ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್‌ಗೆ ಮತ್ತೆ 21 ದಿನಗಳ ಪೆರೋಲ್! 2020-26 ರವರೆಗೆ ಎಷ್ಟು ಬಾರಿ ಜೈಲಿನಿಂದ ಹೊರಬಂದಿದ್ದಾರೆ ಗೊತ್ತಾ?

Published : Aug 25, 2026, 09:27 AM IST
Dera chief Ram Rahim walks out of jail again gets 21 day furlough in 17th temporary release rav

ಸಾರಾಂಶ

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ನ್ಯಾಯಾಲಯ ಮತ್ತೊಮ್ಮೆ 21 ದಿನಗಳ ಪೆರೋಲ್ ನೀಡಿದೆ. ಅತ್ಯಾ೧ಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ. 2020 ರಿಂದ 17ನೇ ಬಾರಿಗೆ ಬಿಡುಗಡೆಯಾಗುತ್ತಿದ್ದು, ಒಟ್ಟು 450 ದಿನಗಳಿಗೂ ಹೆಚ್ಚು ಕಾಲ ಜೈಲಿನಿಂದ ಹೊರಗೆ.

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ನ್ಯಾಯಾಲಯ ಮತ್ತೆ 21 ದಿನಗಳ ಪೆರೋಲ್ ನೀಡಿದೆ. ಗುರ್ಮಿತ್ ರಾಮ್ ರಹೀಮ್ ಅವರನ್ನ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿರಿಸಲಾಗಿತ್ತು. ಇದೀಗ ಪೆರೋಲ್ ನೀಡಿರುವ ಹಿನ್ನೆಲೆ ಬಿಡುಗಡೆ ಮಾಡಿ ಸಿರ್ಸಾಗೆ ತೆರಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಅಶ್ಚರ್ಯಕರ ಸಂಗತಿ ಎಂದರೆ 2020 ರಿಂದ ಗುರ್ಮೀತ್ ರಾಮ್ ರಹೀಮ್ ಬಿಡುಗಡೆಯಾಗುತ್ತಿರುವುದು ಇದು 17 ನೇ ಬಾರಿ!

ಸ್ವಯಂ ಘೋಷಿತ ದೇವಮಾನವ ಜೈಲು ಸೇರಿದ್ದು ಏಕೆ

ತನ್ನನ್ನು ದೇವಮಾನವ ಎಂದು ಕರೆದುಕೊಳ್ಳುವ ಗುರ್ಮೀತ್ ರಾಮ್ ರಹೀಮ್ ಅತ್ಯಾ೧ಚಾರ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2017 ರಲ್ಲಿ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾ೧ಚಾರ ಎಸಗಿದ ಅರೋಪದಲ್ಲಿ ತಪ್ಪಿಸ್ಥರಾಗಿದ್ದಾರೆ. ಇತ್ತೀಚೆಗೆ ಅಂದರೆ ಕೇವಲ ಮೂರು ತಿಂಗಳ ಹಿಂದೆ, ಮೇ 2026 ರಲ್ಲಿ, ಅವರಿಗೆ 30 ದಿನಗಳ ಪೆರೋಲ್ ನೀಡಲಾಗಿತ್ತು.

ಗುರ್ಮೀತ್ ರಾಮ್ ರಹೀಮ್ ಹೊರಗಿದ್ದಿದ್ದೇ ಹೆಚ್ಚು!

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರನ್ನು ಅಕ್ಟೋಬರ್ 2020 ರಲ್ಲಿ ಮೊದಲು ಒಂದು ದಿನದ ಮಟ್ಟಿಗೆ ಜೈಲಿನಿಂದ ಬಿಡುಗಡೆ ಮಾಡಲಾಯಿತು. ನಂತರವೂ ಈ ಪೆರೋಲ್, ಫರ್ಲೋ ಪರಿಪಾಠ ಮುಂದುವರಿಯಿತು. ಇದುವರೆರೆ 17 ದಿನಗಳ ಪೆರೋಲ್‌ ಪಡೆದು ರಾಮ್ ರಹೀಮ್ 450 ದಿನಗಳಿಗೂ ಹೆಚ್ಚು ಕಾಲ ಜೈಲಿನಿಂದ ಹೊರಬಂದಿದ್ದಾರೆ!

ಯಾವಾಗ ಎಷ್ಟು ದಿನ ಪೆರೋಲ್?

2021 ರಲ್ಲಿ ಒಮ್ಮೆ - ಮೇ ತಿಂಗಳಲ್ಲಿ ಕೆಲವು ಗಂಟೆಗಳ ಕಾಲ.

2022 ರಲ್ಲಿ ಮೂರು ಬಾರಿ ಒಟ್ಟು 91 ದಿನಗಳು.

  • ಫೆಬ್ರವರಿ 2022 ರಲ್ಲಿ 21 ದಿನಗಳು.
  • ಜೂನ್ 2022 ರಲ್ಲಿ 30 ದಿನಗಳು.
  • ಅಕ್ಟೋಬರ್ 2022 ರಲ್ಲಿ 40 ದಿನಗಳು.

2025ನೇ ವರ್ಷದಲ್ಲಿ 3 ಬಾರಿ 91 ದಿನಗಳವರೆಗೆ

  • ಜನವರಿ 2023 ರಲ್ಲಿ 40 ದಿನಗಳು
  • ಜುಲೈ 2023 ರಲ್ಲಿ 30 ದಿನಗಳು
  • ನವೆಂಬರ್ 2023 ರಲ್ಲಿ 21 ದಿನಗಳು

2024 ರಲ್ಲಿ ಎರಡು ಬಾರಿ, 91 ದಿನಗಳವರೆಗೆ

  • ಜನವರಿ 2024 ರಲ್ಲಿ 50 ದಿನಗಳು
  • ಆಗಸ್ಟ್ 2024 ರಲ್ಲಿ 21 ದಿನಗಳು
  • ಅಕ್ಟೋಬರ್ 2024 ರಲ್ಲಿ 20 ದಿನಗಳು

2025ನೇ ವರ್ಷದಲ್ಲಿ ಮೂರು ಬಾರಿ 91 ದಿನಗಳವರೆಗೆ

  • ಜನವರಿ 2025 ರಲ್ಲಿ 30 ದಿನಗಳು
  • ಏಪ್ರಿಲ್ 2025 ರಲ್ಲಿ 21 ದಿನಗಳು
  • ಆಗಸ್ಟ್ 2025 ರಲ್ಲಿ 40 ದಿನಗಳು

2026 ರಲ್ಲಿ ಇಲ್ಲಿಯವರೆಗೆ ಮೂರು ಬಾರಿ , 91 ದಿನಗಳವರೆಗೆ

  • ಜನವರಿ 2026 ರಲ್ಲಿ 40 ದಿನಗಳು
  • ಮೇ 2026 ರಲ್ಲಿ 30 ದಿನಗಳು
  • ಆಗಸ್ಟ್ 2026 ರಲ್ಲಿ 21 ದಿನಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

50 ವರ್ಷದ ಅವಧಿಗೆ ಹುಬ್ಬಳ್ಳಿ ಸೇರಿ 11 ಏರ್‌ಪೋರ್ಟ್‌ ಖಾಸಗಿಗೆ ನೀಡಲು ನಿರ್ಧಾರ Hubballi
ಮಂಗಳೂರು ರೈಲ್ವೆಗಾಗಿ ಕೇರಳ ಬೀದಿ ಹೋರಾಟ; ಹಿಂಸಾ ರೂಪ ಪಡೆದ ಪ್ರತಿಭಟನೆ, ಪ್ರಧಾನಿಗೆ ಪತ್ರ