ದಿಲ್ಲಿಯಲ್ಲಿ ಮತ್ತೆ ಸಮ-ಬೆಸ ಸಂಚಾರ; ಮಾಲಿನ್ಯ ತಡೆಗೆ ದೆಹಲಿ ಸರ್ಕಾರ ಪ್ರಯೋಗ

By Kannadaprabha News  |  First Published Nov 5, 2019, 9:36 AM IST

 ಮಾಲಿನ್ಯ ತಡೆಗೆ ದೆಹಲಿ ಸರ್ಕಾರದಿಂದ ಹೊಸ ಪ್ರಯೋಗ | ಕೇಜ್ರಿವಾಲ್‌ ಕಾರ್‌ ಪೂಲಿಂಗ್‌, ಸೈಕಲ್‌ನಲ್ಲಿ ಬಂದ ಡಿಸಿಎಂ | ನವೆಂಬರ್‌ 05 ರಿಂದ 15 ರವರೆಗೆ ಇದು ಜಾರಿಯಲ್ಲಿರಲಿದೆ.


ನವದೆಹಲಿ (ನ. 05):  ದಿಲ್ಲಿ ಹಾಗೂ ಸುತ್ತಮುತ್ತ ವಾಯುಮಾಲಿನ್ಯ ಮಿತಿ ಮೀರಿದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ‘ಸಮ-ಬೆಸ ಸಂಚಾರ ವ್ಯವಸ್ಥೆ’ಯನ್ನು ಮರುಜಾರಿ ಮಾಡಲಾಗಿದೆ. ನವೆಂಬರ್‌ 04 ರಿಂದ 15 ರವರೆಗೆ ಇದು ಜಾರಿಯಲ್ಲಿರಲಿದೆ. 

ಸಮಸಂಖ್ಯೆಯ ನೋಂದಣಿ ಸಂಖ್ಯೆಯಿಂದ ಅಂತ್ಯವಾಗುವ ವಾಹನಗಳು ಸಮಸಂಖ್ಯೆಯ ದಿನಾಂಕದಂದು ಹಾಗೂ ಬೆಸಸಂಖ್ಯೆಯ ನೋಂದಣಿ ಸಂಖ್ಯೆಯಿಂದ ಅಂತ್ಯವಾಗುವ ವಾಹನಗಳು ಬೆಸಸಂಖ್ಯೆ ದಿನಾಂಕದಂದು ಸಂಚರಿಸಬೇಕು ಎಂಬುದೇ ಈ ನಿಯಮ.

Tap to resize

Latest Videos

ಶಿವಸೇನೆಗೆ ಸೋನಿಯಾ ಶಾಕ್; ಎನ್ ಸಿಪಿ, ಶಿವಸೇನೆ ಜತೆಗೆ ಒಪ್ಪಂದ ಸೋನಿಯಾ ಗಾಂಧಿ

ಮೊದಲ ದಿನ ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಈ ವ್ಯವಸ್ಥೆಗೆ ದಿಲ್ಲಿಗರಿಂದ ಶೇ.100ರಷ್ಟುಪ್ರತಿಕ್ರಿಯೆ ವ್ಯಕ್ತವಾಗಿದೆ. ನ.15ರವರೆಗೆ ಮಾಲಿನ್ಯ ತಡೆಗಟ್ಟಲು ಈ ಕ್ರಮ ಜರುಗಿಸಲಾಗಿದ್ದು, ಸಹಕರಿಸಬೇಕು ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮನವಿ ಮಾಡಿದರು.

ಅಲ್ಲದೆ, ಕೇಜ್ರಿವಾಲ್‌ ಅವರು ಸಚಿವ ಸತ್ಯೇಂದ್ರ ಜೈನ್‌ ಹಾಗೂ ಗೋಪಾಲ್‌ ರಾಯ್‌ ಜತೆ ಕಾರಿನಲ್ಲಿ ಸಚಿವಾಲಯಕ್ಕೆ ತೆರಳಿದರು. ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಕಚೇರಿಗೆ ಸೈಕಲ್‌ನಲ್ಲಿ ಹೋದರು. ಈ ಮೂಲಕ ಮಾಲಿನ್ಯ ತಡೆಗೆ ಅಳಿಲು ಸೇವೆ ಸಲ್ಲಿಸಿದರು.

ಸಮ-ಬೆಸ ಪಾಲಿಸದ ಬಿಜೆಪಿ, ಸಂಸದನಿಗೆ 4000 ರು. ದಂಡ

ಈ ನಡುವೆ ಕೇಜ್ರಿವಾಲ್‌ ಅವರ ಸಮ-ಬೆಸ ವ್ಯವಸ್ಥೆಗೆ ಬಿಜೆಪಿ ಸಂಸದ ವಿಜಯ್‌ ಗೋಯಲ್‌ ಬೆಲೆ ಕೊಡದೇ ಬೆಸ ಸಂಖ್ಯೆಯಿಂದ ಅಂತ್ಯವಾಗುವ ಕಾರನ್ನು ಡ್ರೈವ್‌ ಮಾಡಿದರು. ಪೊಲೀಸರಿಂದ ತಾವೇ 4 ಸಾವಿರ ರು. ದಂಡ ಹಾಕಿಸಿಕೊಂಡರು. ‘ಕೇಜ್ರಿವಾಲ್‌ ಅವರ ಸಮ-ಬೆಸ ವ್ಯವಸ್ಥೆ ಕೇವಲ ಪ್ರಚಾರಕ್ಕಾಗಿ. ಹೀಗಾಗಿ ನಾನು ಅವರ ನಿರ್ಧಾರವನ್ನು ಈ ರೀತಿ ಪ್ರತಿಭಟಿಸಿದ್ದೇನೆ’ ಎಂದು ಹೇಳಿದರು. ಆದರೆ ‘ಬಿಜೆಪಿಯವರು ಈ ರೀತಿ ಮಾಡಿ ಬರೀ ಸ್ಟಂಟ್‌ ಮಾಡುತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಟೀಕಿಸಿದ್ದಾರೆ.

click me!