ಮೆಟ್ರೋ ರೈಲು ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ತಪಾಸಣೆ, ಗಾಬರಿಯಾದ ಪ್ರಯಾಣಿಕರು!

By BK Ashwin  |  First Published Aug 14, 2023, 8:16 PM IST

ದೆಹಲಿಯ ಕಾಶ್ಮೀರ್ ಗೇಟ್ ಮೆಟ್ರೋ ನಿಲ್ದಾಣಕ್ಕೆ ಭಾನುವಾರ .ಬಾಂಬ್ ಬೆದರಿಕೆ ಕರೆ ಬಂದಿದ್ದು, ಭದ್ರತಾ ಪಡೆಗಳಲ್ಲಿಯೂ ಆತಂಕ ಹುಟ್ಟಿಸಿದೆ. 


ನವದೆಹಲಿ (ಆಗಸ್ಟ್‌ 14, 2023): ದೇಶದ 77ನೇ ಸ್ವಾತಂತ್ರೋತ್ವಸಕ್ಕೆ ಭರ್ಜರಿ ತಯಾರಿಗಳು ನಡೀತಿದ್ರೆ, ಇನ್ನೊಂದೆಡೆ ಆತಂಕಕಾರಿ ಅಥವಾ ಬೆದರಿಕೆ ಕರೆಗಳೂ ಹೆಚ್ಚಾಗ್ತಿವೆ. ಸ್ವಾತಂತ್ರ್ಯ ದಿನಾಚರಣೆಗೆ ಪಾಕ್‌ ಉಗ್ರರು ದಾಳಿ ನಡೆಸುವ ಸಂಚಿದ್ದು, ಈ ಹಿನ್ನೆಲೆ ದೆಹಲಿಯ ಕೆಂಪು ಕೋಟೆಯ ಸುತ್ತಮುತ್ತ ಪೊಲೀಸರು ಹೈ ಅಲರ್ಟ್‌ ಘೋಷಿಸಿದ ವರದಿಯಾಗಿತ್ತು. ಇದೇ ರೀತಿ, ಮೆಟ್ರೋ ನಿಲ್ದಾಣವೊಂದಕ್ಕೂ ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆ, ಪೊಲೀಸರು ತೀವ್ರ ತಪಾಸಣೆ ನಡೆಸಿದ್ದು, ಈ ವೇಳೆ ಠಾಣೆಯಲ್ಲಿದ್ದ ಪ್ರಯಾಣಿಕರು ಕೆಲ ಕಾಲ ಗಾಬರಿಗೊಂಡಿದ್ದರು ಎಂದು ತಿಳಿದುಬಂದಿದೆ.

ಈ ಬೆದರಿಕೆ ಕರೆ ಬಂದಿರುವುದು ಬೆಂಗಳೂರಿನ ನಮ್ಮ ಮೆಟ್ರೋ ರೈಲು ನಿಲ್ದಾಣಕ್ಕಲ್ಲ. ರಾಷ್ಟ್ರ ರಾಜಧಾನಿಯಲ್ಲೇ. ದೆಹಲಿಯ ಕಾಶ್ಮೀರ್ ಗೇಟ್ ಮೆಟ್ರೋ ನಿಲ್ದಾಣಕ್ಕೆ ಭಾನುವಾರ .ಬಾಂಬ್ ಬೆದರಿಕೆ ಕರೆ ಬಂದಿದ್ದು, ಭದ್ರತಾ ಪಡೆಗಳಲ್ಲಿಯೂ ಆತಂಕ ಹುಟ್ಟಿಸಿತ್ತು. ಆದರೆ, ಈ ಬೆದರಿಕೆ ಕರೆ ಸುಳ್ಳು ಕರೆಯಾಗಿ ಪರಿಣಮಿಸಿದ್ದು, ಆ ವೇಳೆ ಪಾನಮತ್ತನಾಗಿದ್ದ ಎನ್ನಲಾದ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: ಡೆಲ್ಲಿ ಮೆಟ್ರೋ ಹಾಗೂ ಪ್ಲಾಟ್‌ಫಾರ್ಮ್‌ ಮೇಲೆ ಬಾಲಿವುಡ್‌ ಹಾಡಿಗೆ ಕುಣಿದ ಯುವತಿ: ದಯವಿಟ್ಟು ನಿಲ್ಲಿಸಿ ಎಂದ ನೆಟ್ಟಿಗರು!

ರಾಷ್ಟ್ರ ರಾಜಧಾನಿಯಾದ್ಯಂತ ವಿಶೇಷವಾಗಿ ದೆಹಲಿ ಮೆಟ್ರೋ ನಿಲ್ದಾಣಗಳಂತಹ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆಯನ್ನು ಬಲಪಡಿಸಿದಾಗ ಸ್ವಾತಂತ್ರ್ಯ ದಿನಾಚರಣೆಯ ಎರಡು ದಿನಗಳ ಮೊದಲು ಈ ಘಟನೆ ಸಂಭವಿಸಿದೆ. ದೆಹಲಿ ಮೆಟ್ರೋದ ಕಾಶ್ಮೀರ್ ಗೇಟ್ ನಿಲ್ದಾಣದಲ್ಲಿ ಬಾಂಬ್ ಇದೆ ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ನಿಯಂತ್ರಣ ಕೊಠಡಿಗೆ ಸಂಜೆ ತಡವಾಗಿ ಕರೆ ಬಂದಿತ್ತು. ಮೆಟ್ರೋ ಪೊಲೀಸರು ಮತ್ತು ಸಿಐಎಸ್‌ಎಫ್ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಈ ಹಿನ್ನೆಲೆ ಜನನಿಬಿಡ ನಿಲ್ದಾಣದಲ್ಲಿ ಆತಂಕ ಮೂಡಿಸಿತ್ತು. ಪ್ರಯಾಣಿಕರು ಸಹ ತಪಾಸಣೆಯ ಪ್ರಮಾಣಕ್ಕೆ  ಗಾಬರಿಯಾಗಿದ್ರು. 

ಸಿಐಎಸ್‌ಎಫ್ ಪಡೆಗಳು ಮೆಟ್ರೋ ನಿಲ್ದಾಣದ ವ್ಯಾಪಕ ತಪಾಸಣೆಯ ನಂತರ, ಏನೂ ಕಂಡುಬಂದಿಲ್ಲ, ಮತ್ತು ಬೆದರಿಕೆ ಕರೆ ಸುಳ್ಳು ಎಂದು ತಿಳಿದುಬಂದಿದೆ. ನಂತರ ಪೊಲೀಸರು ಕರೆ ಮಾಡಿದವರನ್ನು ಪತ್ತೆಹಚ್ಚಲು ಪ್ರಾರಂಭಿಸಿದರು, ಅವರನ್ನು ಇಂದು ಕಾಶ್ಮೀರ್ ಗೇಟ್ ಪ್ರದೇಶದಿಂದ ಬಂಧಿಸಲಾಯಿತು ಎಂದೂ ಪೊಲೀಸರು ತಿಳಿಸಿದ್ದಾರೆ. ಸಿಐಎಸ್‌ಎಫ್ ಕಂಟ್ರೋಲ್ ರೂಂಗೆ ಕರೆ ಮಾಡಿದಾಗ 26 ವರ್ಷದ ರಾಹುಲ್ ಎಂಬಾತ ಕುಡಿದು ಟೈಟಾಗಿದ್ದ ಎಂದು ವರದಿಯಾಗಿದೆ. ಆತ ಉತ್ತರ ಪ್ರದೇಶದ ಜೌನ್‌ಪುರ ಮೂಲದವರು ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲೂ ಮದ್ಯ ಬಾಟಲಿ ಸಾಗಣೆಗೆ ಗ್ರೀನ್‌ ಸಿಗ್ನಲ್‌? ಪೀಕ್ ಅವರ್‌ನಲ್ಲೇ ಕೈಕೊಟ್ಟ ಮೆಟ್ರೋ; ಪ್ರಯಾಣಿಕರ ಪರದಾಟ

ಕಾಶ್ಮೀರ್ ಗೇಟ್ ಮೆಟ್ರೋ ನಿಲ್ದಾಣವು ದೆಹಲಿಯ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಒಂದಾಗಿದೆ. ಇದು, ದೆಹಲಿ ಮೆಟ್ರೋ ನೆಟ್‌ವರ್ಕ್‌ನಲ್ಲಿ ಪ್ರಮುಖ ಇಂಟರ್‌ಚೇಂಜ್ ಆಗಿದ್ದು, ಹಳದಿ, ನೇರಳೆ ಮತ್ತು ಕೆಂಪು ಮಾರ್ಗಗಳಿಗೆ ಪ್ರಮುಖ ಇಂಟರ್‌ಚೇಂಜ್ ಆಗಿದೆ. ಈ ಹಿನ್ನೆಲೆ ಪ್ರತಿ ದಿನ ಲಕ್ಷಗಟ್ಟಲೆ ಪ್ರಯಾಣಿಕರು ದೆಹಲಿಯ ಕಾಶ್ಮೀರ್‌ ಗೇಟ್‌ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ರೈಲುಗಳನ್ನು ಬದಲಾಯಿಸುತ್ತಾರೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿ ಜನರೇ ಎಚ್ಚರ: ಮೆಟ್ರೋ ನಿಲ್ದಾಣದ ಬಳಿ ಸುಪ್ರೀಂಕೋರ್ಟ್‌ ವಕೀಲನ ಮೇಲೆ ಹಲ್ಲೆ, ಫೋನ್‌ ದೋಚಿದ ದರೋಡೆಕೋರರು

click me!