ಪೌರತ್ವ ಕಾಯ್ದೆ ಕಿಚ್ಚಿಗೆ ತುಪ್ಪ ಸುರಿದವರ ಹೆಡೆಮುರಿ ಕಟ್ಟಿದ ಪೊಲೀಸ್ರು..!

By Suvarna NewsFirst Published Mar 12, 2020, 5:18 PM IST
Highlights

ದೆಹಲಿಯ ಕೋಮುಗಲಭೆಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) ದೆಹಲಿ ರಾಜ್ಯಾಧ್ಯಕ್ಷ ಮತ್ತು ಕಾರ್ಯದರ್ಶಿಯನ್ನ ಪೊಲೀಸ್ ಬಂಧಿಸಿದ್ದಾರೆ.

ನವದೆಹಲಿ, (ಮಾ.12): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆದಿದ್ದ ಕೋಮುಗಲಭೆ ಪ್ರಕಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ರಾಜ್ಯಾಧ್ಯಕ್ಷ ಪರ್ವೇಜ್ ಅಹಮದ್​ ಮತ್ತು ಕಾರ್ಯದರ್ಶಿ ಮೊಹಮ್ಮದ್ ಇಲ್ಯಾಸ್ ಅವರನ್ನು ಬಂಧಿಸಲಾಗಿದೆ.

ದೆಹಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿರುವ ಆರೋಪದಲ್ಲಿ ದೆಹಲಿ ಪೊಲೀಸ್ ವಿಶೇಷ ತಂಡ ಇಂದು (ಗುರುವಾರ) ಈ ಇಬ್ಬರನ್ನು ಬಂಧಿಸಿದ್ದಾರೆ.

ಪಿಎಫ್​ಐ ನಾಯಕರ ವಿರುದ್ಧ ದೆಹಲಿಯಲ್ಲಿ ನಡೆದ ಗಲಭೆಗೆ ಜನರನ್ನು ಪೂರೈಕೆ ಮಾಡಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ಕೋಮುಗಲಭೆಗೆ ಪರ್ವೇಜ್ ಅಹಮದ್ ಬಂಡವಾಳ ಹೂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ಹಿಂಸಾಚಾರಕ್ಕೆ ಲಿಂಕ್ ಪಿಎಫ್ಐ ಕಾರ್ಯಕರ್ತನ ಬಂಧನ!

ಇನ್ನು ಪೌರತ್ವ ಕಾಯ್ದೆ ಕಿಚ್ಚಿಗೆ ವಿದೇಶಿ ಮುಸ್ಲಿಂ NGO ಒಂದು ಹಣದ ಸಹಾಯ ಮಾಡಿ ಹುರಿಯು ಬೆಂಕಿಗೆ ತುಪ್ಪ ಸುರಿದಿದೆ ಎಂದು ವರದಿಯಾಗಿದೆ.

Delhi Police Special Cell has arrested Delhi Popular Front of India (PFI) President Parvez (pic1) and Secretary Illiyas (pic2), in connection with the alleged PFI-Shaheen Bagh link. pic.twitter.com/iLx1M7P3xz

— ANI (@ANI)

ಸೋಮವಾರ ಪಿಎಫ್‌ಐನ ಕೌಂಟರ್ ಇಂಟೆಲಿಜೆನ್ಸ್ ವಿಂಗ್‌ನ ಮುಖ್ಯಸ್ಥನಾಗಿದ್ದ ಡ್ಯಾನಿಶ್‌ ಎಂಬಾತನನ್ನು ಸೋಮವಾರ ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದನ್ನ ಇಲ್ಲಿ ಸ್ಮರಿಸಹುದು.

ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್​ಆರ್​ಸಿ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿಂಸಾಚಾರ ಪ್ರಕರಣದಲ್ಲಿ ಈಗಾಗಲೇ 50ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ದೆಹಲಿಯಲ್ಲಿ ನಡೆದ ಹಿಂಸಾಚಾರ ನಿಯಂತ್ರಣದ ಹೊಣೆಯನ್ನು ಭಾರತದ ಜೇಮ್ಸ್ ಬಾಂಡ್ ಎಂದೇ ಖ್ಯಾತರಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ಹೆಗಲಿಗೆ ಹಾಕಲಾಗಿತ್ತು.

click me!