ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ: ಕೇಂದ್ರದ ನಿಷೇಧ ಪ್ರಶ್ನಿಸಿ ಸುಪ್ರೀಕೋರ್ಟ್‌ಗೆ ಅರ್ಜಿ

By Kannadaprabha News  |  First Published Jan 30, 2023, 9:30 AM IST

ಗೋಧ್ರೋತ್ತರ ಗಲಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಸಾರುವ ಬಿಬಿಸಿ ನಿರ್ಮಾಣ ಮಾಡಿರುವ ಸಾಕ್ಷ್ಯಚಿತ್ರಕ್ಕೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.


ನವದೆಹಲಿ: ಗೋಧ್ರೋತ್ತರ ಗಲಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಸಾರುವ ಬಿಬಿಸಿ ನಿರ್ಮಾಣ ಮಾಡಿರುವ ಸಾಕ್ಷ್ಯಚಿತ್ರಕ್ಕೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಸರ್ಕಾರದ ಈ ನಿರ್ಧಾರ ದುರುದ್ದೇಶ, ಸ್ವೇಚ್ಛಾನುಸಾರ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ವಕೀಲ ಎಂ.ಎಲ್‌.ಶರ್ಮಾ ಈ ಪಿಐಎಲ್‌ ಸಲ್ಲಿಸಿದ್ದು, ಬಿಬಿಸಿ ನಿರ್ಮಾಣ ಮಾಡಿರುವ ಸಾಕ್ಷ್ಯಚಿತ್ರದ 2 ಭಾಗವನ್ನು ಕೋರ್ಟ್ ಪರಿಶೀಲಿಸಿ ಗುಜರಾತ್‌ ಗಲಭೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ಸಾಕ್ಷ್ಯಚಿತ್ರದಲ್ಲಿ ಏನಿದೆ? 
2002ರಲ್ಲಿ ಗೋಧ್ರಾದಲ್ಲಿ 59 ಕರಸೇವಕರನ್ನು ಒಂದು ಕೋಮಿನ ಜನರು ರೈಲಿಗೆ ಬೆಂಕಿ ಹಚ್ಚಿದ್ದರು. ಬಳಿಕ ಸೇಡಿಗಾಗಿ ಮತ್ತೊಂದು ಕೋಮಿನವರು ತಿರುಗಿಬಿದ್ದಿದ್ದರು. ‘ಈ ವೇಳೆ, ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪೊಲೀಸರಿಗೆ, ‘ಕ್ರಮ ಕೈಗೊಳ್ಳದೇ ಸುಮ್ಮನಿರಿ’ ಎಂದಿದ್ದರು. ಈ ಬಗ್ಗೆ ಬ್ರಿಟನ್‌ ತಂಡ ಪುರಾವೆ ಸಂಗ್ರಹಿಸಿತ್ತು’ ಎಂದು ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ ಮಾಡಿದೆ. ಈ ಸಾಕ್ಷ್ಯಚಿತ್ರ 2 ಭಾಗಗಳಲ್ಲಿದ್ದು, ಮೊದಲ ಭಾಗ ಈಗಾಗಲೇ ಪ್ರಸಾರವಾಗಿದ. ಇದು ಸುಳ್ಳು ಅಂಶದಿಂದ ಕೂಡಿದ ಸಾಕ್ಷ್ಯಚಿತ್ರ ಎಂದಿರುವ ಭಾರತ, ಇದನ್ನು ಯೂಟ್ಯೂಬ್‌ನಿಂದ ನಿರ್ಬಂಧಿಸಿದೆ.ಆದರೆ, ವಿರೋಧ ಪಕ್ಷಗಳು ಮೋದಿ ವಿರುದ್ಧದ ಸಾಕ್ಷ್ಯಚಿತ್ರವನ್ನು ಬೆಂಬಲಿಸಿದ್ದು, ಇದಕ್ಕೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿದೆ. 

Tap to resize

Latest Videos

ವಿವಾದದ ನಡುವೆ ಕೇರಳದಲ್ಲಿ ಕಾಂಗ್ರೆಸ್‌ನಿಂದ ಮೋದಿ ವಿರುದ್ದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ!

ವಿವಿಯಲ್ಲಿ ನಿಷೇಧಾಜ್ಞೆ:
ಜಾಮೀಯಾ ವಿಶ್ವವಿದ್ಯಾಲಯ, ದೆಹಲಿ ಸೇರಿ ದೇಶದ ಹಲವು ವಿಶ್ವವಿದ್ಯಾಲಯಗಳು ಮೋದಿ ವಿರುದ್ಧದ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಮುಂದಾಗಿದ್ದಕ್ಕೆ ಗೊಂದಲು ಸೃಷ್ಟಿಯಾಗಿತ್ತು. ಎಲ್ಲೆಡೆ ರಣರಂಗದ ವಾತವರಣ ನಿರ್ಮಾಣವಾಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತರಲು ನಿಷೇಧಾಜ್ಞೆ ಜಾರಿ ತರಲಾಗಿತ್ತು. ಬಿಬಿಸಿ ವಾಹಿನಿ ಸಿದ್ದಪಡಿಸಿರುವ ಈ ಸಾಕ್ಷ್ಯಚಿತ್ರ ಭಾರತದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಹಾಗೂ ಗುಜರಾತ್ ಗಲಭೆ ಕುರಿತ ಈ ಸಾಕ್ಷ್ಯಚಿತ್ರವನ್ನು ಭಾರತ ನಿಷೇಧಿಸಿದ್ದರೂ ಈ ಚಿತ್ರ ಪ್ರಸಾರಕ್ಕೆ ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿ ಸಂಘಟನೆಗಳು ನಿರ್ಧರಿಸಿದ್ದವು. ಇದು ವಿವಾದಕ್ಕೆ ಕಾರಣಾವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನವೇ ಬಿಬಿಸಿ ಸಾಕ್ಷ್ಯ ಚಿತ್ರ ಪ್ರಸಾರ ಮಾಡಲು ಬಯಸಿದ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಜಾಮಿಯಾ ವಿಶ್ವವಿದ್ಯಾಲಯ, ಅನುಮತಿ ಇಲ್ಲದೆ ಯಾವುದೇ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿತ್ತು. ಇಷ್ಟೇ ಅಲ್ಲ ನಿಯಮ ಉಲ್ಲಂಘಿಸಿದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿತ್ತು.

ಜಾಮಿಯಾ ವಿಶ್ವವಿದ್ಯಾಲಯ ಹಾಗೂ ದೆಹಲಿ ವಿವಿಯ ಸುತ್ತ ಭಾರಿ ಪೊಲೀಸ್ ಬಿಗಿ ಭದ್ರತೆ ಒದಗಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳು ಗುಂಪು ಸೇರುವುದಕ್ಕೂ ನಿಷೇಧಿಸಲಾಗಿತ್ತು. ಕ್ಯಾಂಪಸ್ ಒಳಗೆ ಯಾವುದೇ ವಿದ್ಯಾರ್ಥಿಗಳು ಗುಂಪು ಸೇರಿದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯ ಎಚ್ಚರಿಸಿದೆ.

'ನಮೋ' ಕುರಿತು ವಿವಾದಾತ್ಮಕ ಸಾಕ್ಷ್ಯಚಿತ್ರ: ಜೆ.ಎನ್.ಯುನಲ್ಲಿ ಕಲ್ಲು ತೂರಾಟ ಆಗಿದ್ದೇಕೆ?

ವಿಶ್ವದ ನಾಯಕರ ವಿರೋಧ:
ಮೋದಿಯನ್ನು ವಿಶ್ವ ಗುರುವೆಂದು ವಿಶ್ವದ ಹಲವು ನಾಯಕರು ಬಣ್ಣಿಸುತ್ತಿರುವ ಬೆನ್ನಲ್ಲೇ ಬಿಬಿಸಿ ಬಿಡುಗಡೆ ಮಾಡಿರುವ ಈ ಸಾಕ್ಷ್ಯಚಿತ್ರವನ್ನು ಬ್ರಿಟನ್ ಪ್ರಧಾನಿ ಋಷಿ ಸುನಾಕ್ ಸೇರಿ ಹಲವರು ವಿರೋಧಿಸಿದ್ದಾರೆ. ಸುಪ್ರೀಂ ಕೋರ್ಟ್ ಗೋಧ್ರೋತ್ತರ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ಮೋದಿಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಬಿಬಿಸಿ ಮಾತ್ರ ವ್ಯತಿರಿಕ್ತವಾಗಿ ಸಾಕ್ಷ್ಯಚಿತ್ರ ನಿರ್ಮಿಸಿದೆ. ಇದರಿಂದ ಕೆರಳಿರುವ ಭಾರತದ ನಿವೃತ್ತ ಜಡ್ಜ್, ನಿವೃತ್ತ ಸರ್ಕಾರಿ ಅಧಿಕಾರಿಗಳು, ನಿವೃತ್ತ ರಾಯಭಾರಿಗಳು ಹಾಗೂ ನಿವೃತ್ತ ಸೇನಾಧಿಕಾರಿಗಳು ಸೇರಿ 302 ಮಂದಿ ಬಿಬಿಸಿ ವಿರುದ್ದ ಪತ್ರ ಬರೆದಿದ್ದಾರೆ. ಖುದ್ದು ಸಹಿ ಹಾಕಿ ಈ ಪತ್ರ ಬರೆಯಲಾಗಿದೆ.

ಬಿಬಿಸಿ ವಾಸ್ತವತೆಯನ್ನು ತೋರಿಸಿಲ್ಲ. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪು ಇದೆ. ಆದರೆ ಮೋದಿ ವಿರೋಧಿಗಳ ಹೇಳಿಕೆಯನ್ನೇ ಸಾಕ್ಷ್ಯವಾಗಿ ಪರಿಗಣಿಸಿ ಈ ಸಾಕ್ಷ್ಯ ಚಿತ್ರ ತಯಾರಿಸಲಾಗಿದೆ. ಬ್ರಿಟಿಷರ ಒಡೆದು ಒಳುವ ನೀತಿಯನ್ನು ಈ ಹಿಂದೆ ಭಾರತದಲ್ಲಿ ಮಾಡಲಾಗಿತ್ತು. ಇದೀಗ ಬಿಬಿಸಿ ಮೂಲಕ ಬ್ರಿಟಿಷರು ಅದೇ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

click me!