
ಆಂಧ್ರ ಪ್ರದೇಶ(ಸೆ.10): ಪರೀಕ್ಷೆಗೆ ಇನ್ನೆರಡು ಮೂರು ದಿನ ಬಾಕಿ ಇರುವಾಗಲೇ ಭಾರಿ ಮಳೆ. ಪ್ರವಾಹ ಪರಿಸ್ಥಿತಿ. ನದಿಗಳು ಅಪಾಯದ ಮಟ್ಟ ಮೀರಿ ಹರಿಯಲು ಆರಂಭಿಸಿದೆ. ಆದರೆ ಮಳೆ ಕಾರಣಕ್ಕೆ ಪರೀಕ್ಷೆಯನ್ನು ತಪ್ಪಿಸುವಂತಿಲ್ಲ. ಹಾಗಂತ ಪರೀಕ್ಷಾ ಕೇಂದ್ರಕ್ಕೆ ತೆರಳು ಯಾವ ದಾರಿಯೂ ಉಳಿದಿಲ್ಲ. ಕೊನೆಗೆ ತುಂಬಿ ಹರಿಯುತ್ತಿರುವ ನದಿಯನ್ನು ಈಜಿಕೊಂಡೇ ದಾಟಿದ ಯುವತಿ ಪರೀಕ್ಷೆ ಬರೆದಿದ್ದಾಳೆ. ಈ ಘಟನೆ ನಡೆದಿರುವುದು ಆಂಧ್ರ ಪ್ರದೇಶದ ವಿಜಯನಗರಂನಲ್ಲಿ. ಮಾರಿವಲಸಾ ಗ್ರಾಮದ 21 ವರ್ಷದ ಯುವತಿ ತಡ್ಡಿ ಕಲಾವತಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನದಿ ದಾಟಿದ್ದಾಳೆ. ಬಳಿಕ ಪರೀಕ್ಷೆ ಬರೆದು ವಾಪಸ್ಸಾಗಿದ್ದಾಳೆ. ಇದೀಗ ಕಲಾವತಿ ಧೈರ್ಯ, ಬದ್ಧತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ(Rain). ಹೀಗಾಗಿ ನದಿಗಳು ಮಾತ್ರವಲ್ಲ, ರಸ್ತೆಗಳು ತುಂಬಿ ಹರಿಯತ್ತಿದೆ. ಆಂಧ್ರದ(Andhra Pradesh) ಗಜಪತಿನಗರಂ ಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆ ಹಾಗೂ ಪ್ರವಾಹ(Flood) ಪರಿಸ್ಥಿತಿ ನಿರ್ಮಾಣವಾಗಿದೆ. ಮಾರಿವಲಸಾ ಗ್ರಾಮದಿಂದ ಪಟ್ಟಣಕ್ಕೆ ಬರಲು ಸರಿಯಾದ ಮಾರ್ಗಗಳಿಲ್ಲ. ಕಾರಣ ಅಡ್ಡಲಾಗಿ ಚಂಪಾವತಿ ನದಿ(Champavati River) ಇದೆ. ಈ ನದಿಗೆ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದಾರೆ. ಇದುವರೆಗೂ ಮಂಜೂರು ಆಗಿಲ್ಲ. ಮಳೆ ಬಂದರೆ ನದಿ ತುಂಬಿ ಹರಿಯುತ್ತದೆ. ಇದರಿಂದ ಮಾರಿವಲಸಾ ಗ್ರಾಮದವರು ಪಟ್ಟಣಕ್ಕೆ ಆಗಮಿಸಲು ಸಾಧ್ಯವಾಗುವಿದಿಲ್ಲ. ಆದರೆ ಇದು ಯುವತಿಯ ಭವಿಷ್ಯದ ಪ್ರಶ್ನೆಯಾಗಿತ್ತು. ಹೀಗಾಗಿ ಕಲಾವತಿ(Taddi Kalavathi) ತನ್ನ ಇಬ್ಬರು ಸೋಹದರರ ನೆರವಿನಿಂದ ಚಂಪಾವತಿ ನದಿಯನ್ನು(Woman swims River) ಈಜಿಕೊಂಡೇ ದಾಟಿದ್ದಳೆ.
ಹಸಿವಿನಿಂದ ಕಂಗೆಟ್ಟ ಕಾಡಾನೆ ಭಾರತದ 7ನೇ ಅತೀ ದೊಡ್ಡ ನದಿ ದಾಟಿ ಪಟ್ಟಣಕ್ಕೆ ಎಂಟ್ರಿ, ವಿಡಿಯೋ ವೈರಲ್!
ನೀರಿನ ರಭಸಕ್ಕೆ ಮೂವರು ಕೊಚ್ಚಿ ಹೋಗುವ ಸಾಧ್ಯತಗಳೇ ಹೆಚ್ಚಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೆ ನದಿಯ್ನು ದಾಟಿ ಬಂದ ಯುವತಿ ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾಗಿದೆ. ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕಾರಣ ಎಲ್ಲಾ ದಾರಿಗಳು ಬಂದ್ ಆಗಿತ್ತು. ನದಿ ದಾಟುವುದು ಬಿಟ್ಟರೆ ಬೇರೆ ದಾರಿ ಉಳಿದಿರಲಿಲ್ಲ. ತಂಗಿಯ ಭವಿಷ್ಯದ ದೃಷ್ಟಿಯಿಂದ ಈ ರಿಸ್ಕ್ ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ನದಿ ದಾಟುವಾಗ ಕೆಲವು ಕಡೆ ನೀರಿನ ಹರಿವು ಹೆಚ್ಚಿತ್ತು. ಇದನ್ನು ಸರಿದೂಗಿಸಿಕೊಂಡು ನದಿ ದಾಟಿದ್ದೇವೆ ಎಂದು ಕಲಾವತಿ ಸಹೋದರರು ಹೇಳಿದ್ದಾರೆ.
Tumkakuru Rain: ಹುಚ್ಚಾಟ ಮಾಡಿ ಬೈಕ್ ಸಮೇತ ಕೊಚ್ಚಿ ಹೋದ ಸವಾರ
ಭಾರಿ ಮಳೆಗೆ ಸಿಲುಕಿದ್ದ ಹಲವರ ರಕ್ಷಣೆ
ಮಹಾಮಳೆಯಲ್ಲಿ ಸಿಲುಕಿದ್ದ ಹಲವರು ಪ್ರಾಣಾಪಾಯದಿಂದ ಬಚಾವಾದ ಹಲವು ಘಟನೆಗಳು ವಿವಿಧೆಡೆಯಿಂದ ವರದಿಯಾಗಿವೆ. ಕರ್ನಾಟಕದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಸೇತುವೆ ಮೇಲೆ ಹರಿಯುತ್ತಿದ್ದ ದಾಸಾಲುಕುಂಟೆ ಕೆರೆ ಕೋಡಿ ನೀರಿನ ಪ್ರವಾಹದಲ್ಲಿ ಬಸ್ಸೊಂದು ಸಿಲುಕಿ ಡ್ರೈವರ್ ಪರದಾಡಿದ ಘಟನೆ ನಡೆದಿದೆ. ಈ ವೇಳೆ 30ಕ್ಕೂ ಅಧಿಕ ಪ್ರಯಾಣಿಕರು ಸ್ಥಳೀಯರ ಸಹಾಯದಿಂದ ಪಾರಾಗಿದ್ದಾರೆ. ಬಳಿಕ ಸ್ಥಳೀಯರೇ ಟ್ರ್ಯಾಕ್ಟರ್ ಬಳಸಿ ಬಸ್ ಅನ್ನು ನೀರಿನಿಂದ ಹೊರತೆಗೆದಿದ್ದಾರೆ. ಇನ್ನು ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದ ಕೆರೆ ಕೋಡಿಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಸಿದ್ದಯ್ಯನಪುರ ಗ್ರಾಮದ ಇಬ್ಬರು ಬೈಕ್ ಸವಾರರನ್ನು ಅಲ್ಲಿದ್ದವರು ರಕ್ಷಿಸಿದ್ದಾರೆ. ಬೈಕ್ ನೀರುಪಾಲಾಗಿದೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಸಿರಿಯ ಮತ್ತು ವೀರಪ್ಪ ಎಂಬಿಬ್ಬರು ರೈತರು ನೀರಿನಲ್ಲಿ ಸಿಲುಕಿಕೊಂಡಿದ್ದಾಗ ಸ್ಥಳೀಯರು ಹಗ್ಗದ ಸಹಾಯದಿಂದ ಹಳ್ಳ ದಾಟಿಸಿದ್ದಾರೆ. ಹನೂರು ಬಳಿ ವ್ಯಕ್ತಿಯೊಬ್ಬರು ತನ್ನ ಮಗಳ ಜೊತೆ ಹೋಗುತ್ತಿದ್ದಾಗ ಹಳ್ಳದಲ್ಲಿ ಬೈಕ್ ಸಿಲುಕಿ ಪರದಾಡಿ ಕೊನೆಗೇ ಅಪಾಯದಿಂದ ಬಚಾವಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ