ಮೈದುನನ ಜೊತೆ ಮಂಚ ಏರಲು ಅಡ್ಡಿಯಾದ ಗಂಡನನ್ನೇ ಎಲೆಕ್ಟ್ರಿಕ್‌ ಶಾಕ್‌ ಕೊಟ್ಟು ಮುಗಿಸಿದಳು ಪತ್ನಿ!

Published : Jul 19, 2025, 06:46 PM IST
Delhi Crime

ಸಾರಾಂಶ

ಮೈದುನನ ಜೊತೆ ಸಂಬಂಧ ಹೊಂದಿದ್ದ ಪತ್ನಿ, ಗಂಡನಿಗೆ ಮಾದಕ ದ್ರವ್ಯ ಮತ್ತು ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿದ್ದಾಳೆ. ದೆಹಲಿಯ ದ್ವಾರಕಾದಲ್ಲಿ ನಡೆದ ಘಟನೆಯಲ್ಲಿ ಪತ್ನಿ ಮತ್ತು ಮೈದುನನನ್ನು ಪೊಲೀಸರು ಬಂಧಿಸಿದ್ದಾರೆ. ಚಾಟ್‌ಗಳಲ್ಲಿ ಕೊಲೆಗೆ ಸಂಚು ರೂಪಿಸಿದ್ದಕ್ಕೆ ಪುರಾವೆಗಳು ದೊರೆತಿವೆ.

ನವದೆಹಲಿ (ಜು.19): ಮೈದುನನ ಜೊತೆ ಮಂಚ ಏರಲು ಅಡ್ಡಿಯಾಗಿದ್ದ ಗಂಡನನ್ನೇ ಪತ್ನಿಯೊಬ್ಬಳು ಮಾದಕ ದ್ರವ್ಯ ನೀಡಿ ಎಲೆಕ್ಟ್ರಿಕ್‌ ಶಾಕ್ ನೀಡಿ ಸಾಯಿಸಿರುವ ಘಟನೆ ನಡೆದಿದೆ. ನೈಋತ್ಯ ದೆಹಲಿಯ ದ್ವಾರಕಾದಲ್ಲಿ 35 ವರ್ಷದ ವ್ಯಕ್ತಿಯೊಬ್ಬನನ್ನು ಆತನ ಪತ್ನಿ ಮತ್ತು ಆಕೆಯ ಪ್ರಿಯಕರ (ಆಕೆಯ ಮೈದುನ ಕೂಡ) ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಆರೋಪಿ ಸುಶ್ಮಿತಾ ದೇವ್ ಮತ್ತು ಆಕೆಯ ಪ್ರಿಯಕರ ರಾಹುಲ್ ದೇವ್, ಕರಣ್ ದೇವ್‌ಗೆ ಮಾದಕ ದ್ರವ್ಯ ನೀಡಿ ವಿದ್ಯುತ್ ಶಾಕ್ ನೀಡಿ ಕೊಲ್ಲಲು ಸಂಚು ರೂಪಿಸಿದ್ದರು ಎಂಬ ಆರೋಪದ ಚಾಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜುಲೈ 13 ರಂದು ಕರಣ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಪೊಲೀಸ್ ತನಿಖೆಯು ಅಂತಿಮವಾಗಿ ಸುಶ್ಮಿತಾ ಮತ್ತು ರಾಹುಲ್ ಅವರ ಮೇಲೆಯೇ ಅನುಮಾನಕ್ಕೆ ಕಾರಣವಾಗಿತ್ತು. ಕೊನೆಗೆ ರಾಹುಲ್‌ನ ಮೊಬೈಲ್‌ನಲ್ಲಿ ರಾಹುಲ್‌ ಹಾಗೂ ಸುಶ್ಮಿತಾ ನಡುವಿನ ಚಾಟ್‌ ಪತ್ತೆಯಾಗಿದ್ದರಿಂದ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಗಂಡ ಕರಣ್‌ ಶಾಕ್‌ ಹೊಡೆದ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಸುಶ್ಮಿತಾ, ಕರಣ್‌ ಅವರ ಕುಟುಂಬಕ್ಕೆ ತಿಳಿಸಿದ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಕರಣ್‌ರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಈ ವೇಳೆಗೆ ಆತ ಸಾವು ಕಂಡಿದ್ದ ಎನ್ನಲಾಗಿದೆ.

ಮರಣೋತ್ತರ ಪರೀಕ್ಷೆಗೆ ವಿರೋಧಿಸಿದ್ದ ಸುಶ್ಮಿತಾ, ರಾಹುಲ್‌

ಆದರೆ, ಇಡೀ ಘಟನೆಯ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು,ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆದರೆ, ಸುಶ್ಮಿತಾ, ರಾಹುಲ್‌ ಹಾಗೂ ಕರಣ್‌ ಅವರ ತಂದೆ ಶವ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದು ಕುಟುಂಬದ ಮೇಲೆ ಅನುಮಾನಕ್ಕೆ ಮತ್ತಷ್ಟು ಕಾರಣವಾಗಿತ್ತು.

ಆದರೆ, ಕರಣ್‌ನ ಕಿರಿಯ ಸಹೋದರ ಕುನಾಲ್‌, ಸುಶ್ಮಿತಾಳ ಫೋನ್‌ನಲ್ಲಿ ರಾಹುಲ್‌ ಹಾಗೂ ಸುಶ್ಮಿತಾ ಅವರ ಚಾಟ್‌ ಪತ್ತೆ ಮಾಡಿದ್ದ. ಇದರಲ್ಲಿ ಕರಣ್‌ನನ್ನು ಕೊಲ್ಲುವ ವಿವರವಾದ ಪ್ಲ್ಯಾನ್‌ಅನ್ನು ಚರ್ಚಿಸಲಾಗಿತ್ತು. ಅಲ್ಲದೆ, ಅವರಿಬ್ಬರ ಸಂಬಂಧಗಳ ಬಗ್ಗೆಯೂ ಚಾಟ್‌ಗಳಲ್ಲಿ ವಿವರಗಳಿದ್ದವು. ತಕ್ಷಣವೇ ಕುಟುಂಬ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸುಶ್ಮಿತಾ ಹಾಗೂ ರಾಹುಲ್‌ರನ್ನು ಬಂಧಿಸಲು ಕಾರಣವಾಗಿದೆ.

ಚಾಟ್‌ನಲ್ಲಿ ರಾಹುಲ್‌ ಮಹಿಳೆಗೆ ಮುಂದೇನು ಮಾಡಬೇಕು ಎಂದು ಸೂಚನೆ ನೀಡುತ್ತಿರುವುದು ಕಂಡಿದೆ. ಆಕೆಯ ಗಂಡನನ್ನು ಕೊಲ್ಲಲು ಹೆಚ್ಚಿನ ಔಷಧಿ, ಬಹುಶಃ ನಿದ್ರಾಜನಕಗಳನ್ನು ನೀಡುವಂತೆ ತಿಳಿಸುತ್ತಿರುವುದು ಕಂಡಿದೆ. ಸುಶ್ಮಿತಾ ಮತ್ತು ರಾಹುಲ್ ಕಳೆದ ಎರಡು ವರ್ಷಗಳಿಂದ ಸಂಬಂಧದಲ್ಲಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಒಂದು ಚಾಟ್ ಸಂದೇಶದಲ್ಲಿ, ರಾಹುಲ್‌ಗೆ ಪ್ರಶ್ನೆ ಮಾಡಿರುವ ಸುಶ್ಮಿತಾ , "ಔಷಧಿ ತೆಗೆದುಕೊಂಡ ನಂತರ ಸಾಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನೋಡಿ. ಅವನು ತಿಂದು ಮೂರು ಗಂಟೆಗಳಾಗಿವೆ, ಆದರೆ ವಾಂತಿ ಇಲ್ಲ, ಮಲ ವಿಸರ್ಜನೆಯೂ ಆಗಿಲ್ಲ, ಏನೂ ಇಲ್ಲ. ಮತ್ತು ಅವನು ಇನ್ನೂ ಸತ್ತಿಲ್ಲ" ಎಂದು ಬರೆದಿದ್ದಾರೆ.

"ನಾವು ಏನು ಮಾಡಬೇಕು? ನಿಮ್ಮ ಬಳಿ ಏನಾದರೂ ಸಲಹೆಗಳಿವೆಯೇ?" ಅವಳು ಕೇಳಿದ್ದಾಳೆ. ಅದಕ್ಕೆ ರಾಹುಲ್, "ನಿಮಗೆ ಬೇರೆ ಏನೂ ತೋಚದಿದ್ದರೆ, ಅವನಿಗೆ ವಿದ್ಯುತ್ ಶಾಕ್ ಕೊಡಿ" ಎಂದು ಉತ್ತರಿಸಿದ್ದಾನೆ.

ಸುಶ್ಮಿತಾ: "ಶಾಕ್‌ ಕೊಡಲು ನಾನು ಅವನನ್ನು ಹೇಗೆ ಕಟ್ಟಿ ಹಾಕಬೇಕು?"

ರಾಹುಲ್‌: ಟೇಪ್‌ ಬಳಸಿ

ಸುಶ್ಮಿತಾ: "ಅವನ ಉಸಿರಾಟ ತುಂಬಾ ನಿಧಾನವಾಗಿದೆ."

ರಾಹುಲ್: "ನಿಮ್ಮಲ್ಲಿರುವ ಎಲ್ಲಾ ಔಷಧಿಯನ್ನು ಅವನಿಗೆ ಕೊಡಿ."

ಸುಶ್ಮಿತಾ: "ನನಗೆ ಅವನ ಬಾಯಿ ತೆರೆಯಲು ಆಗುತ್ತಿಲ್ಲ. ನಾನು ನೀರು ಸುರಿಯಬಲ್ಲೆ, ಆದರೆ ಔಷಧ ಕೊಡಲು ಸಾಧ್ಯವಿಲ್ಲ. ನೀನು ಇಲ್ಲಿಗೆ ಬಾ, ಬಹುಶಃ ನಾವು ಒಟ್ಟಿಗೆ ಅವನಿಗೆ ಅದನ್ನು ತಿನ್ನಿಸಲು ಸಾಧ್ಯವೇ?"

ಕರಣ್ ಕುಟುಂಬದವರ ಪ್ರಕಾರ, ದಂಪತಿಗಳು ಒಟ್ಟಿಗೆ ವಾಸಿಸಲು ಮತ್ತು ಅವರ ಆಸ್ತಿಯ ಮೇಲೆ ಹಿಡಿತ ಸಾಧಿಸುವುದು ಕೊಲೆಯ ಹಿಂದಿನ ಉದ್ದೇಶವಾಗಿತ್ತು. ಸುಷ್ಮಿತಾ ಮತ್ತು ರಾಹುಲ್ ಇಬ್ಬರೂ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಪಿತೂರಿಯ ಬಗ್ಗೆ ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸಲು ಮತ್ತು ಹೆಚ್ಚಿನ ವಿವರಗಳನ್ನು ಖಚಿತಪಡಿಸಲು ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..