ಸ್ಮೃತಿ ಇರಾನಿ '5 ಎಕ್ಸ್‌ಎಲ್‌ ಕಮರ್ಷಿಯಲ್‌ ಸಿಲಿಂಡರ್‌', ಆರ್‌ಜೆಡಿ ನಾಯಕಿ ಸಾರಿಕಾ ಪಾಸ್ವಾನ್‌!

Published : Aug 14, 2023, 07:39 PM ISTUpdated : Aug 14, 2023, 07:40 PM IST
ಸ್ಮೃತಿ ಇರಾನಿ '5 ಎಕ್ಸ್‌ಎಲ್‌ ಕಮರ್ಷಿಯಲ್‌ ಸಿಲಿಂಡರ್‌', ಆರ್‌ಜೆಡಿ ನಾಯಕಿ ಸಾರಿಕಾ ಪಾಸ್ವಾನ್‌!

ಸಾರಾಂಶ

ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ನೀಡಿದ ಫ್ಲೈಯಿಂಗ್‌ ಕಿಸ್‌ ತಣ್ಣಗಾಗುವಂತೆ ಕಾಣುತ್ತಿಲ್ಲ. ರಾಹುಲ್‌ ಗಾಂಧಿಗೆ ಬೆಂಬಲಿಸಿ ಮಹಿಳಾ ನಾಯಕಿರುವ ಪ್ರತಿಕ್ರಿಯೆ ನೀಡುತ್ತಿರುವ ಹೊತ್ತಿನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ.

ನವದೆಹಲಿ (ಆ.14): ಲೋಕಸಭೆ ಅಧಿವೇಶನದ ವೇಳೆ ರಾಹುಲ್‌ ಗಾಂಧಿ ನೀಡಿದ್ದಾರೆ ಎನ್ನಲಾದ ಫ್ಲೈಯಿಂಗ್‌ ಕಿಸ್‌ ವಿವಾದಕ್ಕಿಂತ ಹೆಚ್ಚಾಗಿ ರಾಹುಲ್‌ಗೆ ಬೆಂಬಲ ನೀಡಿ ಬರುತ್ತಿರುವ ಹೇಳಿಕೆಗಳೇ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕಿ ಹಾಗೂ ಸ್ಮೃತಿ ಇರಾನಿ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಸದನದಲ್ಲಿಯೇ ಫ್ಲೈಯಿಂಗ್‌ ಕಿಸ್‌ ನೀಡಿದ್ದಾರೆ ಎಂದು ಆರೋಪ ಮಾಡಿದ್ದರು. ಇತ್ತೀಚೆಗೆ ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್‌, ಸ್ಮೃತಿ ಇರಾನಿ ಆರೋಪವನ್ನು ಟೀಕೆ ಮಾಡುತ್ತಾ, ರಾಹುಲ್‌ ಗಾಂಧಿಗೆ ದೇಶದಲ್ಲಿ ಹುಡಿಗಿಯರಿಗೆ ಬರವಿಲ್ಲ. ಅವರು ಯಾಕೆ 50 ವರ್ಷದ ಮುದುಕಿಗೆ ಫ್ಲೈಯಿಂಗ್‌ ಕಿಸ್‌ ನೀಡ್ತಾರೆ? ಎಂದು ಪ್ರಶ್ನೆ ಮಾಡಿದ್ದರು. ಈಗ ಲಾಲೂ ಪ್ರಸಾದ್‌ ಯಾದವ್‌ ಅವರ ಆರ್‌ಜೆಡಿ ಪಕ್ಷದ ನಾಯಕಿ ಹಾಗೂ ವಕ್ತಾರೆ ಸಾರಿಕಾ ಪಾಸ್ವಾನ್‌, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸ್ಮೃತಿ ಇರಾನಿಯನ್ನು ಅವರು 5 ಎಕ್ಸ್‌ ಎಲ್‌ ಕಮರ್ಷಿಯಲ್‌ ಸಿಲಿಂಡರ್‌ಗೆ ಹೋಲಿಕೆ ಮಾಡಿ ಕಾಮೆಂಟ್‌ ಮಾಡಿದ್ದಾರೆ. 'ರಾಹುಲ್‌ ಗಾಂಧಿ 5 ಎಕ್ಸ್‌ ಎಲ್‌ ಸಿಲಿಂಡರ್‌ಗೆ ಯಾಕೆ ಫ್ಲೈಯಿಂಗ್‌ ಕಿಸ್‌ ನೀಡ್ತಾರೆ, ಅವರಿಗೆ ಬಾಲಿವುಡ್‌-ಹಾಲಿವುಡ್‌ನಲ್ಲಿಯೇ ಬೇಕಾದಷ್ಟು ಅವಕಾಶಗಳಿವೆ' ಎಂದು ಕಾಮೆಂಟ್‌ ಮಾಡಿದ್ದಾರೆ.

ಬಾಲಿವುಡ್‌ ಹೀರೋಯಿನ್‌ಗಳೇ ರಾಹುಲ್‌ ಗಾಂಧಿ ಜೊತೆ ನಟಿಸಲು ಸಿದ್ಧರಿದ್ದಾರೆ. ಅವರಿಗೆ ದೇಶದಲ್ಲಿ ಹುಡುಗಿಯರ ಬರವಿಲ್ಲ ಎಂದು ಸಾರಿಕಾ ಪಾಸ್ವಾನ್ ಮಾತನಾಡಿದ್ದಾರೆ. 'ರಾಹುಲ್‌ ಗಾಂಧಿ ತಮಗೆ ಫ್ಲೈಯಿಂಗ್‌ ಕಿಸ್‌ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದು ಕೇಳಿಯೇ ನನಗೆ ನಗು ಬರುತ್ತಿದೆ. ಅವರ ದಿನ 5 ಎಕ್ಸ್‌ ಎಲ್‌ ಸಿಲಿಂಡರ್‌ಗೆ ಫ್ಲೈಯಿಂಗ್‌ ಕಿಸ್‌ ನೀಡುವಷ್ಟು ಕೆಟ್ಟದಾಗಿಲ್ಲ. ರಾಹುಲ್‌ ಗಾಂಧಿಗೆ ಹಾಲಿವುಡ್‌-ಬಾಲಿವುಡ್‌ನಿಂದ ಪ್ರಪೋಸಲ್‌ಗಳು ಬರುತ್ತಿವೆ. ಹಾಗಿದ್ದರೂ, ಲೋಕಸಭೆಯ ಗಾಳಿಯಲ್ಲಿ ಹಾರುತ್ತಿದ್ದ ರಾಹುಲ್‌ ಗಾಂಧಿ ನೀಡಿದ ಫ್ಲೈಯಿಂಗ್‌ ಕಿಸ್‌ಅನ್ನು  ಸ್ಮೃತಿ ಇರಾನಿ ಹಿಡಿದುಕೊಂಡಿದ್ದೇಕೆ?, ರಾಹುಲ್‌ ಗಾಂಧಿ ನೀಡಿದ ಫ್ಲೈಯಿಂಗ್‌ ಕಿಸ್‌ ಅವರ ಬಳಿಯೇ ಬಂದಿತ್ತು ಅನ್ನೋದನ್ನು ಅವರು ಸಾಬೀತು ಮಾಡ್ತಾರಾ?' ಎಂದು ಪ್ರಶ್ನೆ ಮಾಡಿದ್ದಾರೆ.

ಇಡೀ ಪ್ರಕರಣ ಬಿಜೆಪಿಯ ಕೃತ್ಯ ಎಂದಿರುವ ಸಾರಿಕಾ ಪಾಸ್ವಾನ್‌, 'ಬಿಜೆಪಿ ಹೇಳಿದ್ದನ್ನೇ ಸ್ಮೃತಿ ಇರಾನಿ ಮಾಡುತ್ತಿದ್ದಾರೆ. ರಾಹುಲ್‌ ಗಾಂಧಿ ಜನಪ್ರಿಯತೆ ಹೆಚ್ಚುತ್ತಿದೆ. . ಪಾಟ್ನಾಗೆ ಭೇಟಿ ನೀಡಿದ ಸಂದರ್ಭದಲ್ಲೂ ರಾಹುಲ್ ಗಾಂಧಿ ಪಾಟ್ನಾ ಮಹಿಳಾ ಕಾಲೇಜಿಗೆ ಆಗಮಿಸಿದಾಗ ಕಾಂಗ್ರೆಸ್ ನಾಯಕನ ಬಗ್ಗೆ ಹುಡುಗಿಯರಲ್ಲಿ ಕ್ರೇಜ್ ಇತ್ತು. ಅಷ್ಟೇ ಅಲ್ಲ ಬಾಲಿವುಡ್ ನಾಯಕಿಯರಿಂದ ರಾಹುಲ್‌ಗೆ ಮದುವೆ ಆಫರ್‌ಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಮುದುಕಿಗೆ ರಾಹುಲ್‌ ಗಾಂಧಿ ಯಾಕೆ ಫ್ಲೈಯಿಂಗ್‌ ಕಿಸ್‌ ನೀಡ್ತಾರೆ? ದೇಶದಲ್ಲೇನು ಹೆಣ್ಮಕ್ಕಳಿಗೆ ಬರ ಇದ್ಯಾ?: ಕಾಂಗ್ರೆಸ್‌ ಶಾಸಕಿ!

ಸಾರಿಕಾ ಪಾಸ್ವಾನ್ ಆರ್‌ಜೆಡಿ ನಾಯಕಿ. ಅವರು ಆರ್‌ಜೆಡಿಯ ಮಹಿಳಾ ವಕ್ತಾರರು ಮತ್ತು ರಾಜ್ಯ ಕಾರ್ಯದರ್ಶಿಯೂ ಆಗಿದ್ದಾರೆ. ಸಾರಿಕಾ ಪಕ್ಷದಲ್ಲಿ ಮಹಿಳೆಯರನ್ನು ಪ್ರತಿನಿಧಿಸಿದ್ದಾರೆ. ಅವರು ಟಿವಿ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಆರ್‌ಜೆಡಿ ಪರವಾಗಿ ಮಾತನಾಡುತ್ತಾರೆ. ರಾಹುಲ್ ಗಾಂಧಿ ಅವರ 'ಫ್ಲೈಯಿಂಗ್ ಕಿಸ್' ಪ್ರಕರಣದ ಬಗ್ಗೆ ಸಾರಿಕಾ ಪಾಸ್ವಾನ್ ನೀಡಿರುವ ಪ್ರತಿಕ್ರಿಯೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಸ್ವತಃ ಮಹಿಳೆಯಾಗಿರುವ ಆಕೆ, ಸ್ಮೃತಿ ಇರಾನಿಯನ್ನು ಸಿಲಿಂಡರ್‌ಗೆ ಹೋಲಿಸಿದ್ದು ಎಷ್ಟು ಸರಿ ಎನ್ನುವುದರ ಬಗ್ಗೆ ಚರ್ಚೆಯಾಗುತ್ತಿದೆ.

Watch: ಲೋಕಸಭೆಯಲ್ಲೇ ಮಹಿಳಾ ಸಂಸದರಿಗೆ ಫ್ಲೈಯಿಂಗ್‌ ಕಿಸ್‌ ನೀಡಿದ ರಾಹುಲ್‌ ಗಾಂಧಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್