
ನವದೆಹಲಿ(ಮೇ.31) ಪೊಲೀಸರಿಗೆ ಪ್ರತಿ ದಿನ ಹೊಸ ಹೊಸ ದೂರು, ಅರ್ಜಿ, ಮನವಿಗಳು ಬರುತ್ತಲೇ ಇರುತ್ತದೆ. ಪ್ರತಿಯೊಂದು ಮನವಿ, ದೂರುಗಳನ್ನು ಪೊಲೀಸರು ಪರಿಶೀಲಿಸಿ ಕಾರ್ಯನಿರ್ವಹಿಸುತ್ತಾರೆ. ಹೀಗಿರುವಾಗ ದೆಹಲಿ ಪೊಲೀಸರಿಗೆ ಬಂದ ವಿಚಿತ್ರ ಮನವಿ ಇದೀಗ ಭಾರಿ ವೈರಲ್ ಆಗಿದೆ. ನನಗೆ ಗರ್ಲ್‌ಫ್ರೆಂಡ್ ಯಾವಾಗ ಹುಡುಕಿ ಕೊಡುತ್ತೀರಿ? ನಾನಿನ್ನು ಸಿಂಗಲ್ ಆಗಿದ್ದೇನೆ. ಇದು ಸರಿಯಲ್ಲ, ನೀವು ಕನಿಷ್ಠ ನನಗೆ ಗರ್ಲ್‌ಫ್ರೆಂಡ್ ಹುಡುಕಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾನೆ. ಯುವಕನ ಕಳಕಳಿಯ ಮನವಿಗೆ ದೆಹಲಿ ಪೊಲೀಸರು ಸ್ಪಂದಿಸಿದ್ದಾರೆ.
ಯುವಕ ಮಾಡಿದ ಮನವಿ ದೆಹಲಿ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಖಂಡಿತವಾಗಿ ನಿಮಗೆ ಗರ್ಲ್‌ಫ್ರೆಂಡ್ ಹುಡುಕಲ ನಾವು ಸಹಾಯ ಮಾಡುತ್ತೇವೆ. ಆದರೆ ಆಕೆ ಎಲ್ಲಾದರೂ ನಾಪತ್ತೆಯಾಗಿದ್ದರೆ ಮಾತ್ರ ಎಂದಿದ್ದಾರೆ. ಇಷ್ಟೇ ಅಲ್ಲ ಇದರ ಜೊತೆಗೆ ಒಂದು ಸಲಹೆಯನ್ನೂ ನೀಡಿದ್ದಾರೆ. ನೀವು ಸಿಗ್ನಲ್ ಆಗಿದ್ದರೆ ಯಾವತ್ತೂ ಗ್ರೀನ್ ಆಗಿರಿ, ರೆಡ್ ಆಗಬೇಡಿ ಎಂದು ಟಿಪ್ಸ್ ನೀಡಿದ್ದಾರೆ.
ಜಾಲಿ ರೈಡ್ ಹೋದ ಸ್ಪೈಡರ್‌ಮ್ಯಾನ್-ಸ್ಪೈಡರ್‌ವುಮೆನ್‌ಗೆ ಶಾಕ್, ವಿಡಿಯೋ ಪೋಸ್ಟ್ ಮಾಡಿ ಅರೆಸ್ಟ್ ಆದ ಜೋಡಿ!
ಸಲಹೆಯಲ್ಲಿ ಪೊಲೀಸರು ಯುವಕನ ನಡೆ, ಗುಣ ಕುರಿತು ಸೂಚನೆ ನೀಡಿದ್ದಾರೆ. ಸಂಬಂಧದಲ್ಲಿ ಯಾವತ್ತೂ ಗ್ರೀನ್ ಆಗಿರಿ, ರೆಡ್ ಆಗಿ ಡೇಂಜರ್ ಆಗಬೇಡಿ ಅನ್ನೋ ಸಲಹೆಯನ್ನು ದೆಹಲಿ ಪೊಲೀಸರು ಸೂಚ್ಯವಾಗಿ ನೀಡಿದ್ದಾರೆ. ದೆಹಲಿ ಪೊಲೀಸರು ಯುವಕನ ಮನವಿಗೆ ನಿರಾಸೆ ಮಾಡದೆ ಉತ್ತರಿ ಮತ್ತೆ ದೇಶಾದ್ಯಂತ ಸಂಚಲನ ಮೂಡಿಸಿದ್ದಾರೆ.
ದೆಹಲಿ ಪೊಲೀಸರು ನೀಡಿದ ಈ ಉತ್ತರ ಭಾರಿ ವೈರಲ್ ಆಗಿದೆ. ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ದೆಹಲಿ ಪೊಲೀಸರ ಪ್ರತಿಕ್ರಿಯೆ ಅದ್ಬುತ. ಪ್ರತಿ ಬಾರಿ ಈ ರೀತಿ ಉತ್ತರ ನೀಡಿ ಎಲ್ಲರ ಮನಗೆಲ್ಲುತ್ತೀರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಹೌದು, ದೆಹಲಿ ಪೊಲೀಸರ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದಾರೆ. ಇದರ ಜೊತೆಗೆ ಜೋಕ್ಸ್, ತಮಾಷೆ, ಕಾಲೆಳೆಯುವ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಾರೆ.
ದೆಹಲಿ ಪೊಲೀಸರ ನೀಡಿದ ಹಲವು ಉತ್ತರಗಳು, ಟ್ವೀಟ್, ಪೋಸ್ಟ್‌ಗಳು ಭಾರಿ ವೈರಲ್ ಆಗಿದೆ. ಪ್ರಮುಖವಾಗಿ ಟ್ರಾಫಿಕ್ ಜಾಗೃತಿ, ಪಾದಾಚಾರಿಗಳಿಗೆ ಸೂಚನೆ, ಸರಗಳ್ಳರು, ಇತರ ದಾಳಿಗಳಿಂದ ಎಚ್ಚರವಾಗಿರಲು ಸೂಚನೆ ವೇಳೆಯೂ ದೆಹಲಿ ಪೊಲೀಸರು ಮನಮುಟ್ಟುವ ರೀತಿಯಲ್ಲಿ ಸಂದೇಶಗಳನ್ನು ನೀಡಿದ್ದಾರೆ. ಇದೀಗ ಯುವಕನಿಗೆ ಉತ್ತರ ನೀಡಿ ಮತ್ತೆ ದೆಹಲಿ ಪೊಲೀಸರ ಹಾಸ್ಯ ಪ್ರಜ್ಞೆ ಜೊತೆಗೆ ಜಾಗೃತಿ ವೈರಲ್ ಆಗಿದೆ.
ಡಿಮ್ಯಾಂಡ್ ಮೇಲೆ ಕಾರು ಕದ್ದೆವು: ನಡ್ಡಾ ಪತ್ನಿ ಕಾರು ಕದ್ದ ಖದೀಮರ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ