ಪೌರಕಾರ್ಮಿಕ ಕಚೇರಿಯಲ್ಲಿ ಕುಳಿತಿದ್ದೆ. ಅವರು ನನಗೆ ದ್ರೋಹ ಮಾಡಿದ್ದಾರೆ’’ ಎಂದು ಅಂಕಿತಾ ಭಂಡಾರಿ ತಾಯಿ ಆರೋಪಿಸಿದ್ದಾರೆ. 

ನಿಧಾನಗತಿಯ ಕ್ರಮಕ್ಕಾಗಿ ಪೊಲೀಸರ ವಿರುದ್ಧ ಭಾರಿ ಪ್ರತಿಭಟನೆಗಳ ನಡುವೆ ರಿಸೆಪ್ಷನಿಸ್ಟ್‌ ಆಗಿದ್ದ ಅಂಕಿತಾ ಭಂಡಾರಿ ಮೃತದೇಹಕ್ಕೆ ಭಾನುವಾರ ಸಂಜೆ ಅಂತ್ಯಸಂಸ್ಕಾರ ಮಾಡಲಾಯಿತು. ಪ್ರಕರಣದಲ್ಲಿ ಸರ್ಕಾರದ ಕ್ರಮದ ಬಗ್ಗೆಯೂ ಕುಟುಂಬದವರು ಪ್ರಶ್ನೆಗಳನ್ನು ಎತ್ತಿದ್ದರು. ಆಕೆ ಕೆಲಸ ಮಾಡುತ್ತಿದ್ದ ರೆಸಾರ್ಟ್ ಅನ್ನು ಕೆಡವಿದ್ದನ್ನು ಪ್ರಶ್ನಿಸಿ ಕುಟುಂಬ ಮತ್ತು ಪ್ರತಿಭಟನಾಕಾರರು ಅಂಕಿತಾ ಶವವನ್ನು ಅಂತ್ಯಸಂಸ್ಕಾರ ಮಾಡಲು ಆರಂಭದಲ್ಲಿ ನಿರಾಕರಿಸಿದ್ದರು. ಬಿಜೆಪಿಯ ಉಚ್ಛಾಟಿತ ಹಿರಿಯ ನಾಯಕರೊಬ್ಬರ ಪುತ್ರ  ಪ್ರಮುಖ ಆರೋಪಿಯಾಗಿರುವ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸುವ ಪ್ರಯತ್ನ ಇದಾಗಿದೆ ಎಂದು ಅವರು ಆರೋಪಿಸಿದ್ದರು. 

ಇದನ್ನೂ ಓದಿ: Ankita Bhandari Murder: ಉತ್ತರಾಖಂಡ ಸಿಎಂ ಆದೇಶದ ಮೇರೆಗೆ ಆರೋಪಿ ಬಿಜೆಪಿ ಮುಖಂಡ ಪುತ್ರನ ರೆಸಾರ್ಟ್ ಧ್ವಂಸ

ತಾತ್ಕಾಲಿಕ ಮರಣೋತ್ತರ ಪರೀಕ್ಷೆಯ ವರದಿಯು ಯುವತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ ಮತ್ತು ಆಕೆಯ ದೇಹದಲ್ಲಿ ಗಾಯದ ಲಕ್ಷಣಗಳನ್ನು ಹೊಂದಿದೆ ಎಂದು ಹೇಳಿದೆ.
 

click me!