ನವದೆಹಲಿ: ಗುಜರಾತ್‌ನ ಭಾವ್‌ನಗರ ಜಿಲ್ಲೆಯಲ್ಲಿರುವ ಪವಿತ್ರ ಶತ್ರುಂಜಯ ಬೆಟ್ಟವನ್ನು ಅಪವಿತ್ರಗೊಳಿಸಿದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೈನ ಸಮುದಾಯದ ನೂರಾರು ಮಂದಿ ದಿಲ್ಲಿ, ಮುಂಬೈ, ಗುಜರಾತ್ ಸೇರಿ ಅನೇಕ ಕಡೆ ಭಾನುವಾರ ಪ್ರತಿಭಟನಾ ಸಮಾವೇಶ ನಡೆಸಿದರು. ಶತ್ರುಂಜಯ ನದಿ ದಡದಲ್ಲಿರುವ ಈ ಬೆಟ್ಟದ ಮೇಲೆ ಸುಮಾರು 865 ಜೈನ ದೇವಾಲಯಗಳಿವೆ. ಅಲ್ಲದೇ ಇದು ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಕಳೆದ ವರ್ಷ ನ.26ರಂದು ಬೆಟ್ಟದ ಮೇಲಿರುವ ಜೈನ ಸನ್ಯಾಸಿ ಮೂರ್ತಿಯ ಚರಣ ಪಾದುಕೆಗಳನ್ನು ಒಡೆದು ಹಾಕಿದ ಘಟನೆ ನಡೆದಿದೆ. ಹೀಗಾಗಿ ಜೈನ ಸಮುದಾಯ ಪ್ರತಿಭಟನೆ ನಡೆಸಿದೆ. ಬೆಟ್ಟದಲ್ಲಿ ನಡೆಸಲಾಗುತ್ತಿರುವ ಅಕ್ರಮ ಗಣಿಗಾರಿಕೆ, ಅಕ್ರಮ ಮದ್ಯ ತಯಾರಿಕೆ ಮತ್ತು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅಮೆರಿಕದ ಕೆಲಸಕ್ಕೆ ಗುಡ್‌ಬೈ ಹೇಳಿ, ಜೈನ ಸಂನ್ಯಾಸಿಯಾದ 28ರ ಹುಡುಗ!
Jain Protest: ಜೈನರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಉಳಿಸಿ: ಜೈನ ಸಮುದಾಯ ಹೋರಾಟ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ