ಕೇಜ್ರಿವಾಲ್ ಆಪ್‌ಗೆ ಮತ್ತೊಂದು ಸಂಕಷ್ಟ, ಸಚಿವರು 7 ಕೋಟಿ ರೂಪಾಯಿ ಲಂಚ ಪಡೆದ ಆರೋಪ

By Suvarna NewsFirst Published Jan 20, 2023, 4:30 PM IST
Highlights

ಆಮ್ ಆದ್ಮಿ ಸರ್ಕಾರದ ವಿರುದ್ಧದ ಮತ್ತೊಂದು ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಸರ್ಕಾರದ  ಸಚಿವರು ಹಾಗೂ ಅಧಿಕಾರಿಗಳು ಬರೋಬ್ಬರಿ 7 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಅನ್ನೋ ದೂರು ದಾಖಲಾಗಿದೆ.
 

ನವದೆಹಲಿ(ಜ.20): ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರಕ್ಕೆ ಮತ್ತೊಂದು ತಲೆನೋವು ಎದುರಾಗಿದೆ. ಈಗಾಗಲೇ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಸಚಿವ ಸತ್ಯೇಂದ್ರ ಜೈನ್ ಜೈಲು ಸೇರಿದ್ದಾರೆ. ಇದೀಗ ಸತ್ಯೇಂದ್ರ ಜೈನ್ ಸೇರಿದಂತೆ ದಹಲಿ ಸರ್ಕಾರದ ಕೆಲ  ಸಚಿವರು ಹಾಗೂ ಅಧಿಕಾರಿಗಳು ಬರೋಬ್ಬರಿ 7 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಕಂಪನಿಯೊಂದು ದೆಹಲಿ ಪೊಲೀಸರಿಗೆ ದೂರು ದಾಖಲಿಸಿದೆ. ಸಿಸಿಟಿವಿ ಟೆಂಡರ್‌ನಲ್ಲಿ ಅತೀ ದೊಡ್ಡ ಗೋಲ್‌ಮಾಲ್ ನಡೆದಿದೆ ಎಂದು ಕಂಪನಿ ದೂರಿನಲ್ಲಿ ಆರೋಪಿಸಿದೆ. ಇದು ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಮತ್ತೆ ತೀವ್ರ ಹಿನ್ನಡೆಯಾಗಿದೆ.

ದೆಹಲಿಯ ಸಿಸಿಟಿವಿ ಅಳವಡಿಸುವಿಕೆ ಕುರಿತು ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಇದರಲ್ಲಿ ಖಾಸಗಿ ಕಂಪನಿಯ ಮಾಜಿ ಉದ್ಯೋಗಿಯ ಎಡವಟ್ಟಿನಿಂತ ಸಿಸಿಟಿವಿ ಅಳವಡಿಕೆ ಹಾಗೂ ನಿರ್ವಹಣೆಯಲ್ಲಿ ಕೆಲ ತಪ್ಪುಗಳಾಗಿತ್ತು. ಇದನ್ನು ಮುಂದಿಟ್ಟುಕೊಂಡು ದೆಹಲಿ ಸರ್ಕಾರದ ಇಬ್ಬರು ಸಚಿವರು ಹಾಗೂ ಅಧಿಕಾರಿಗಳು ಖಾಸಗಿ ಕಂಪನಿಗೆ ನೋಟೀಸ್ ನೀಡಿದ್ದರು. ಈ ನೋಟೀಸ್‌ನಲ್ಲಿ 16 ಕೋಟಿ ರೂಪಾಯಿ ದಂಡವಾಗಿ ಪಾವತಿಸುವಂತೆ ಸೂಚಿಸಲಾಗಿತ್ತು.

Mayor election Result ಚಂಡೀಘಡದಲ್ಲಿ ಆಪ್‌ಗೆ ಹಿನ್ನಡೆ, 1 ಮತದಿಂದ ಬಿಜೆಪಿಗೆ ಗೆಲುವು!

ದಂಡ ನೋಡಿ ಗಾಬರಿಗೊಂಡ ಖಾಸಗಿ ಕಂಪನಿಯ ಉನ್ನತ ಮಟ್ಟದ ಅಧಿಕಾರಿಗಳು ಸತ್ಯೇಂದ್ರ ಜೈನ್ ಹಾಗ ಮತ್ತಿಬ್ಬರು ಸಚಿವರನ್ನು ಭೇಟಿಯಾಗಿದ್ದರು. ಅಚಾತುರ್ಯದಿಂದ ತಪ್ಪಾಗಿದೆ. ದಂಡ ವಿನಾಯಿತಿ ನೀಡಿ ಅಥವಾ ದಂಡ ಮೊತ್ತ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಸತ್ಯೇಂದ್ರ ಜೈನ್ ಹಾಗೂ ಮತ್ತಿಬ್ಬರು ಸಚಿವರು ಹೊಸ ಪ್ರಸ್ತಾವನೆ ಮುಂದಿಟ್ಟಿದ್ದಾರೆ. 7 ಕೋಟಿ ರೂಪಾಯಿ ನೀಡಿದರೆ ಪ್ರಕರಣ ಅಂತ್ಯಹಾಡುವುದಾಗಿ ಭರವಸೆ ನೀಡಿದ್ದಾರೆ. ಇದರಂತೆ ಸಚಿವರು ಹಾಗೂ ಅಧಿಕಾರಿಗಳಿಗೆ ಒಟ್ಟು 7 ಕೋಟಿ ರೂಪಾಯಿ  ಹಣವನ್ನು ಲಂಚದ ರೂಪದಲ್ಲಿ ನೀಡಿದ್ದಾರೆ. ಇದೀಗ ಸಚಿವ ಸತ್ಯೇಂದ್ರ ಜೈನ್ ಅಕ್ರಣ ಹಣ ವರ್ಗಾವಣೆ, ಭ್ರಷ್ಟಾಚಾರ ಆರೋಪದಡಿ ಜೈಲು ಸೇರಿದ್ದಾರೆ. ಸಚಿವರು ನೀಡಿದ ಭರವಸೆ ಪೊಳ್ಳಾಗಿದೆ. ಇತ್ತ 7 ಕೋಟಿ ರೂಪಾಯಿ ಹಣವೂ ಇಲ್ಲದಾಗಿದೆ. 

 

ನನ್ನ ಮನೆ, ಕಚೇರಿ ಮೇಲೆ ದಾಳಿ ಮಾಡಿ ಸಿಬಿಐ ಬರಿಗೈಲಿ ಹಿಂದಿರುಗಿದೆ: ಸಿಸೋಡಿಯಾ

ಇದರಿಂದ ಖಾಸಗಿ ಕಂಪನಿ ದೆಹಲಿ ಪೊಲೀಸರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದೆ. ಕಂಪನಿ ತೀವ್ರ ನಷ್ಟದಲ್ಲಿದೆ. ಇದೀಗ ಮತ್ತೆ ದಂಡ ಪಾವತಿಸಲು ಸಾಧ್ಯವಿಲ್ಲ. ಸಚಿವರು ಹಾಗೂ ಅಧಿಕಾರಿಗಳೇ 7 ಕೋಟಿ ರೂಪಾಯಿ ಪಾವತಿಸುವಂತೆ ಹೇಳಿದ್ದಾರೆ. ನಾವು ದಂಡದ ರೂಪವಾಗಿ ಪಾವತಿಸಿದ್ದೇವೆ. ಆದರೆ ಇದನ್ನು ಲಂಚವಾಗಿ ಪರಿವರ್ತಿಸಿರುವ ಸಚಿವರು ನಮ್ಮ ಕಂಪನಿಗೆ ಮೋಸ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

click me!