ಲ್ಯಾಂಡಿಂಗ್‌ಗೆ ಕೆಲವೇ ಕ್ಷಣ ಮುನ್ನ ಮಿಸೈಲ್ ದಾಳಿ, ಏರ್ ಇಂಡಿಯಾ ವಿಮಾನ ಡೈವರ್ಟ್

Published : May 04, 2025, 05:19 PM IST
ಲ್ಯಾಂಡಿಂಗ್‌ಗೆ ಕೆಲವೇ ಕ್ಷಣ ಮುನ್ನ ಮಿಸೈಲ್ ದಾಳಿ, ಏರ್ ಇಂಡಿಯಾ ವಿಮಾನ ಡೈವರ್ಟ್

ಸಾರಾಂಶ

ಪ್ರಯಾಣಿಕರನ್ನು ಹೊತ್ತು ಸಾಗಿದ ಏರ್ ಇಂಡಿಯಾ ವಿಮಾನ ಇನ್ನೇನು ಲ್ಯಾಂಡಿಂಗ್‌ಗೆ ಕೆಲ ಕ್ಷಣಗಳು ಬಾಕಿ ಇತ್ತು. ಈ ವೇಳೆ ಮಿಸೈಲ್ ದಾಳಿ ನಡೆದಿದೆ. ತುರ್ತು ಪರಿಸ್ಥಿತಿ ಪರಿಣಾಮ ಏರ್ ಇಂಡಿಯಾ ವಿಮಾನವನ್ನು ಬೇರೆಡೆಗೆ ಡೈವರ್ಟ್ ಮಾಡಿದ ಘಟನೆ ನಡೆದಿದೆ. 

ನವದೆಹಲಿ(ಮೇ.04) ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಭೀತಿ ಒಂದೆಡೆಯಾಗಿದ್ದರೆ, ಮತ್ತೊಂದೆಡೆ ಇಸ್ರೇಲ್ ಹಮಾಸ್, ಹೌಥಿಸ್ ಸೇರಿದಂತೆ ಹಲವು ಉಗ್ರರ ವಿರುದ್ಧ ಹೋರಾಡುತ್ತಿದೆ. ಇತ್ತ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಲೇ ಇದೆ. ಇದರ ನಡುವೆ ವಿಮಾನ ಪ್ರಯಾಣ ಸವಾಲಾಗಿದೆ. ಇದೀಗ ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ತೆರಳಿದ ವಿಮಾನ ಇನ್ನೇನು ಲ್ಯಾಂಡಿಂಗ್‌ಗೆ ಕೆಲ ಕ್ಷಣಗಳು ಬಾಕಿ ಇರುವಂತೆ ಮಿಸೈಲ್ ದಾಳಿ ನಡೆದಿದೆ. ಇದರ ಪರಿಣಾಮ ಏರ್ ಇಂಡಿಯಾ ವಿಮಾನವನ್ನು ಬೇರೇಡೆಗೆ ಡೈವರ್ಟ್ ಮಾಡಿದ ಘಟನೆ ನಡೆದಿದೆ. ಹೌದು, ನವದೆಹಲಿಯಿಂದ ಇಸ್ರೇಲ್‌‌ನ ಟೆಲ್ ಅವೀವ್ ನಗರಕ್ಕೆ ತೆರಳಿದ ಏರ್ ಇಂಡಿಯಾ ವಿಮಾನ ಲ್ಯಾಡಿಂಗ್ ಮುನ್ನ ಇಸ್ರೇಲ್ ಮೇಲೆ ಹೌಥಿಸ್ ಉಗ್ರರು ದಾಳಿ ಮಾಡಿದ್ದಾರೆ. ಇದರ ಪರಿಣಾಮ ಏರ್ ಇಂಡಿಯಾ ವಿಮಾನವನ್ನು ಬೇರೇಡೆಗೆ ಮಾರ್ಗ ಬದಲಾಯಿಸಿದ ಘಟನೆ ನಡೆದಿದೆ.

ವಿಮಾನ ನಿಲ್ದಾಣದ ಪಕ್ಕದಲ್ಲೇ ಮಿಸೈಲ್ ದಾಳಿ
ಪ್ರಯಾಣಿಕರನ್ನು ಹೊತ್ತು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನ ಇಸ್ರೇಲ್‌ನ ಟೆಲ್ ಅವೀವ್ ನಗರಕ್ಕೆ ಪ್ರಯಾಣ ಬೆಳೆಸಿತ್ತು. ಸದ್ಯ ಪಾಕಿಸ್ತಾನ ವಾಯುಪ್ರದೇಶಗಳು ನಿರ್ಬಂಧಿಸಿರುವ ಕಾರಣ ಏರ್ ಇಂಡಿಯಾ ಸುತ್ತಿ ಬಳಸಿ ಪ್ರಯಾಣ ನಡೆಸಿತ್ತು. ಏರ್ ಇಂಡಿಯಾ ವಿಮಾನ ಜೋರ್ಡನ್ ದೇಶದ ವಾಯು ಪ್ರದೇಶ ದಾಟಿ ಇಸ್ರೇಲ್‌ನತ್ತ ತೆರಳುತ್ತಿದ್ದಂತೆ ಹೌಥಿಸ್ ಉಗ್ರರು ಇಸ್ರೇಲ್‌ನ ಟೆಲ್ ಅವೀವ್ ಸಮೀಪದ ಬೆಲ್ ಗುರಿಯಾನ್ ವಿಮಾನ ನಿಲ್ದಾಣ ಪಕ್ಕದಲ್ಲಿ ಮಿಸೈಲ್ ದಾಳಿ ನಡೆಸಿದ್ದಾರೆ. 

ಭಾರತ ಪಾಕ್ ಗಲಾಟೆಯಿಂದ ಆಫ್ಘಾನಿಸ್ತಾನಕ್ಕೆ ನಷ್ಟ, ಯಾಕೆ ಗೊತ್ತಾ?

ಏರ್ ಇಂಡಿಯಾ AI139 ವಿಮಾನ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಒಂದು ಗಂಟೆ ಬಾಕಿ ಇತ್ತು. ಇಸ್ರೇಲ್‌ಗೆ ಗಡಿಗೆ ತಾಗಿಕೊಂಡಿರುವ ಜೋರ್ಡನ್ ವಾಯು ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಸಾಗುತ್ತಿತ್ತು. ಇದೇ ವೇಳೆ ಹೌಥಿಸ್ ಉಗ್ರರು ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದ್ದರು. ಹೀಗಾಗಿ ಇಸ್ರೇಲ್‌ನಲ್ಲಿ ಅದರಲ್ಲೂ ಪ್ರಮುಖವಾಗಿ ಟೆಲ್ ಅವೀವ್ ಸೇರಿದಂತೆ ಕೆಲೆವೆಡೆ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.ಹೀಗಾಗಿ ತಕ್ಷಣವೇ ಭಾರತದ ಏರ್ ಇಂಡಿಯಾ ವಿಮಾನಕ್ಕೆ ಸೂಚನೆ ನೀಡಲಾಗಿದೆ.

ಅಬು ಧಾಬಿಯಲ್ಲಿ ವಿಮಾನ ಲ್ಯಾಂಡಿಂಗ್
ಇಸ್ರೇಲ್ ಪರಿಸ್ಥಿತಿ ಭೀಕರವಾಗಿದ್ದ ಕಾರಣ ಏರ್ ಇಂಡಿಯಾ ವಿಮಾನಕ್ಕೆ ಸ್ಪಷ್ಟ ಸೂಚನೆ ನೀಡಲಾಗಿತ್ತು. ಭಾರತದ ವಿಮಾನಯಾನ ಕಂಟ್ರೋಲ್ ರೂಂ ಅಬು ಧಾಬಿ ಸಂಪರ್ಕಿಸಿ ಮಾಹಿತಿ ನೀಡಿದೆ. ಬಳಿಕ ಏರ್ ಇಂಡಿಯಾ ವಿಮಾನವನ್ನು ಅಬುಧಾಪಿ ವಿಮಾನ  ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದರಂತೆ ಜೋರ್ಡಾನ್ ವಾಯು ಪ್ರದೇಶದಿಂದ ಭಾರತದ ಏರ್ ಇಂಡಿಯಾ ವಿಮಾನ ನೇರವಾಗಿ ಅಬು ಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿತ್ತು. ಟೆಲ್ ಅವೀವ್‌ಗೆ ಸದ್ಯಕ್ಕೆ ಪ್ರಯಾಣ ಬೆಳೆಸುವಂತಿಲ್ಲ. ಹೀಗಾಗಿ ಏರ್ ಇಂಡಿಯಾ ವಿಮಾನ ಅಬುಧಾಬಿನಿಂದ ನವದೆಹಲಿಗೆ ಮರಳಿದೆ. 

ಮೇ.6ರ ವರೆಗೆ ಟೆಲ್ ಅವೀವ್ ವಿಮಾನ ಪ್ರಯಾಣ ರದ್ದು
ಟೆಲ್ ಅವೀವ್ ಸಮೀಪದಲ್ಲಿ ಉಗ್ರರು ಮಿಸೈಲ್ ದಾಳಿ ನಡೆಸಿರುವ ಕಾರಣ ನವ ದೆಹಲಿ ಟೆಲ್ ಅವೀವ್ ವಿಮಾನ ಪ್ರಯಾಣ ರದ್ದು ಮಾಡಲಾಗಿದೆ. ಮೇ.6ರ ವರೆಗೆ ವಿಮಾನ ಪ್ರಯಾಣ ರದ್ದು ಮಾಡಲಾಗಿದೆ. 

500 ಕೋಟಿ ರೂ ಲಾಟರಿ ಹೊಡೆದ ಖುಷಿಯಲ್ಲಿ ಆಕಾಶದಲ್ಲೇ ರಾಜೀನಾಮೆ ನೀಡಿದ ಗಗನಸಖಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?