ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ

Published : Dec 11, 2025, 04:00 PM IST
fake Castrol brand product engine oil

ಸಾರಾಂಶ

ದೆಹಲಿ ಪೊಲೀಸರು ಅಲಿಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತೀ ದೊಡ್ಡ ನಕಲಿ ಎಂಜಿನ್ ಎಣ್ಣೆ ಉತ್ಪಾದನಾ ಘಟಕವನ್ನು ಭೇದಿಸಿ, ಮಾರುಕಟ್ಟೆಯಲ್ಲಿ ವಿತರಣೆಗೆ ಸಿದ್ಧವಾಗಿದ್ದ ಕ್ಯಾಸ್ಟ್ರೋಲ್ ಬ್ರಾಂಡ್ ಉತ್ಪನ್ನಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ.

ನವದೆಹಲಿ: ದೆಹಲಿ ಪೊಲೀಸರು ಅಲಿಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತೀ ದೊಡ್ಡ ನಕಲಿ ಎಂಜಿನ್ ಎಣ್ಣೆ ಉತ್ಪಾದನಾ ಘಟಕವನ್ನು ಭೇದಿಸಿ, ಮಾರುಕಟ್ಟೆಯಲ್ಲಿ ವಿತರಣೆಗೆ ಸಿದ್ಧವಾಗಿದ್ದ ಕ್ಯಾಸ್ಟ್ರೋಲ್ ಬ್ರಾಂಡ್ ಉತ್ಪನ್ನಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ. ಡಿಸೆಂಬರ್ 9 ರಂದು ಪಡೆದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ದೆಹಲಿ ಜಿಲ್ಲಾ ತನಿಖಾ ಘಟಕವು (ಡಿಐಯು) ಅಲಿಪುರದಲ್ಲಿರುವ ಕಾರ್ಖಾನೆಯ ಮೇಲೆ ದಾಳಿ ನಡೆಸಿದೆ.ನಂತರ ಕ್ಯಾಸ್ಟ್ರೋಲ್ ಲಿಮಿಟೆಡ್‌ನ ಅಧಿಕಾರಿಗಳ ತಂಡ ಇಲ್ಲಿಗೆ ಬಂದು ಅಲ್ಲಿದ್ದ ನಕಲಿ ಎಂಜಿನ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ.

ದಾಳಿಯ ಸಮಯದಲ್ಲಿ, ಪೊಲೀಸರು 239 ಲೀಟರ್ ನಕಲಿ ಕ್ಯಾಸ್ಟ್ರೋಲ್ ಎಣ್ಣೆ, ಕ್ಯಾಸ್ಟ್ರೋಲ್ ಕಂಪನಿಯ ಲೇಬಲ್ ಹೊಂದಿರುವ 304 ಖಾಲಿ ಬಾಟಲಿಗಳು, 3,000 ಬಾರ್‌ಕೋಡ್ ಸ್ಟಿಕ್ಕರ್‌ಗಳು, 700 ಕ್ಕೂ ಹೆಚ್ಚು ಕ್ಯಾಸ್ಟ್ರೋಲ್ ಬಾಟಲ್ ಕ್ಯಾಪ್‌ಗಳು ಮತ್ತು ಹಲವು ಕ್ಯಾಸ್ಟ್ರೋಲ್ ಉತ್ಪನ್ನಗಳ 11,200 ಎಂಆರ್‌ಪಿ ಸ್ಟಿಕ್ಕರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ನಕಲಿ ಎಂಜಿನ್ ಆಯಿಲ್ ರೆಡಿ ಮಾಡ್ತಿದ್ದ ತಂಡವು ತನ್ನ ಜೊತೆಗೆ ನಕಲಿ ಸೀಲಿಂಗ್ ಯಂತ್ರ, ಕಬ್ಬಿಣ, ಪ್ಲಾಸ್ಟಿಕ್ ಫನಲ್, ಅಳತೆ ಉಪಕರಣಗಳು, ಎಣ್ಣೆ ಪಂಪ್, ಗೇಜ್ ಮತ್ತು ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಸಲಾಗುವ ಒಂದು ಲೀಟರ್ ದ್ರವ ರೂಪದಲ್ಲಿದ್ದ ಕಿತ್ತಳೆ ಬಣ್ಣದ ಡೈಯನ್ನು ಕೂಡ ವಶಪಡಿಸಿಕೊಂಡಿದೆ.

ಕಳೆದ 6 ತಿಂಗಳಿನಿಂದ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಘಟಕ

ಈ ಅಕ್ರಮ ಘಟಕವು ಕಳೆದ ಆರು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದೆ. ಇದು ದೆಹಲಿಯ ಕೆಲವು ಭಾಗಗಳಲ್ಲಿ ನಕಲಿ ಲೂಬ್ರಿಕಂಟ್ ಅನ್ನು ಪೂರೈಸುತ್ತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಪತ್‌ನ 27 ವರ್ಷದ ಅಜಯ್ ಭಾರದ್ವಾಜ್ ಮತ್ತು ಸೋನಿಪತ್‌ನ ಜೀವನ್ ವಿಹಾರ್‌ನ ನಿವಾಸಿ 22 ವರ್ಷದ ಸಚಿನ್ ಶರ್ಮಾ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇವರಿಬ್ಬರು ಈ ನಕಲಿ ಎಂಜಿನ್ ಆಯಿಲ್ ಕಾರ್ಖಾನೆಯನ್ನು ಸ್ಥಾಪಿಸಿದ್ದರು

ಇದನ್ನೂ ಓದಿ: ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು

ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ವಸ್ತುಗಳ ವಿವರ ಇಲ್ಲಿದೆ. 10,060 ಕ್ಯಾಸ್ಟ್ರೋಲ್ ಆಕ್ಟಿವ್ 20W-40 ಎಂಆರ್‌ಪಿ ಸ್ಟಿಕ್ಕರ್‌ಗಳು, 1,160 ಕ್ಯಾಸ್ಟ್ರೋಲ್ GTX 20W-50 ಎಂಆರ್‌ಪಿ ಸ್ಟಿಕ್ಕರ್‌ಗಳು, ಕ್ಯಾಸ್ಟ್ರೋಲ್ ಆಕ್ಟಿವ್ 20W-40ನ 100 ಬಾಟಲಿಗಳು (1 ಲೀಟರ್), ಕ್ಯಾಸ್ಟ್ರೋಲ್ RX ಸೂಪರ್ 15W-40ನ 99 ಬಾಟಲಿಗಳು (1 ಲೀಟರ್) ಮತ್ತು ಕ್ಯಾಸ್ಟ್ರೋಲ್ CRB ಪ್ಲಸ್ 20W-40ನ ನಾಲ್ಕು ಬಕೆಟ್‌ಗಳು (10 ಲೀಟರ್) ಮತ್ತು ಸಾವಿರಾರು ಪ್ಯಾಕೇಜಿಂಗ್ ಘಟಕಗಳನ್ನು ಸೀಜ್ ಮಾಡಲಾಗಿದೆ. ಈ ದಂಧೆಯಲ್ಲಿ ಭಾಗಿಯಾಗಿರುವ ವ್ಯಾಪಕ ಜಾಲವನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು