ದೇಶದಲ್ಲಿ ಈ ವರ್ಷ ಮುಂಗಾರು ಉತ್ತಮವಾಗಿದೆ. ಹೀಗಿದ್ದರೂ ದೇಶದ ಪ್ರಮುಖ 150 ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ನೀರು ಸಂಗ್ರಹದ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಜಲ ಆಯೋಗ ಮಾಹಿತಿ ನೀಡಿದೆ.
ದೆಹಲಿ (ಆ.5): ದೇಶದಲ್ಲಿ ಈ ವರ್ಷ ಮುಂಗಾರು ಉತ್ತಮವಾಗಿದೆ. ಹೀಗಿದ್ದರೂ ದೇಶದ ಪ್ರಮುಖ 150 ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ನೀರು ಸಂಗ್ರಹದ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಜಲ ಆಯೋಗ ಮಾಹಿತಿ ನೀಡಿದೆ. ಆದರೆ ಕಳೆದ ದಶಕದ ಸರಾಸರಿಗಿಂತ ಅಧಿಕವಾಗಿದೆ ಎಂದಿದೆ.
ಮಾಲಾಶ್ರೀ ಜತೆ ಯಾರು ನಟಿಸಿದ್ರೂ ಸ್ಟಾರ್, ಆದ್ರೆ ಈ ಒಬ್ಬ ನಟ ಮಾತ್ರ ಸ್ಟಾರ್ ಆಗಲೇ ಇಲ್ಲ! ಈಗೆಲ್ಲಿದ್ದಾರೆ ಗೊತ್ತಾ?
ಕೇಂದ್ರ ಜಲ ಆಯೋಗದ ಮಾಹಿತಿ ಅನ್ವಯ ದೇಶದ ಪ್ರಮುಖ 150 ಜಲಾಶಯಗಳಲ್ಲಿ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 178 ಶತಕೋಟಿ ಕ್ಯುಬಿಕ್ ಮೀಟರ್. ಆದರೆ ಸದ್ಯ ಸಂಗ್ರಹ ಆಗಿರುವುದು 91.49 ಶತಕೋಟಿ ಕ್ಯುಬಿಕ್ ಮೀಟರ್. ಅಂದರೆ ಸಾಮರ್ಥ್ಯದ ಶೇ.51ರಷ್ಟು ಮಾತ್ರ ಸಂಗ್ರಹವಾಗಿದೆ. ಆದರೆ ದಕ್ಷಿಣ ಭಾರತದಲ್ಲಿ ಸುಮಾರು 42 ಜಲಾಶಯಗಳಿವೆ. ಇಲ್ಲಿ ಜಲಾಶಯಗಳ ಸಂಗ್ರಹ ಸಾಮರ್ಥ್ಯ 53.334 ಶತಕೋಟಿ ಕ್ಯುಬಿಕ್ ಮೀಟರ್. ಸದ್ಯ ಇವುಗಳಲ್ಲಿ 35.010 ಶತಕೋಟಿ ಕ್ಯುಬಿಕ್ ಮೀಟರ್ ನೀರು ಸಂಗ್ರಹವಾಗಿದೆ. ಇದು ಒಟ್ಟು ಸಾಮಾರ್ಥ್ಯದ ಶೇ.66ರಷ್ಟು ಎಂದು ಅಂಕಿ ಅಂಶಗಳು ಹೇಳಿವೆ. ಜೊತೆಗೆ ಇದು ಕಳೆದ ವರ್ಷಕ್ಕಿಂತ ಹೆಚ್ಚಿದೆ.
ಬೆಂಗಳೂರು ಮಹಿಳೆಯರಿಗೆ ಎಷ್ಟು ಸೇಫ್, 5 ಗಂಟೆಗೆ ವಾಕಿಂಗ್ ಹೊರಟಾಕೆಗೆ ಮುತ್ತಿಟ್ಟು ಕಿರುಕುಳ!
ಕರ್ನಾಟಕದಲ್ಲಿ ಈವರೆಗಿನ ಜಲಾಶಯ ನೀರಿನ ಮಟ್ಟ ಇಂತಿದೆ
ಶೇಕಡ /ಗರಿಷ್ಠ ಮಟ್ಟ(ಅಡಿಗಳಲ್ಲಿ)/ ಇಂದಿನ ಮಟ್ಟ(ಅಡಿಗಳಲ್ಲಿ)
ಕಬಿನಿ 89% 2284 2281.33
ಹೇಮಾವತಿ 95% 2922 2920.60
ತುಂಗಭದ್ರಾ 93% 1633 1631.26
ಸೂಪಾ(ಮೀ.) 79% 564 557.03
ಕೆಆರ್‌ಎಸ್ 96% 124.80 123.20
ಘಟಪ್ರಭಾ 93% 2175.00 2170.00
ಲಿಂಗನಮಕ್ಕಿ 92.86% 1819 1815.75
ಭದ್ರಾ 89.71% 186 180
ಹಾರಂಗಿ 81% 2859 2854.30
ಆಲಮಟ್ಟಿ(ಮೀ.) 58% 519.60 516.62
ನಾರಾಯಣಪುರ(ಮೀ.) 73% 492.25 490.02
ಮಲಪ್ರಭಾ 88% 2079 2076.15