ಉತ್ತರಪ್ರದೇಶದ ಮದುವೆ ಮನೆಗೆ ನುಗ್ಗಿ ಬಂದ ಜನರನ್ನು ತಡೆಯಲಾಗದೆ ನಂತರ ಮನೆ ಮಂದಿ ಗಾಬರಿ ಗೊಂದಲಕ್ಕೆ ಒಳಗಾಗಿ ಮದ್ವೆ ಮನೆಗೆ ಬಂದ ಅತಿತಿಗಳಿಗೆ ಆಧಾರ್ ಕಾರ್ಡ್ ಕೇಳಿದ ಘಟನೆ ನಡೆದಿದೆ.
ಲಕ್ನೋ: ಯಾವುದಾದರೂ ಉದ್ಯೋಗ ನೇಮಕಾತಿ ವೇಳೆ ಸಿಮ್ ಪಡೆಯುವ ವೇಳೆ, ಬ್ಯಾಂಕ್ ಖಾತೆ ತೆರೆಯುವಾಗ ಹೀಗೆ ಇನ್ನಾವುದೋ ಅಗತ್ಯ ಕಾರ್ಯಗಳ ವೇಳೆ ಆಧಾರ್‌ಕಾರ್ಡ್‌ಗಳನ್ನು ಕೇಳುವುದು ಮಾಮೂಲಿ. ಆದರೆ ಮದ್ವೆ ಮನೆಯಲ್ಲಿ ಯಾರಾದರೂ ಆಧಾರ್ ಕಾರ್ಡ್ ಕೇಳ್ತಾರ ಇಲ್ಲ. ಕೇಳಿದ್ರು ಆಮೇಲೆ ಕಿವಿ ಬಿಡಕ್ಕಾಗಲ್ಲ ಬಿಡಿ. ಈ ಕರ್ಮಕ್ಕೆ ಯಾಕೆ ಇವ್ರು ನಮ್ಮನ್ನ ಮದ್ವೆಗೆ ಕರ್ದ್ರು ಅಂತ ಜನ ಬೈಕ್ಕೊಳ್ಳೋದಂತು ಗ್ಯಾರಂಟಿ. ಆದ್ರೆ ಉತ್ತರಪ್ರದೇಶದ ಮದುವೆ ಮನೆಗೆ ನುಗ್ಗಿ ಬಂದ ಜನರನ್ನು ತಡೆಯಲಾಗದೆ ನಂತರ ಮನೆ ಮಂದಿ ಗಾಬರಿ ಗೊಂದಲಕ್ಕೆ ಒಳಗಾಗಿ ಮದ್ವೆ ಮನೆಗೆ ಬಂದ ಅತಿತಿಗಳಿಗೆ ಆಧಾರ್ ಕಾರ್ಡ್ ಕೇಳಿದ ಘಟನೆ ನಡೆದಿದೆ.
ಉತ್ತರಪ್ರದೇಶದ (Uttar Pradesh) ಅಮ್ರೋಹ್‌ನ(Amroha) ಹಸನ್ಪುರದಲ್ಲಿ (Hasanpur) ಈ ಅವಾಂತರ ನಡೆದಿದೆ. ಹಾಗಂತ ಇವರೇನು ದೊಡ್ಡ ಸೆಲೆಬ್ರಿಟಿಗಳಲ್ಲ. ನಮ್ಮ ನಿಮ್ಮಂತೆ ಜನ ಸಾಮಾನ್ಯರು. ಸೆಲೆಬ್ರಿಟಿಗಳು ಸಿನಿಮಾ ತಾರೆಯರ ಮದ್ವೆಯಲ್ಲಾದರೆ ಅಭಿಮಾನಿಗಳು ದಾಂಗುಡಿ ಇಡೋದು ಸಾಮಾನ್ಯ. ಇದೇ ಕಾರಣಕ್ಕೆ ಆ ಮದ್ವೆಗಳಲ್ಲಿ ಅವರಿಗೆ ವಿಶೇಷವಾದ ವಿಸಿಟಿಂಗ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಆದರೆ ಇಲ್ಲಿ ಆಧಾರ್‌ಕಾರ್ಡ್ ಕೇಳಿದ್ದು, ಈ ಆಧಾರ್‌ಕಾರ್ಡ್ ಇದ್ದವರಿಗೆ ಮದುವೆ ಮನೆ ಒಳಗೆ ಪ್ರವೇಶ ಸಿಲುಕಿದೆ. ಇಲ್ಲದವರು ಅಲ್ಲೇ ಬಾಕಿಯಾಗಿದ್ದಾರೆ. ಹೀಗಾಗಿ ಮದ್ವೆ ಮನೆಗೆ ನಿಜವಾಗಿಯೂ ಅತಿಥಿಗಳಾಗಿ ಬಂದವರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ವೆ ಮನೆಯವರು ಅತಿಥಿಗಳ ಆಧಾರ್‌ಕಾರ್ಡ್ ಕೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
In a seemingly bizarre incident, guests at a in Uttar Pradesh's district were asked to show their cards before they were allowed to pick up dinner plates.
The incident took place in Hasanpur where two sisters were getting married at the same venue. pic.twitter.com/9IfenucXUH
ಭಾರತದಲ್ಲಿ ಅತಿಥಿಗಳು ದೇವರ ಸಮಾನ ಅತಿಥಿ ದೇವೋಭವ ಎಂಬ ಮಾತಿದೆ. ಅತಿಥಿಗಳನ್ನು ತುಂಬಾ ಆದರಣೀಯವಾಗಿ ನೋಡಬೇಕು ಎಂಬುದು ನಮ್ಮ ಸಂಸ್ಕೃತಿ. ಇದೇ ಕಾರಣಕ್ಕೆ ಮದ್ವೆಗೆ ಬಂದವರನ್ನು ಬಹಳ ಸತ್ಕಾರದಿಂದ ಮಾತನಾಡಿಸಲಾಗುತ್ತದೆ. ಗಂಡು ಹಾಗೂ ಹೆಣ್ಣು ಎರಡು ಕಡೆಯ ಪೋಷಕರು ವಧು ವರರ ಹತ್ತಿರ ನಿಂತು ಅತಿಥಿಗಳನ್ನು ಮಾತನಾಡಿಸುತ್ತಾರೆ. ಅಲ್ಲದೇ ಊಟ ಮಾಡಿ ಹೋಗಿ ಎಂದು ಹೇಳುತ್ತಾರೆ. ಮದ್ವೆಗೆ ಬಂದ ಅತಿಥಿಗಳು ಯಾರೂ ಕೂಡ ಊಟ ಮಾಡದೇ ಬೇಜಾರಿನಿಂದ ಹೋಗಬಾರದು ಎಂಬುದು ಇದರ ಉದ್ದೇಶ ಆದರೆ ಇಲ್ಲಿ ಮದ್ವೆಗೆ ಬಂದ ಅಪರಿಚಿತ ಅತಿಥಿಗಳನ್ನು ನೋಡಿ ಗಾಬರಿಯಾದ ಮನೆಯವರು ಅವರಿಗೆ ಊಟ ಕೊಡುವ ಮೊದಲು ಆಧಾರ್ ಕಾರ್ಡ್ ಕೇಳಿದ್ದಾರೆ.
ಟಿಕ್‌ಟಾಕ್‌ನಲ್ಲಿ ಅರಳಿದ ಪ್ರೇಮ: ಪ್ರೀತಿಸಿದಾಕೆಯ ಜೊತೆ ಪತಿಗೆ ಮದುವೆ ಮಾಡಿಸಿದ ಪತ್ನಿ
ಮದ್ವೆ ದಿಬ್ಬಣವೂ ಧರ್ವಸಿ ಗ್ರಾಮದಿಂದ ಹಸನ್‌ಪುರಕ್ಕೆ ಬಂದಿತ್ತು. ಈ ವೇಳೆ ಭಾರಿ ಸಂಖ್ಯೆಯ ಜನರನ್ನು ನೋಡಿದ ವಧುವಿನ ಕಡೆಯವರು ವರನ ಕಡೆಯವ ಬಳಿ ಆಧಾರ್‌ಕಾರ್ಡ್ ಕೇಳಿದ್ದಾರೆ. ಮದುವೆ ಮನೆಗೆ ಪ್ರವೇಶ ಪಡೆಯುವ ಮೊದಲು ಆಧಾರ್‌ಕಾರ್ಡ್ ಕೇಳಿದ್ದು, ಇದರಿಂದ ಯಾರ ಬಳಿ ಆಧಾರ್‌ಕಾರ್ಡ್ ಇದೆ ಅವರಿಗೆ ಮದುವೆ ಊಟ ಸಿಕ್ಕಿದೆ. ಉಳಿದವರು ಮದ್ವೆಗೆ ಪ್ರವೇಶ ಸಿಕ್ಕದೆ ಹಿಂದಿರುಗಿದ್ದಾರೆ. ಸೆಪ್ಟೆಂಬರ್ 21 ರಂದು ಈ ಘಟನೆ ನಡೆದಿದೆ. ಒಂದೇ ಸ್ಥಳಕ್ಕೆ ಒಟ್ಟೊಟ್ಟಿಗೆ ಎರಡು ಕಡೆಯ ದಿಬ್ಬಣ ಬಂದಿದ್ದರಿಂದ ಈ ಅವಾಂತರ ನಡೆದಿದೆ ಎಂದು ತಿಳಿದು ಬಂದಿದೆ. ಬರೀ ಅಪರಿಚಿತರನ್ನೇ ಕಂಡ ವಧುವಿನ ಕಡೆಯವರು ಆಧಾರ್‌ಕಾರ್ಡ್ ಕೇಳಿದರು ಎಂದು ತಿಳಿದು ಬಂದಿದೆ.
ಮದುವೆಯೇ ಆಗ್ತಾ ಇಲ್ವಾ? ಈ ಗಿಡ ನೆಟ್ಟು ನೋಡಿ