
ನವದೆಹಲಿ(ಜೂ.08): ಟ್ರಾಫಿಕ್ ತಿಳಿಗೊಳಿಸಲು ಖುದ್ದು ಸ್ಥಳಕ್ಕೆ ಹಾಜರಾದ ಪೊಲೀಸ್, ತ್ರಿಬಲ್ ರೈಡಿಂಗ್ ಮೂಲಕ ಸಾಗಿ ಬಂದ ಮಹಿಳೆ ಸ್ಕೂಟರ್ ನಿಲ್ಲಿಸಿದ್ದಾರೆ. ಇಷ್ಟೇ ನೋಡಿ. ರಂಪಾಟವೇ ನಡೆದು ಹೋಗಿದೆ. ಪೊಲೀಸ್ ವಿರುದ್ಧ ಗರಂ ಆದ ಮಹಿಳೆ ಕೆನ್ನಗೆ ಭಾರಿಸಿದ್ದಾಳೆ. ಸಾರ್ವಜನಿಕರು ಸೇರಿದ್ದಾರೆ. ಈ ವೇಳೆ ಪೊಲೀಸ್ ತನಗೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ, ಮಹಿಳೆ ಎಂದೂ ನೋಡದೆ ನೂಕಾಟ ತಳ್ಳಾಟ ನಡೆಸಿದ್ದಾರೆ ಎಂದು ಆರೋಪಿದ್ದಾಳೆ. ಇತ್ತ ಆಕ್ರೋಶಗೊಂಡ ಸಾರ್ವಜನಿಕರೂ ಪೊಲೀಸ್‌ಗೆ ಥಳಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ದಿಯೋಲಿ ರಸ್ತೆಯಲ್ಲಿನ ಟ್ರಾಫಿಕ್ ಕ್ಲೀಯರ್ ಮಾಡಲು ಟ್ರಾಫಿಕ್ ಇನ್ಸ್‌ಪೆಕ್ಟರ್ ಖುದ್ದು ಸ್ಥಳಕ್ಕೆ ಹಾಜರಾಗಿದ್ದಾರೆ. ಬೆಳಗ್ಗೆ 10 ಗಂಟೆಗೆ ಸಮಯದಲ್ಲಿ ಇದೇ ರಸ್ತೆಯಲ್ಲಿ ತ್ರಿಬಲ್ ರೈಡ್ ಮೂಲಕ ಮಹಿಳೆ ಸಾಗಿಬಂದಿದ್ದಾಳೆ. ಈ ವೇಳೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಪೊಲೀಸ್ ಸ್ಕೂಟಿ ತಡೆದು ನಿಲ್ಲಿಸಿದ್ದಾರೆ. ಸಿಟಿಗೆದ್ದ ಮಹಿಳೆ ಪೊಲೀಸ್ ಜೊತೆ ವಾಗ್ವಾದ ನಡೆಸಿದ್ದಾಳೆ. ಬಳಿಕ ಪೊಲೀಸ್‌ಗೆ ಕೆನ್ನಗೆ ಭಾರಿಸಿದ್ದಾರೆ.
ಬಾಲಕನ ಅಪಹರಿಸಿ 50 ಲಕ್ಷಕ್ಕೆ ಡಿಮ್ಯಾಂಡ್: ಸಿನಿಮೀಯ ರೀತಿಯಲ್ಲಿ ಬಾಲಕನ ರಕ್ಷಿಸಿದ ಪೊಲೀಸರು!
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸಾರ್ವಜನಿಕರು ಸೇರಿಕೊಂಡಿದ್ದಾರೆ. ಈ ವೇಳೆ ಪೊಲೀಸ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ. ತಳ್ಳಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಟ್ರಾಫಿಕ್ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನೂಕೂಟ ತಿಕ್ಕಾಟದಲ್ಲಿ ಕೆಲವರು ಪೊಲೀಸ್‌ಗೆ ಥಳಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ದಿಶಾ ರವಿ ಕೇಸ್ ಮಾಹಿತಿ ಸೋರಿಕೆ ಮಾಡಿಲ್ಲ: ದಿಲ್ಲಿ ಪೊಲೀಸ್
ಕೇಂದ್ರದ 3 ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಬೆಂಬಲಿಸಿ ಹೋರಾಟದ ರೂಪುರೇಷೆ ಹಂಚಿಕೆ ಮಾಡಿದ ಪ್ರಕರಣದಲ್ಲಿ ಬಂಧಿತಳಾದ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ದಿಶಾ ರವಿ ವಿರುದ್ಧ ದಾಖಲಾದ ಪ್ರಕರಣದ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿಲ್ಲ ಎಂದು ದೆಹಲಿ ಪೊಲೀಸರು ದಿಲ್ಲಿ ಹೈಕೋರ್ಟ್‌ಗೆ ಮಾಹಿತಿ ಸಲ್ಲಿಸಿದ್ದಾರೆ.
ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್‌ಗೆ ಅಫಿಡೇವಿಟ್ ಸಲ್ಲಿಸಿದ ದೆಹಲಿ ಪೊಲೀಸರು, ದಿಶಾರವಿ ಅವರ ಚಾಟಿಂಗ್ ಮತ್ತು ಇನ್ನಿತರ ಮಾಹಿತಿಗಳನ್ನು ಪೊಲೀಸರೇ ಸೋರಿಕೆ ಮಾಡಿದ್ದಾರೆ ಎಂಬ ಮಾಹಿತಿಯು ಸುಳ್ಳು ಮತ್ತು ವಾಸ್ತವಿಕವಾಗಿ ತಪ್ಪು ಎಂದಿದ್ದಾರೆ.
ಇನ್ನು ಈ ವೇಳೆ ದಿಶಾರವಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಖಿಲ್ ಸಿಬಲ್, ಪೊಲೀಸರು ತಮ್ಮಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎನ್ನುತ್ತಿದ್ದಾರೆ. ಆದರೆ ಪೊಲೀಸರಿಂದಲೇ ತಮಗೆ ಮಾಹಿತಿ ಲಭ್ಯವಾಗಿದೆ ಎಂದು ಮಾಧ್ಯಮಗಳೇ ಹೇಳಿವೆ. ಹೀಗಾಗಿ ತಮ್ಮ ಕಕ್ಷಿದಾರಳಿಗೆ ರಕ್ಷಣೆ ಮತ್ತು ಮಾರ್ಗಸೂಚಿಗಳ ಅಗತ್ಯವಿದೆ ಎಂದು ಹೇಳಿದರು.
ಮಹಿಳೆಯರಿಬ್ಬರ ಬರ್ಬರ ಕೊಲೆ ಪ್ರಕರಣ: ಕೇಸ್ ಭೇದಿಸಲು 7 ಪ್ರತ್ಯೇಕ ತಂಡ ರಚನೆ
ಕೇಂದ್ರದ 3 ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದ ರೂಪುರೇಷೆ (ಟೂಲ್ ಕಿಟ್)ಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆ ಮಾಡಿದ ಸಂಬಂಧ ಫೆ.13ರಂದು ದಿಶಾರವಿ ಅವರನ್ನು ಬಂಧಿಸಲಾಗಿತ್ತು. ಕೊನೆಗೆ ಫೆ.23ರಂದು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ