
ದೆಹಲಿ(ಸೆ.23): ಮುಂಬೈ ಎಕ್ಸ್‌ಪ್ರೆಸ್‌ವೇ ದೆಹಲಿ ಹಾಗೂ ಮುಂಬೈ ನಡುವಿನ ಪ್ರಯಾಣ ದೂರವನ್ನು ಅರ್ಧಕ್ಕರ್ಧದಷ್ಟು ಕಡಿಮೆ ಮಾಡಲಿದೆ. ಈಗ ದೆಹಲಿ(Delhi) ಹಾಗೂ ಮುಂಬೈ(Mumbai) ನಡುವಿನ ಪ್ರಯಾಣಾವಧಿ 24 ಗಂಟೆಯಾಗಿದ್ದು, ಈ ಅವಧಿ 12 ಗಂಟೆಗೆ ಇಳಇಕೆಯಾಗಲಿದೆ. ಈ ಮೂಲಕ ಬರೋಬ್ಬರಿ 130 ಕಿಮೀ ಪ್ರಯಾಣಿಸದೆ ಪರಸ್ಪರ ಎರಡು ನಗರಗಳ ನಡುವಿನ ಸಂಪರ್ಕ ಸಾಧಿಸಬಹುದಾಗಿದೆ. ಇದು ರಾಜಧಾನಿ ಎಕ್ಸ್‌ಪ್ರೆಸ್‌ಗಿಂತ ಫಾಸ್ಟ್ ಇರಲಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೆ.16 ಹಾಗೂ 17ರಂದು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ(DME) ಕಾಮಗಾರಿಯನ್ನು ಪರಿಶೀಲನೆ ಮಾಡಿದ್ದು ಈ ಎಕ್ಸ್‌ಪ್ರೆಸ್ ವೇ ಕೆಲಸವು ಮಾರ್ಚ್ 2023ಕ್ಕೆ ಮುಗಿಸಲು ಯೋಜಿಸಲಾಗಿದೆ. ಈ ರಸ್ತೆಯು ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಗುಜರಾತ್ ರಾಜ್ಯದ ಮೂಲಕ ಹಾದು ಹೋಗಲಿದೆ. 98,000 ಕೋಟಿಯಲ್ಲಿ ಸಿದ್ಧವಾಗುತ್ತಿರುವ ಈ ರಸ್ತೆಯು 1380 ಕಿಮೀ ಇರಲಿದೆ.
ದಿಲ್ಲಿ- ಮುಂಬೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಗಡ್ಕರಿ 170 ಕಿ.ಮೀ. ವೇಗದ ಟೆಸ್ಟ್ ಡ್ರೈವ್!
ದೆಹಲಿ-ಮುಂಬೈ ಜೋಡಿಸುವ ರಸ್ತೆ ಸಿದ್ಧವಾದರೆ ಇದು ಭಾರತದ ಅತ್ಯಂತ ಉದ್ದದ ಎಕ್ಸ್‌ಪ್ರೆಸ್ ವೇ ಆಗಲಿದೆ. ಎಕ್ಸ್‌ಪ್ರೆಸ್‌ವೇ ದೆಹಲಿಯ ನಗರ ಕೇಂದ್ರಗಳನ್ನು ದೆಹಲಿಯ-ಫರಿದಾಬಾದ್-ಸೋಹ್ನಾ ವಿಭಾಗದ ಮೂಲಕ ಕಾರಿಡಾರ್‌ನಿಂದ ಜೆವಾರ್ ವಿಮಾನ ನಿಲ್ದಾಣ ಮತ್ತು ಜವಾಹರಲಾಲ್ ನೆಹರು ಬಂದರಿನಿಂದ ಮುಂಬಯಿಗೆ ಮುಂಬೈನ ಸ್ಪರ್ ಮೂಲಕ ಸಂಪರ್ಕಿಸುತ್ತದೆ ಎಂದು ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.
ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ ಆರು ರಾಜ್ಯಗಳ ಮೂಲಕ ಹಾದುಹೋಗುವ ಎಕ್ಸ್‌ಪ್ರೆಸ್‌ವೇ ಆರ್ಥಿಕ ಕೇಂದ್ರಗಳಾದ ಜೈಪುರ, ಕಿಶನ್‌ಗರ್, ಅಜ್ಮೇರ್, ಕೋಟ, ಚಿತ್ತೋರ್‌ಗರ್, ಉದಯಪುರ, ಭೋಪಾಲ್, ಉಜ್ಜಯಿನಿ, ಇಂದೋರ್ ನಡುವೆ ಸಂಪರ್ಕವನ್ನು ಸುಧಾರಿಸುತ್ತದೆ. ಅಹಮದಾಬಾದ್, ವಡೋದರಾ, ಸೂರತ್ ಲಕ್ಷಾಂತರ ಜನರಿಗೆ ಆರ್ಥಿಕವಾಗಿ ಬೆಳೆಯಲು ಅವಕಾಶವಾಗುತ್ತದೆ.
ದೆಹಲಿ - ಮುಂಬೈ ಎಕ್ಸ್‌ಪ್ರೆಸ್ ವೇ ಕುರಿತ ಪ್ರಮುಖ ವಿಚಾರಗಳಿವು :
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ