ಅಸೆಂಬ್ಲಿ ಮಿನಿ ಸಮರದಲ್ಲಿ ಇಂಡಿಯಾಕೂಟಕ್ಕೆ ಜಯಭೇರಿ: 13 ಸ್ಥಾನಗಳ ಪೈಕಿ ಬಿಜೆಪಿಗೆ ಕೇವಲ 2

Published : Jul 14, 2024, 09:06 AM IST
ಅಸೆಂಬ್ಲಿ ಮಿನಿ ಸಮರದಲ್ಲಿ ಇಂಡಿಯಾಕೂಟಕ್ಕೆ ಜಯಭೇರಿ: 13 ಸ್ಥಾನಗಳ ಪೈಕಿ ಬಿಜೆಪಿಗೆ ಕೇವಲ 2

ಸಾರಾಂಶ

 ಏಳು ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಭರ್ಜರಿ ಜಯಭೇರಿ ಬಾರಿಸಿದೆ. 13ರ ಪೈಕಿ 10 ಸ್ಥಾನಗಳು ‘ಇಂಡಿಯಾ’ ಪಾಲಾಗಿದ್ದರೆ, ಬಿಜೆಪಿ ಕೇವಲ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. 


ಪಿಟಿಐ ನವದೆಹಲಿ:  ಏಳು ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಭರ್ಜರಿ ಜಯಭೇರಿ ಬಾರಿಸಿದೆ. 13ರ ಪೈಕಿ 10 ಸ್ಥಾನಗಳು ‘ಇಂಡಿಯಾ’ ಪಾಲಾಗಿದ್ದರೆ, ಬಿಜೆಪಿ ಕೇವಲ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಪಕ್ಷೇತರ ಅಭ್ಯರ್ಥಿಯೊಬ್ಬರು ಒಂದು ಸ್ಥಾನದಲ್ಲಿ ಗೆದ್ದಿದ್ದಾರೆ. ಪಶ್ಚಿಮ ಬಂಗಾಳದ 4, ಹಿಮಾಚಲಪ್ರದೇಶದ 3, ಉತ್ತರಾಖಂಡದ 2, ಪಂಜಾಬ್‌, ಮಧ್ಯಪ್ರದೇಶ, ಬಿಹಾರ ಹಾಗೂ ತಮಿಳುನಾಡಿನ ತಲಾ 1 ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದಿತ್ತು. ಅದರ ಫಲಿತಾಂಶ ಶನಿವಾರ ಪ್ರಕಟವಾಗಿದೆ.

ಹಿಮಾಚಲ 2 ಹಾಗೂ ಉತ್ತರಾಖಂಡ 2 ಸೇರಿ ಕಾಂಗ್ರೆಸ್‌ 4 ಸ್ಥಾನಗಳನ್ನು ಗೆದ್ದಿದ್ದರೆ, ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ನಡೆದ ಎಲ್ಲ 4 ಸ್ಥಾನಗಳನ್ನೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಬಾಚಿಕೊಂಡಿದೆ. ಹಿಮಾಚಲ 1 ಹಾಗೂ ಮಧ್ಯಪ್ರದೇಶ 1 ಸೇರಿ ಬಿಜೆಪಿಗೆ 2 ಸ್ಥಾನಗಳು ದೊರೆತಿವೆ. ತಮಿಳುನಾಡಿನಲ್ಲಿ 1 ಸ್ಥಾನ ಡಿಎಂಕೆ, ಪಂಜಾಬ್‌ನಲ್ಲಿ 1 ಸ್ಥಾನ ಆಪ್‌, ಬಿಹಾರ 1 ಸ್ಥಾನ ಪಕ್ಷೇತರ ಅಭ್ಯರ್ಥಿಗೆ ದೊರೆತಿದೆ.

ಹಿಮಾಚಲಪ್ರದೇಶದಲ್ಲಿ ಸುಖು ಸರ್ಕಾರ ಮತ್ತಷ್ಟು ಸುಭದ್ರ

ನವದೆಹಲಿ: ಲೋಕಸಭೆ ಚುನಾವಣೆ ಪೂರ್ವದಲ್ಲಿ ಪತನದ ಭೀತಿ ಎದುರಿಸುತ್ತಿದ್ದ ಹಿಮಾಚಲಪ್ರದೇಶದ ಸುಖ್‌ವಿಂದರ್‌ ಸುಖು ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಬಲ ವಿಧಾನಸಭೆ ಉಪಚುನಾವಣೆಯಿಂದಾಗಿ ಮತ್ತಷ್ಟು ವೃದ್ಧಿಯಾಗಿದೆ. ಇದರಿಂದಾಗಿ ಸರ್ಕಾರ ಮತ್ತಷ್ಟು ಗಟ್ಟಿಯಾಗಿದೆ. ಜತೆಗೆ ಪಕ್ಷದ ಒಳಗೂ ಸುಖು ಮತ್ತಷ್ಟು ಬಲಾಢ್ಯರಾಗಿದ್ದಾರೆ.

ಲೋಕಸಭೆ ಚುನಾವಣೆ ಪೂರ್ವದಲ್ಲಿ ಆಂತರಿಕ ಕಚ್ಚಾಟ ಹಾಗೂ ಶಾಸಕರ ರಾಜೀನಾಮೆಯಿಂದಾಗಿ ಕಾಂಗ್ರೆಸ್‌ ಸರ್ಕಾರದ ಬಲ 36ಕ್ಕೆ ಕುಸಿದಿತ್ತು. ಹೀಗಾಗಿ ಸರ್ಕಾರ ಅಲ್ಪಮತದ ಅಂಚಿಗೆ ತಲುಪಿತ್ತು. ಆರು ವಿಧಾನಸಭೆ ಕ್ಷೇತ್ರಗಳಿಗೆ ಲೋಕಸಭೆ ಜತೆಗೇ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ 4 ಸ್ಥಾನ ಗೆದ್ದಿತ್ತು. ಇದರಿಂದಾಗಿ ಪಕ್ಷದ ಬಲ 38ಕ್ಕೇರಿಕೆಯಾಗಿತ್ತು. 68 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 35 ಸ್ಥಾನ ಬೇಕು. ಸರಳ ಬಹುಮತ ಹೊಂದಿದ್ದ ಸರ್ಕಾರ ಇದೀಗ ಮೂರು ಪಕ್ಷೇತರ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರಿಂದ ನಡೆದ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ 2 ಸ್ಥಾನ ಗೆದ್ದಿದೆ. ತನ್ಮೂಲಕ ಸರ್ಕಾರದ ಬಲ 40ಕ್ಕೆ ವೃದ್ಧಿಯಾಗಿದೆ. 2022ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದು ಕೂಡ 40 ಸ್ಥಾನ.

ಅಮೇಠಿ ಸೋಲು ಹಿನ್ನೆಲೆ ದೆಹಲಿ ಬಂಗಲೆ ತೊರೆದ ಸ್ಮೃತಿ ಇರಾನಿ, ಆಕೆಯ ಬಗ್ಗೆ ಕೀಳು ಮಾತು ಬೇಡ ಎಂದ ರಾಹುಲ್

ಹಿಮಾಚಲಪ್ರದೇಶದ ಡೆಹ್ರಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸುಖ್‌ವಿಂದರ್‌ ಸಿಂಗ್‌ ಸುಖು ಪತ್ನಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಕಮಲೇಶ್‌ ಠಾಕೂರ್‌ ಅವರು ಬಿಜೆಪಿ ಅಭ್ಯರ್ಥಿಯನ್ನು 9399 ಮತಗಳ ಅಂತರದಿಂದ ಮಣಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಅಲ್ಲದೆ, 68 ಸದಸ್ಯ ಬಲದ ಹಿಮಾಚಲದಲ್ಲಿ ಪಕ್ಷಾಂತರದಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ ಬಲ 40ಕ್ಕೇರಿದ್ದು, ಸರ್ಕಾರ ಇನ್ನಷ್ಟು ಬಲವಾಗಿದೆ.  ಉತ್ತರಾಖಂಡದ ಪವಿತ್ರ ಕ್ಷೇತ್ರ ಬದರೀನಾಥ ಕ್ಷೇತ್ರದಲ್ಲೂ ಕಾಂಗ್ರೆಸ್‌ ಪಕ್ಷ ಬಿಜೆಪಿಯನ್ನು ಸೋಲಿಸಿದ್ದು ಗಮನಾರ್ಹ.

ಲೋಕಸಭೆ ಟ್ರೆಂಡ್‌ ಮುಂದುವರಿಕೆ, ಬಿಜೆಪಿಗೆ ಪಾಠ: ಕಾಂಗ್ರೆಸ್‌ ಹರ್ಷ

ನಬದೆಹಲಿ: ಉಪಚುನಾವಣೆಯಲ್ಲಿ ಇಂಡಿಯಾ ಕೂಟ ಗೆಲುವು ಸಾಧಿಸಿರುವ ಬಗ್ಗೆ ಕಾಂಗ್ರೆಸ್ ಅತೀವ ಹರ್ಷ ವ್ಯಕ್ತಪಡಿಸಿದೆ. ಲೋಕಸಭೆ ಚುನಾವಣೆಯಲ್ಲಿ ಆರಂಭವಾದ ಗೆಲುವಿನ ಟ್ರೆಂಡ್‌ ಮುಂದುವರಿದಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಸೋಲು ಅನುಭವಿಸಲಿದೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಹೇಳಿದ್ದಾರೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಗಳಾದ ಜೈರಾಂ ರಮೇಶ್‌ ಹಾಗೂ ಕೆ.ಸಿ. ವೇಣುಗೋಪಾಲ್ ಪ್ರತಿಕ್ರಿಯಿಸಿ, ಆಪರೇಶನ್‌ ಕಮಲದಂಥ ಪಕ್ಷಾಂತರ ದುಸ್ಸಾಹಸಗಳಿಗೆ ಜನರು ಪಾಠ ಕಲಿಸಿದ್ದಾರೆ ಎಂದು ಬಿಜೆಪಿಗೆ ಟಾಂಗ್‌ ನೀಡಿದ್ದಾರೆ.

ಜೂ.4 ಮೋದಿ ಮುಕ್ತಿ ದಿವಸ: ಕಾಂಗ್ರೆಸ್..!

ಯಾರಿಗೆ ಎಲ್ಲಿ ಗೆಲುವು?

  • ಕ್ಷೇತ್ರ ರಾಜ್ಯ ಗೆದ್ದ ಪಕ್ಷ ಹಿಂದೆ ಇದ್ದ ಪಕ್ಷ
  • ಡೆಹ್ರಾ ಹಿಮಾಚಲ ಕಾಂಗ್ರೆಸ್‌ ಪಕ್ಷೇತರ
  • ನಾಲಾಗಢ ಹಿಮಾಚಲ ಕಾಂಗ್ರೆಸ್‌ ಪಕ್ಷೇತರ
  • ಹಮೀರ್‌ಪುರ ಹಿಮಾಚಲ ಬಿಜೆಪಿ ಪಕ್ಷೇತರ
  • ಬದರೀನಾಥ ಉತ್ತರಾಖಂಡ ಕಾಂಗ್ರೆಸ್‌ ಕಾಂಗ್ರೆಸ್‌
  • ಮಂಗ್ಲೌರ್‌ ಉತ್ತರಾಖಂಡ ಕಾಂಗ್ರೆಸ್‌ ಬಿಎಸ್‌ಪಿ
  • ರಾಯ್‌ಗಂಜ್‌ ಬಂಗಾಳ ಟಿಎಂಸಿ ಬಿಜೆಪಿ
  • ರಾಣಾಘಾಟ್‌ ಬಂಗಾಳ ಟಿಎಂಸಿ ಬಿಜೆಪಿ
  • ಬಾಗ್ದಾ ಬಂಗಾಳ ಟಿಎಂಸಿ ಟಿಎಂಸಿ
  • ಮಾನಿಕ್‌ತಲ ಬಂಗಾಳ ಟಿಎಂಸಿ ಟಿಎಂಸಿ
  • ರುಪೌಲಿ ಬಿಹಾರ ಪಕ್ಷೇತರ ಜೆಡಿಯು
  • ಅಮರ್‌ವಾರಾ ಮ.ಪ್ರ. ಬಿಜೆಪಿ ಕಾಂಗ್ರೆಸ್‌
  • ಜಲಂಧರ್‌ ಪ. ಪಂಜಾಬ್‌ ಆಪ್‌ ಆಪ್‌
  • ವಿಕ್ರಾವಾಂಡಿ ತ.ನಾಡು ಡಿಎಂಕೆ ಡಿಎಂಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!