
ಉತ್ತರ ಪ್ರದೇಶದ (Uttar Pradesh) ಕೌಶಂಬಿಯ (Kaushambi) ಕಡಾ ಧಾಮ್‌ನ (Kada Dham) ಶೀತ್ಲಾ ದೇವಿ ಮಂದಿರದಲ್ಲಿ (Maa Sheetla Dham Temple) ಭಕ್ತನೊಬ್ಬ ತನ್ನ ನಾಲಿಗೆಯನ್ನು (Tongue) ಕತ್ತರಿಸಿ ದೇವಿಗೆ ಅರ್ಪಿಸಿರುವ ಘಟನೆ ಶನಿವಾರ ನಡೆದಿದೆ. ಕೌಶಂಬಿ ನಗರದ ನಿವಾಸಿ ಸಂಪತ್ (38) ಎಂಬ ವ್ಯಕ್ತಿ ನಾಲಿಗೆ ಕತ್ತರಸಿ ದೇವಿಗೆ ಅರ್ಪಿಸಿದ್ದಾನೆ. ಸಂಪತ್ ಹಾಗೂ ಆತನ ಪತ್ನಿ ಬಾನ್ ಪತಿ, ಶೀತ್ಲಾ ದೇವಿ ದರ್ಶನಕ್ಕೆ ಆಗಮಿಸಿದ್ದರು. ಇದೇ ವೇಳೆ ಸಂಪತ್ ಬ್ಲೇಡ್‌ನಿಂದ (Blade) ತನ್ನ ನಾಲಿಗೆ ಕತ್ತರಿಸಿ ಗರ್ಭಗುಡಿ ಬಳಿ ಇಟ್ಟಿದ್ದಾನೆ. ಈತನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ರಕ್ತಸ್ರಾವವಾಗುತ್ತಿದ್ದ ವ್ಯಕ್ತಿಯನ್ನು ಕಂಡ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ, ಪೊಲೀಸರು ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆತನನ್ನು ಮಂಜನ್‌ಪುರದ ಸರ್ಕಾರಿ ಆಸ್ಪತ್ರೆಗೆ (Government Hospital) ದಾಖಲಿಸಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಮಾಹಿತಿ ನೀಡಿದ ಕಡಾ ಧಾಮ್‌ನ ಸ್ಟೇಷನ್ ಹೌಸ್ ಆಫೀಸರ್ ಅಭಿಲಾಷ್ ತಿವಾರಿ, "ಪುರವ್ ಸರಿರಾ ನಿವಾಸಿಯ ದಂಪತಿ ಸಂಪತ್ ಸರೋಜ್ ಮತ್ತು ಬಾನ್ ಪತಿ ಪ್ರಾರ್ಥನೆ ಸಲ್ಲಿಸಲು ಮಾ ಶೀತ್ಲಾ ಧಾಮ್ ದೇವಸ್ಥಾನಕ್ಕೆ ಬಂದರು. ದಂಪತಿಗಳು ಮೊದಲು ಗಂಗಾದಲ್ಲಿ ಪವಿತ್ರ ಸ್ನಾನ ಮಾಡಿದರು ಮತ್ತು ನಂತರ ಪ್ರಾರ್ಥನೆ ಸಲ್ಲಿಸಿದರು. ಈ ಮಧ್ಯೆ ಸಂಪತ್ ದೇವಸ್ಥಾನದ ಕೊನೆಯ ಪರಿಕ್ರಮ ಮಾಡುವಾಗ ದೇವಿಯ ಮುಂದೆ ಬ್ಲೇಡ್ ತೆಗೆದು ನಾಲಿಗೆಯನ್ನು ಸೀಳಿಕೊಂಡಿದ್ದಾನೆ. ಅವನ ಕೃತ್ಯ ಇತರ ಭಕ್ತರು ಹಾಗೂ ಆತನ ಪತ್ನಿಯನ್ನು ದಿಗ್ಭ್ರಮೆಗೊಳಿಸಿತು’’ ಎಂದು ಹೇಳಿದ್ದಾರೆ.
ಇದನ್ನು ಓದಿ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸೋ ಹಾಸನಾಂಬೆ ಜಾತ್ರಾ ಉತ್ಸವಕ್ಕೆ ಮುಹೂರ್ತ ಫಿಕ್ಸ್
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಹೇಳಿದರು. ಇನ್ನು, ಈ ಬಗ್ಗೆ ಮಾತನಾಡಿದ ನಾಲಿಗೆ ಕತ್ತರಿಸಿಕೊಂಡ ಭಕ್ತನ ಪತ್ನಿ, "ನನ್ನ ಪತಿ ಶುಕ್ರವಾರ ರಾತ್ರಿ ಕಡಾ ಧಾಮ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಬಯಸಿದ್ದರು ಮತ್ತು ಈ ಯೋಜನೆಯ ಪ್ರಕಾರ, ನಾವು ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ಬಂದಿದ್ದೇವೆ" ಎಂದು ಸಂಪತ್ ಅವರ ಪತ್ನಿ ಬಾನ್ ಪತಿ ತಿಳಿಸಿದರು. ಆದರೆ, ಶೀತ್ಲಾ ಮಾತೆಯ ದೇವತೆಯ ಮುಂದೆ ನನ್ನ ಪತಿ ತನ್ನ ನಾಲಿಗೆಯನ್ನು ಕತ್ತರಿಸಿಕೊಳ್ಳುವ ಬಗ್ಗೆ ನನಗೆ ತಿಳಿದಿರಲಿಲ್ಲ" ಎಂದು ಅವರು ಹೇಳಿದರು.
ತನ್ನ ಪತಿ ಧರ್ಮನಿಷ್ಠ (Devout) ವ್ಯಕ್ತಿ ಎಂದು ಪತ್ನಿ ಹೇಳಿಕೊಂಡಿದ್ದು, ನವರಾತ್ರಿ ಹಾಗೂ ಚೈತ್ರ ನವರಾತ್ರಿಗಾಗಿ ವರ್ಷಕ್ಕೆ ಎರಡು ಬಾರಿ ಉಪವಾಸ (Fast) ಮತ್ತು ಇತರ ಧಾರ್ಮಿಕ ತಪಸ್ಸುಗಳನ್ನು ಮಾಡುತ್ತಾರೆ ಎಂದೂ ಹೇಳಿದ್ದಾರೆ. ವಿಪರ್ಯಾಸವೆಂದರೆ, ಶೀತ್ಲಾ ದೇವಿಯ ಧಾಮಕ್ಕೆ ಆಗಮಿಸಿದ ಭಕ್ತರು ಸಂಪತ್ ಅವರ ಬಾಯಿಯಿಂದ ರಕ್ತ ಸೋರುತ್ತಿರುವುದನ್ನು ಕಂಡು ಆಘಾತಕ್ಕೊಳಗಾದರು. ಇನ್ನು, ದೇವಸ್ಥಾನದ ಒಂದು ಮೂಲೆಯಲ್ಲಿ ಬ್ಲೇಡ್ ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 772 ವರ್ಷ ಪುರಾತನ ಸೂರ್ಯ ದೇವಸ್ಥಾನದಲ್ಲಿ ಮರಳು ತೆಗೆವ ಕಾರ್ಯಾರಂಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ