ಮೆಟ್ರೋ ರೈಲು ಬರುತ್ತಿದ್ದಂತೆ ಯುವತಿ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಶೂಟ್ ಆರಂಭಿಸಿದ್ದಾಳೆ. ಸ್ಟೈಲ್ ಆಗಿ ಮೆಟ್ರೋ ಹತ್ತಿ ನಟಿಯಂತೆ ಒಂದೆರಡು ಸುತ್ತು ತಿರುಗಿದ್ದಾಳೆ. ಅಷ್ಟರಲ್ಲಿ ಮೆಟ್ರೋ ರೈಲು ಬಾಗಿಲು ಮುಚ್ಚಿಕೊಂಡಿದೆ. ಬಾಗಿಲ ಬಳಿ ನಿಂತು ಅತ್ತು ಕರೆದರೂ ರೈಲು ಚಲಿಸಿದ ವಿಡಿಯೋ ವೈರಲ್ ಆಗಿದೆ.
ದೆಹಲಿ(ಮೇ.16) ರೀಲ್ಸ್ ಹುಚ್ಚಾಟ ಹಲವರ ಜೀವಕ್ಕೆ ಕುತ್ತು ತಂದಿದೆ. ಮತ್ತೆ ಕೆಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಎಲ್ಲೆಂದರಲ್ಲಿ ರೀಲ್ಸ್ ಮಾಡಿ ಟೀಕೆಗೆ ಗುರಿಯಾದ ಉದಾಹರಣೆಗಳು ಇವೆ. ಈ ಸಾಲಿಗೆ ಮತ್ತೊಬ್ಬ ಯುವತಿ ಸೇರಿಕೊಂಡಿದ್ದಾಳೆ. ದೆಹಲಿ ಮೆಟ್ರೋ ಪ್ಲಾಟ್‌ಫಾರ್ಮ್‌ಗೆ ಆಗಮಿಸಿದ ಬೆನ್ನಲ್ಲೇ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಪ್ಲಾಟ್‌ಫಾರ್ಮ್ ಕಂಬಕ್ಕೆ ಒರಗಿಸಿ ಇಟ್ಟು ಸ್ಟೈಲ್ ಆಗಿ ಒಂದೆರಡು ಸುತ್ತು ಹೊಡದು ಮೆಟ್ರೊ ಹತ್ತಿದ್ದಾಳೆ. ಅಷ್ಟರಲ್ಲೇ ಮೆಟ್ರೋ ಬಾಗಿಲು ಮುಚ್ಚಿಕೊಂಡಿದೆ. ಮರುಕ್ಷಣದಲ್ಲೇ ಮೆಟ್ರೋ ಪ್ಲಾಟ್‌ಫಾರ್ಮ್‌ನಿಂದ ತೆರಳಿದೆ. ಯುವತಿ ಅಸಹಾಯಕಳಾಗಿ ಬಾಗಿಲ ಬಳಿ ನೋಡುತ್ತಿದ್ದರೆ ಆಕೆಯ ಫೋನ್ ಪ್ಲಾಟ್‌ಫಾರ್ಮ್‌ನಲ್ಲೇ ಬಾಕಿಯಾಗಿದೆ.
ನೀಲಿ ಟಿಶರ್ಟ್, ಕಪ್ಪು ಬಣ್ಣದ ಜೀನ್ಸ್ ಧರಿಸಿ ರೀಲ್ಸ್ ಪ್ಲಾನ್‌ನಲ್ಲಿ ಯುವತಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ್ದಾಳೆ. ಯುವತಿ ಪ್ಲಾನ್ ಪ್ರಕಾರ ಮೊಬೈಲ್ ಕ್ಯಾಮೆರಾ ಆನ್ ಮಾಡಿ ಮೆಟ್ರೋ ಹತ್ತಿ ಮರಳಿ ಬಂದು ಕ್ಯಾಮೆರಾ ತೆಗೆದು ರೆಕಾರ್ಡ್ ಆಫ್ ಮಾಡುವುದು. ಬಳಿಕ ವಿಡಿಯೋ ಕಟ್ ಮಾಡಿ ಮೆಟ್ರೋ ಹತ್ತುವ, ವಯ್ಯಾರದಿಂ ತಿರುಗುವ ವಿಡಿಯೋ ಪೋಸ್ಟ್ ಮಾಡಲು ಎಲ್ಲಾ ತಯಾರಿ ಮಾಡಿದ್ದಾಳೆ.
ಇಂಜಿನಿಯರಿಂಗ್ ಓದ್ತಿದ್ರೂ ನೋ ಕಾಮನ್‌ಸೆನ್ಸ್: ರೀಲ್ಸ್ ಮಾಡ್ತಾ ರೈಲಡಿಗೆ ಬಿದ್ದು ಯುವತಿ ಸಾವು
ನಿರೀಕ್ಷೆಯಂತೆ ರೈಲು ಆಗಮಿಸಿದೆ. ಅಷ್ಟರಲ್ಲೇ ಮೆಟ್ರೋ ಬಾಗಿಲು ತೆರೆದುಕೊಂಡಿತ್ತು.ಮರು ಕ್ಷಣದಲ್ಲಿ ಯುವತಿ ಮೊಬೈಲ್ ಕ್ಯಾಮೆರಾನವನ್ನು ಆನ್ ಮಾಡಿ ಪ್ಲಾಟ್‌ಫಾರ್ಮ್ ಕಂಬಕ್ಕೆ ಒರಗಿಸಿಟ್ಟಿದ್ದಾಳೆ. ಬಳಿಕ ಮೆಟ್ರೋ ಬಳಿ ನಿಂತು ಕ್ಯಾಮೆರಾಗೆ ಫೋಸ್ ನೀಡಿದ್ದಾಳೆ. ಬಳಿಕ ನೇರವಾಗಿ ಮೆಟ್ರೋ ಒಳಗಡೆ ತೆರಳಿದ್ದಾಳೆ. ಮೆಟ್ರೋದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ನೀಡಿರುವ ಹ್ಯಾಂಡಲ್ ಹಿಡಿದು ಒಂದು ಸುತ್ತು ತಿರುಗಿದ್ದಾಳೆ.
Papa ki pari 😂 pic.twitter.com/n4Eo1BccfM
— Baba MaChuvera 💫 Parody of Parody (@indian_armada)
ಇಷ್ಟೇ ನೋಡಿ, ಮೆಟ್ರೋ ಬಾಗಿಲು ಮುಚ್ಚಿಕೊಂಡಿದೆ. ರೈಲು ಪ್ರಯಾಣ ಮುಂದುವರಿಸಿದೆ. ಆದರೆ ಪ್ಲಾಟ್‌ಫಾರ್ಮ್‌ನಲ್ಲಿಟ್ಟ ಮೊಬೈಲ್ ಅಲ್ಲೆ ಬಾಕಿಯಾಗಿದೆ. ಯುವತಿ ತಕ್ಷಣವೇ ಬಾಗಿಲ ಬಳಿ ಬಂದು ಅಸಾಹಯಕಳಾಗಿ ಚಡಪಡಿಸುವ ವಿಡಿಯೋ ರೆಕಾರ್ಡ್ ಆಗಿದೆ. ಈ ವಿಡಿಯೋವನ್ನು ಬಾಬಾ ಮಾ ಚುವೆರಾ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಜಾಲಿ ರೈಡ್ ಹೋದ ಸ್ಪೈಡರ್‌ಮ್ಯಾನ್-ಸ್ಪೈಡರ್‌ವುಮೆನ್‌ಗೆ ಶಾಕ್, ವಿಡಿಯೋ ಪೋಸ್ಟ್ ಮಾಡಿ ಅರೆಸ್ಟ್ ಆದ ಜೋಡಿ!
ರೀಲ್ಸ್ ಹುಚ್ಚಾಟಕ್ಕೆ ಕೊನೆ ಎಂದು ಹಲವರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಬಹುತೇಕರು ಇದು ಪೂರ್ವ ನಿಯೋಜಿತ ವಿಡಿಯೋ ಆಗಿದೆ. ವೈರಲ್ ಆಗಬೇಕೆಂಬ ಉದ್ದೇಶದಿಂದ ಮಾಡಲಾಗಿದೆ. ಯುವತಿಯ ಆಪ್ತರು ಮೊಬೈಲ್ ಪಕ್ಕದಲ್ಲೇ ಇದ್ದಾರೆ. ಬೇಕೆಂತಲೇ ಈ ವಿಡಿಯೋ ಮಾಡಿ ಹರಿಬಿಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.