ಪಂಡಿತರ ಮೇಲೆ ಹೆಚ್ಚುತ್ತಿರುವ ದಾಳಿ: ಕಾಶ್ಮೀರದಲ್ಲಿ ಹೆಚ್ಚುವರಿ 1800 ಯೋಧರ ನಿಯೋಜನೆ

By Kannadaprabha NewsFirst Published Jan 5, 2023, 10:57 AM IST
Highlights

ಜಮ್ಮು-ಕಾಶ್ಮೀರದಲ್ಲಿ ದಿನೇದಿನೇ ಹಿಂದುಗಳ ಮೇಲೆ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಇಲ್ಲಿ ಹೆಚ್ಚುವರಿಯಾಗಿ 1800 ಅರೆಸೇನಾಪಡೆಯ ಯೋಧರನ್ನು ನಿಯೋಜನೆ ಮಾಡಲಾಗಿದೆ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ದಿನೇದಿನೇ ಹಿಂದುಗಳ ಮೇಲೆ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಇಲ್ಲಿ ಹೆಚ್ಚುವರಿಯಾಗಿ 1800 ಅರೆಸೇನಾಪಡೆಯ ಯೋಧರನ್ನು ನಿಯೋಜನೆ ಮಾಡಲಾಗಿದೆ ಇತ್ತೀಚೆಗೆ ರಜೌರಿಯಲ್ಲಿ ನಡೆದ ಐಇಡಿ ಬಾಂಬ್‌ ಸ್ಫೋಟದಲ್ಲಿ ಇಬ್ಬರು ಮಕ್ಕಳು ಸೇರಿ ಐವರ ಸಾವಗಿತ್ತು. ಇದರೊಂದಿಗೆ ಉತ್ತರ ಡಂಗ್ರಿಯಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರ ಮರಣವಾಗಿತ್ತು. ಈ ಸಂಬಂಧ ಜಮ್ಮು ಕಾಶ್ಮೀರ ಪೊಲೀಸರು, ಸೇನೆಯ ನೂರಾರು ಯೋಧರು ಈಗಾಗಲೇ ಹುಡುಕಾಟ ನಡೆಸುತ್ತಿದ್ದಾರೆ. ಇದರೊಂದಿಗೆ 1800 ಅರೆಸೇನಾ ಪಡೆಗಳ ಯೋಧರು ಬಂದಿರುವುದು ಅಲ್ಲಿನ ಜನರಿಗೆ ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.

ಪಂಜಾಬ್ ಸಿಎಂ ಮನೆ ಮುಂದೆ ಬಾಂಬ್ : ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ

Latest Videos

ಮತ್ತೊಂದು ಕಾಶ್ಮೀರ್ ಫೈಲ್ಸ್‌..? ಹಿಂದೂಗಳನ್ನು ಗುರಿಯಾಗಿಸಿ ಉಗ್ರರಿಂದ ಗುಂಡಿನ ದಾಳಿ..!

click me!