Asianet Suvarna News Asianet Suvarna News

Mandya: ಮಹಿಳೆಯರಿಬ್ಬರ ಬರ್ಬರ ಕೊಲೆ ಪ್ರಕರಣ: ಕೇಸ್ ಭೇದಿಸಲು 7 ಪ್ರತ್ಯೇಕ ತಂಡ ರಚನೆ

* ಭಯಾನಕ ಕೃತ್ಯಕ್ಕೆ ಬೆಚ್ಚಿಬಿದ್ದ ಸಕ್ಕರೆ ನಾಡು.
* ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯರಿಬ್ಬರ ಶವ.
* ಮೃತದೇಹದ ಮೇಲ್ಭಾಗಕ್ಕಾಗಿ ಮುಂದುವರಿದ ಶೋಧ.

7 Separate Team Probe For Women Brutal Murder Case in Mandya grg
Author
Bengaluru, First Published Jun 8, 2022, 3:04 PM IST

ಮಂಡ್ಯ (ಜೂ.08): ತುಂಡರಿಸಿದ ಸ್ಥಿತಿಯಲ್ಲಿ ಮಹಿಳೆಯರಿಬ್ಬರ ಮೃತದೇಹ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾದ ಭಯಾನಕ ಘಟನೆ ಮಂಡ್ಯದಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಕಾಲುವೆಯಲ್ಲಿ ಒಂದು ಶವ ಮತ್ತೊಂದು ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಕಾಲುವೆಯಲ್ಲಿ ಪತ್ತೆಯಾಗಿದೆ. ಬೇಬಿ ಗ್ರಾಮದ ಕಾಲುವೆಯಲ್ಲಿ ಮಂಗಳವಾರ ಸಂಜೆ ಶವ ತೇಲಿ ಬಂದಿದ್ದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರು ಶವ ಕಂಡು ಬೆಚ್ಚಿಬಿದ್ದಿದ್ದು, ಅರಕೆರೆ ಗ್ರಾಮದ ನಾಲೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಮೃತ ದೇಹ ಕಂಡು ತಕ್ಷಣ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು.

ದೇಹ ತುಂಡರಿಸಿ ನದಿಗೆ ಎಸೆದ ಹಂತಕರು: ಬೇಬಿ ಗ್ರಾಮದ ಕಾಲುವೆಯಲ್ಲಿ 30-32 ವರ್ಷದ ಮಹಿಳೆಯ ಶವ ಪತ್ತೆಯಾದರೆ. ಶ್ರೀರಂಗಪಟ್ಟಣದ ಅರಕೆರೆ ಗ್ರಾಮದ ದೇವರಾಜ ನಾಲೆಯಲ್ಲಿ 40-42 ವರ್ಷ ವಯಸ್ಸಿನ ಮಹಿಳೆಯ ಶವ ಪತ್ತೆಯಾಗಿದೆ. ಕೊಲೆಗೈದು ದೇಹ ತುಂಡರಿಸಿ ನದಿಗೆ ಎಸೆದಿರುವ ಶಂಕೆ ವ್ತಕ್ತವಾಗಿದೆ. ಎರಡು ಮೃತ ದೇಹಗಳ ಕೆಳಭಾಗ‌ ಪತ್ತೆಯಾಗಿದೆ. ಮೇಲ್ಭಾಗಕ್ಕಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಇಬ್ಬರು ಮಹಿಳೆಯರನ್ನು ಒಂದೇ ರೀತಿ ಕೊಲೆಗೈದಿರುವ‌ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು. ಸೊಂಟದ ಕೆಳ ಭಾಗ ಕತ್ತರಿಸಿ ಕಾಲುಗಳ ಹಗ್ಗದಲ್ಲಿ ಕಟ್ಟಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

PUB-G ಆಡಲು ಬಿಡಲಿಲ್ಲವೆಂದು ಅಮ್ಮನನ್ನೇ ಕೊಂದ ಮಗ: ಮಕ್ಕಳ ಮಾನಸಿಕ ಆರೋಗ್ಯದ ಮೇಲಿರಲಿ ಗಮನ

ತನಿಖೆಗೆ 7 ತಂಡ ರಚನೆ, ತಂಡಗಳಿಂದ ಪ್ರತ್ಯೇಕ ತನಿಖೆ: ಮಹಿಳೆರಿಬ್ಬರ ಬರ್ಬರ ಹತ್ಯೆ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಮಂಡ್ಯ ಪೊಲೀಸ್ ಇಲಾಖೆ. ಭೀಕರ ಕೊಲೆ ಕೇಸ್ ಭೇದಿಸಲು 7 ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದಾರೆ. ಎಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ತಂಡಗಳು ರಚನೆಯಾಗಿದೆ. ಹಿರಿಯ ಅಧಿಕಾರಿಗಳು ಸೇರಿದಂತೆ 30ಕ್ಕೂ ಹೆಚ್ಚು ಸಿಬ್ಬಂದಿಗಳು ತಂಡದಲ್ಲಿದ್ದಾರೆ. ಒಂದೆಡೆ ದೇಹದ ಉಳಿದ ಭಾಗಕ್ಕಾಗಿ ಶೋಧ ಕಾರ್ಯ ಮುಂದುವರೆದರೆ. ಮತ್ತೊಂದೆಡೆ ನಾಪತ್ತೆ ದೂರು ಬಗ್ಗೆ ಎಲ್ಲಾ ಪೊಲೀಸ್ ಠಾಣೆಗಳಿಂದ ಮಾಹಿತಿ ಸಂಗ್ರಹ ಮಾಡಲಾಗ್ತಿದೆ. 7 ತಂಡಗಳಿಂದಲೂ ಪ್ರತ್ಯೇಕವಾಗಿ ತನಿಖೆ ಆರಂಭಗೊಂಡಿದೆ. ಈ ಬಗ್ಗೆ ಮಂಡ್ಯ ಎಎಸ್ಪಿ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios