ಕಾರು ಕಳವು ಕೇಸ್ ಬೆನ್ನತ್ತಿದ ಪೊಲೀಸರಿಗೆ ಶಾಕ್: ಅಲ್ಲಿತ್ತು ಹಲವು ಐಷಾರಾಮಿ ಕಾರುಗಳ ಬಿಡಿಭಾಗ!

By Anusha Kb  |  First Published Jan 30, 2023, 11:13 AM IST

ಕಾರೊಂದರ ಕಳವು ಪ್ರಕರಣ ಬೆನ್ನತ್ತಿ ಹೋದ ದಕ್ಷಿಣ ದೆಹಲಿಯ ಪೊಲೀಸರಿಗೆ ಶಾಕ್ ಕಾದಿತ್ತು.  ಪ್ರಕರಣ ಬೇಧಿಸ ಹೊರಟ ಪೊಲೀಸರ ತಂಡ ಮುಖಮೇಲ್‌ಪುರ ತಲುಪಿದಾಗ ಅಲ್ಲಿ ಪೊಲೀಸರಿಗೆ ಅಚ್ಚರಿ ಕಾದಿತ್ತು.


ನವದೆಹಲಿ:  ಕಾರೊಂದರ ಕಳವು ಪ್ರಕರಣ ಬೆನ್ನತ್ತಿ ಹೋದ ದಕ್ಷಿಣ ದೆಹಲಿಯ ಪೊಲೀಸರಿಗೆ ಶಾಕ್ ಕಾದಿತ್ತು.  ಪ್ರಕರಣ ಬೇಧಿಸ ಹೊರಟ ಪೊಲೀಸರ ತಂಡ ಮುಖಮೇಲ್‌ಪುರ ತಲುಪಿದಾಗ ಅಲ್ಲಿ ಪೊಲೀಸರಿಗೆ ಅಚ್ಚರಿ ಕಾದಿತ್ತು. ಕಾರಣ ಕಳ್ಳರ ಆ ಗೋದಾಮಿನಲ್ಲಿ ಕಳವಾದ ಹಲವು ಐಷಾರಾಮಿ ಕಾರುಗಳ ಬಿಡಿ ಭಾಗಗಳನ್ನು ಕಳಚಿ  ಪ್ರತ್ಯೇಕಗೊಳಿಸಿ ಇಡಲಾಗಿತ್ತು.  ಈ ಬಗ್ಗೆ ತನಿಖೆ ನಡೆಸಿದಾಗ ಐಷಾರಾಮಿ ಕಾರು ಕಳ್ಳರ ದೊಡ್ಡ ಜಾಲ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಈ ಜಾಲವನ್ನು ಮುನ್ನಡೆಸುತ್ತಿದ್ದ. ಪ್ರಸ್ತುತ ಆತ ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬುದು. 

ಈ ಜಾಲವೂ ದಕ್ಷಿಣ ದೆಹಲಿ ನೈಋತ್ಯ ದೆಹಲಿ, ಪಶ್ಚಿಮ ದೆಹಲಿ ಮುಂತಾದ ಪ್ರತಿಷ್ಠಿತ ಏರಿಯಾಗಳಿಂದ 50 ಕ್ಕೂ ಹೆಚ್ಚು ವಾಹನಗಳನ್ನು ಕದ್ದು ತಂದು ಇಲ್ಲಿ ಅವುಗಳ ಬಿಡಿ ಭಾಗಗಳನ್ನು ಬಿಚ್ಚಿ ಕಾರೊಂದು ಇತ್ತೆಂಬ ಸುಳಿವಿಲ್ಲದಂತೆ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.  36 ವರ್ಷದ ಲಕ್ಕಿ (Lucky)ಎಂಬಾಂತ ತನ್ನ ಸಂಬಂಧಿ ಅಶೀಶ್ ಮೇಲುಸ್ತುವಾರಿಯಲ್ಲಿ ಈ ಕಳ್ಳ ಮಾಲುಗಳ ಗೋದಾಮನ್ನು (Godown)ನಿಭಾಯಿಸುತ್ತಿದ್ದ. 21 ವರ್ಷದ ಸಫೀಕ್ ಹಾಗೂ 25 ವರ್ಷದ ಮಜೀಮ್ ಅಲಿ ಈ ಗೋದಾಮಿನಲ್ಲಿ ಕುಳಿತು ವಾಹನಗಳ  ಭಾಗಗಳನ್ನು ಬಿಚ್ಚಿ ಬೇರೆ ಬೇರೆ ಮಾಡುತ್ತಿದ್ದರು.  60 ವರ್ಷದ ರಾಮ್ ಸಂಜೀವನ್ (Rajeev sanjeevan) ಎಂಬುವವರು ಈ ಬಿಡಿ ಭಾಗಗಳನ್ನು ಗುಜರಿ ಮಾರಾಟಗಾರರಿಗೆ ಮಾರುವ ಕೆಲಸ ಮಾಡುತ್ತಿದ್ದರು. 

Latest Videos

undefined

ವೇಶ್ಯೆಯರ ಚಟಕ್ಕೆ ಕಾರು ಕದಿಯುತ್ತಿದ್ದ ಖದೀಮನ ಬಂಧನ..!

ಈ ಬಗ್ಗೆ ಮಾತನಾಡಿದ ನೈಋತ್ಯ ದೆಹಲಿಯ ಉಪ ಪೊಲೀಸ್ ಕಮೀಷನರ್ ಮನೋಜ್ ಸಿ, ಜನವರಿ 8 ರಂದು  ಆನಂದ್ ನಿಕೇತನ್‌ ನಿವಾಸಿಯೊಬ್ಬರು  ತಮ್ಮ ಎಸ್‌ಯುವಿ ಕಾರು ಕಳವು ಆಗಿರುವುದಾಗಿ ತಿಳಿಸಿದರು. ಹೀಗಾಗಿ ಇನ್ಸ್‌ಪೆಕ್ಟರ್ ಗೌತಮ್ (Gowtam)ನೇತೃತ್ಬದ ತಂಡವನ್ನು ರಚಿಸಲಾಗಿತ್ತು. ಅವರು ಪ್ರಕರಣದ ಪತ್ತೆಗಾಗಿ ನಗರದಲ್ಲಿದ್ದ 200 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಚೆಕ್ ಮಾಡಿದ್ದರು. ಅದರಲ್ಲಿ ಸಿಕ್ಕ ಸಣ್ಣ ಸುಳಿವು ಅವರನ್ನು ಅಲಿಪುರದ ಮಖಮೇಲ್‌ಪುರ (Mukhamelpura)ಕ್ಕೆ ಹೋಗುವಂತೆ ಮಾಡಿದೆ.  ಅಲ್ಲಿ ಈ ವಾಹನಗಳ ಬಿಡಿಭಾಗಗಳು ಗೋಡೌನ್ ಕಾಣಿಸಿಕೊಂಡಿದೆ ಎಂದು ಡಿಸಿಪಿ ಹೇಳಿದ್ದಾರೆ. 

ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರು ಕಳವಾದ ಕಾರಿನ ಬಿಡಿ ಭಾಗಗಳನ್ನು ಬಿಚ್ಚಿ ಕಾರನ್ನು ವಿರೂಪಗೊಳಿಸುತ್ತಿದ್ದರು.  ಈ ಸ್ಥಳದಿಂದ ವಾಹನಗಳ 50ಕ್ಕೂ ಹೆಚ್ಚು ಬಿಡಿ ಭಾಗಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಜಿನ್, ಗ್ಲಾಸ್, ಡೋರ್, ಚಸೀಸ್ ಸೇರಿದಂತೆ ಹಲವು ಬಿಡಿಭಾಗಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಅಶೀಶ್‌ಗಾಗಿ ಲಕ್ಕಿ ಎಂಬಾತ ಈ ಜಾಲವನ್ನು ಮುನ್ನಡೆಸುತ್ತಿದ್ದ, ಅಶೀಶ್ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಕಳ್ಳರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದ. ಈತನನ್ನು ಭೇಟಿಯಾಗಲು ಆಸ್ಪತ್ರೆಗೆ ಹೋಗುತ್ತಿದ್ದ ಲಕ್ಕಿ, ಅವನಿಂದ ಕಳವಾದ ವಾಹನಗಳು ಎಲ್ಲಿವೆ ಎಂಬ ಮಾಹಿತಿ ಪಡೆಯುತ್ತಿದ್ದ.  ಕಳ್ಳರು ನಿಗದಿತ ಸ್ಥಳಗಳಲ್ಲಿ ಕದ್ದ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದರು. ಬಳಿಕ ಆಶೀಶ್‌ಗೆ ಮಾಹಿತಿ ನೀಡುತ್ತಿದ್ದರು.  ಆತ ತನ್ನ ಸಂಬಂಧಿ ಲಕ್ಕಿಗೆ ಮಾಹಿತಿ ನೀಡುತ್ತಿದ್ದ. 

ಲಾಲು ಪ್ರಸಾದ್ ಕುಟುಂಬದ ಫಾರ್ಚುನರ್ ಕಾರು ಕಳವು; 6 ವರ್ಷದ ಬಳಿಕ ಸಿಕ್ಕಿತು ಸುಳಿವು!

ಈ ಜಾಲ ಮುಖ್ಯವಾಗಿ ಎಸ್‌ಯುವಿ ಹಾಗೂ ಅತ್ಯಂತ ಲಕ್ಸುರಿ ಕಾರುಗಳನ್ನು ಬಿಡಿ ಭಾಗಗಳನ್ನು ಬಿಚ್ಚಿ ವಿರೂಪಗೊಳಿಸುತ್ತಿದ್ದರು.  ಈ ಬಿಡಿ ಭಾಗಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇತ್ತು. ಅಲ್ಲದೇ ಇವರು ವಾಹನಗಳ ಬಿಡಿ ಭಾಗಗಳನ್ನು ಇತರ ರಾಜ್ಯಗಳಿಗೂ ಪೂರೈಕೆ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

click me!