ಹುತಾತ್ಮ ಯೋಧನ ಪತ್ನಿ ಸ್ಮೃತಿ ಸಿಂಗ್ ಬಗ್ಗೆಅಶ್ಲೀಲ ಕಮೆಂಟ್; ಎಫ್‌ಐಆರ್ ದಾಖಲು

By Mahmad RafikFirst Published Jul 14, 2024, 10:35 AM IST
Highlights

ರಾಷ್ಟ್ರೀಯ ಮಹಿಳಾ ಆಯೋಗ  ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದೆ.

ನವದೆಹಲಿ: ಹುತಾತ್ಮ ಯೋಧ ಅಂಶುಮನ್  ಸಿಂಗ್ ಪತ್ನಿ ಸ್ಮೃತಿ ಸಿಂಗ್ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ್ದ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ (National Commission for Women) ನೀಡಿದ ದೂರಿನ ಅನ್ವಯ ದೆಹಲಿ ಪೊಲೀಸರು (Delhi Police) ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದು, ಕಮೆಂಟ್ ಮಾಡಿದ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS-Bharatiya Nyaya Sanhita) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿಯಲ್ಲಿ ದೆಹಲಿ ಪೊಲೀಸ್‌ನ ಐಎಫ್‌ಎಸ್ಒ (Intelligence Fusion and Strategic Operation) ಘಟಕ ಪ್ರಕರಣ ದಾಖಲಿಸಿಕೊಂಡಿದೆ. ಕಮೆಂಟ್ ಮಾಡಿರುವ ಸೋಶಿಯಲ್ ಮೀಡಿಯಾ ಯೂಸರ್ (Social Media User) ದೆಹಲಿ ನಿವಾಸಿ ಎಂದು ತಿಳಿದು ಬಂದಿದೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 79 (ಪದ, ಚಿಹ್ನೆ ಅಥವಾ ಕಾರ್ಯದಿಂದ ಮಹಿಳೆಯ ಘನತೆಗೆ ಚ್ಯುತಿ ತರುವುದು) ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಸ್ತುಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು) ಅಡಿ ಕೇಸ್ ದಾಖಲಾಗಿದೆ. 

ಮಹಿಳಾ ಆಯೋಗದಿಂದಲೂ ವಿಚಾರಣೆ 

Latest Videos

ಸ್ಮೃತಿ ಸಿಂಗ್ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ  ರಾಷ್ಟ್ರೀಯ ಮಹಿಳಾ ಆಯೋಗ  ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಮಹಿಳಾ ಆಯೋಗ ಆರೋಪಿಯನ್ನು ಶೀಘ್ರದಲ್ಲಿಯೇ ಬಂಧಿಸುವಂತೆ ಆಗ್ರಹಿಸಿ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ಈ ಕುರಿತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆಯೂ ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. 

ಕ್ಯಾಪ್ಟನ್ ಅಂಶುಮಾನ್ ಸಿಂಗ್ 2023ರ ಜುಲೈನಲ್ಲಿ ಹುತಾತ್ಮರಾಗಿದ್ದರು. ವೈದ್ಯರಾಗಿದ್ದ ಅಂಶುಮಾನ್ ಸಿಂಗ್ ಭಾರತೀಯ ಸೇನೆಯ ಶಸ್ರ್ತಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ಇರಿಸಲಾಗಿದ್ದ ಸ್ಥಳದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ಅವಘಡದಲ್ಲಿ ಅಂಶುಮಾನ್ ಸಿಂಗ್ ಮೃತರಾಗಿದ್ದರು. ಅಂಶುಮಾನ್ ಸಿಂಗ್ ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿ ವೈದ್ಯಕೀಯ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಬೆಂಕಿ ಅವಘಡದಲ್ಲಿ ಕೆಲವರನ್ನು ಅಂಶುಮಾನ್ ಸಿಂಗ್ ರಕ್ಷಣೆ ಮಾಡಿದ್ದರು. ವೈದ್ಯಕೀಯ ಉಪಕರಣಗಳನ್ನು ತೆಗೆದುಕೊಳ್ಳಲು ಹೋದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪ್ರಥಮ ಚಿಕಿತ್ಸೆ ಹಾಗೂ ಇನ್ನಿತರ ವೈದ್ಯಕೀಯ ಸಾಮಾಗ್ರಿಗಳನ್ನು ತರಲು ಹೋಗಿದ್ದ ಅಂಶುಮಾನ್ ಸಿಂಗ್ ಅವರಿಗೆ ಹಿಂದಿರುಗಿ ಬರಲು ಸಾಧ್ಯವಾಗಿರಲಿಲ್ಲ.

ಪುಟ್ಟ ವಯಸ್ಸಿನ ವಿಧವೆಗೆ ಕೀರ್ತಿ ಚಕ್ರ ನೀಡಿ ಸಂತೈಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

ಈ ಶೌರ್ಯಕ್ಕಾಗಿ, ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದು ದೇಶದ ಎರಡನೇ ಅತಿದೊಡ್ಡ ಶೌರ್ಯ ಪ್ರಶಸ್ತಿಯಾಗಿದೆ. ಜುಲೈ 5 ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಶುಮಾನ್ ಸಿಂಗ್ ಅವರ ಪತ್ನಿ ಸ್ಮೃತಿ ಸಿಂಗ್ ಮತ್ತು ಅವರ ತಾಯಿ ಮಂಜು ಸಿಂಗ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಪರಿಹಾರ ಹಂಚಿಕೆ ಬಗ್ಗೆ ಅಂಶುಮಾನ್ ಪೋಷಕರ ಮನವಿ

ಇತ್ತ ಅಂಶುಮಾನ್ ಸಿಂಗ್ ಪೋಷಕರು ಪರಿಹಾರ ಹಂಚಿಕೆಯ ಬಗ್ಗೆ ಮರು ಪರಿಶೀಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಭಾರತೀಯ ಸೇನೆಯ ಎನ್‌ಓಕೆ ಮಾನದಂಡದಲ್ಲಿ ಬದಲಾವಣೆ ಮಾಡಿ, ನಮಗೂ ಆರ್ಥಿಕ ಸಹಾಯ ಸಿಗುವಂತೆ ಪರಿಹಾರ ವಿತರಿಸಬೇಕು ಎಂದು ಕೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ಕರ್ತವ್ಯನಿರತ ವಿವಾಹಿತ ಯೋಧ ಮಡಿದರೆ ಪತ್ನಿಗೆ ಸಂಪೂರ್ಣ ಪರಿಹಾರ ಸಿಗುತ್ತದೆ.

'ಮನೆ ಕಟ್ಬೇಕು, ಅಪ್ಪ ಆಗ್ಬೇಕು.. 50 ವರ್ಷ ಜೊತೆಯಾಗಿ ಬದುಕಬೇಕು..' ನನ್ನ ಗಂಡನಿಗೆ ಇದೇ ಕನಸಾಗಿತ್ತು!

ಮಾಧ್ಯಮವೊಂದರ ಜೊತೆ ಮಾತನಾಡಿರುವ ಅಂಶುಮಾನ್ ಸಿಂಗ್ ಪೋಷಕರಾದ ರವಿ ಪ್ರತಾಪ್ ಸಿಂಗ್ ಹಾಗೂ ಮಂಜು ಸಿಂಗ್, ಸೊಸೆ ಸ್ಮೃತಿ ನಮ್ಮೆಲ್ಲರನ್ನು ತೊರೆದು ತವರು ಮನೆಗೆ ಹೋಗಿದ್ದಾರೆ. ನಮಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಗೋಡೆ ಮೇಲೆ ನೇತು ಹಾಕಿರುವ ಮಗನ ಫೋಟೋ ನಮ್ಮೊಂದಿಗಿದೆ ಎಂದು ಹೇಳಿಕೊಂಡಿದ್ದಾರೆ. 

click me!