Rekha Gupta: ಸ್ಪೇರ್‌ ಪಾರ್ಟ್ಸ್‌ ಉದ್ಯಮಿಯ ಪತ್ನಿಈಗ ದೆಹಲಿಯ ಸಿಎಂ!

Published : Feb 19, 2025, 08:46 PM ISTUpdated : Feb 19, 2025, 08:57 PM IST
Rekha Gupta: ಸ್ಪೇರ್‌ ಪಾರ್ಟ್ಸ್‌ ಉದ್ಯಮಿಯ ಪತ್ನಿಈಗ ದೆಹಲಿಯ ಸಿಎಂ!

ಸಾರಾಂಶ

ಆರೆಸ್ಸೆಸ್ ಮತ್ತು ಎಬಿವಿಪಿ ಹಿನ್ನೆಲೆಯ ರೇಖಾ ಗುಪ್ತಾ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಬನಿಯಾ ಸಮುದಾಯದ ಪ್ರಾಬಲ್ಯ ಮತ್ತು ಮಹಿಳಾ ಮತಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಆಯ್ಕೆ ಮಾಡಿದೆ.

ಬೆಂಗಳೂರು (ಫೆ.19): ಬಾಲ್ಯದಿಂದಲೂ ಆರೆಸ್ಸೆಸ್‌ ಎಬಿವಿಪಿ ಜೊತೆ ಸಹಯೋಗ ಹೊಂದಿದ್ದ 50 ವರ್ಷದ ರೇಖಾ ಗುಪ್ತಾಗೆ ದೆಹಲಿಯ ಮುಖ್ಯಮಂತ್ರಿ ಜಾಕ್‌ಪಾಟ್‌ ಸಿಕ್ಕಿದೆ. ಬುಧವಾರ ದೆಹಲಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ರೇಖಾ ಗುಪ್ತಾ ಹೆಸರನ್ನು ಅಂತಿಮಗೊಳಿಸಲಾಗಿದೆ. ರಿಸಲ್ಟ್‌ ಬಂದು 11 ದಿನಗಳ ಬಳಿಕ ದೆಹಲಿಗೆ ಸಿಎಂ ಹೆಸರು ಅಧಿಕೃತವಾಗಿದೆ. ದೆಹಲಿಯ ಶಾಲಿಮಾರ್‌ ಭಾಗ್‌ ಕ್ಷೇತ್ರದ ಶಾಸಕಿಯಾಗಿರುವ ರೇಖಾ ಗುಪ್ತಾ ಹೆಸರನ್ನು ಸಿಎಂ ಸ್ಥಾನಕ್ಕೆ ಆರೆಸ್ಸೆಸ್‌ ಸೂಚಿಸಿತ್ತು ಎನ್ನಲಾಗಿದೆ. ಆರೆಸ್ಸೆಸ್ ಸೂಚನೆಯನ್ನು ಒಪ್ಪಿಕೊಂಡ ಶಾಸಕಾಂಗ ಸಭೆ ರೇಖಾ ಗುಪ್ತಾರನ್ನು ಸಿಎಂ ಆಗಿ ಘೋಷಣೆ ಮಾಡಿದೆ. 

1974ರ ಜುಲೈ 19 ರಂದು ಹರಿಯಾಣದ ಜುಲನಾದಲ್ಲಿ ಜನಿಸಿದ್ದ ರೇಖಾ ಗುಪ್ತಾ, ಬಿಕಾಂ ಪದವಿಯೊಂದಿಗೆ ಎಲ್‌ಎಲ್‌ಬಿಯನ್ನೂ ಪೂರೈಸಿದ್ದಾರೆ. ಇವರ ಪತಿ ಮನೀಷ್‌ ಗುಪ್ತಾ. ರೇಖಾ 1998 ರಲ್ಲಿ ಮನೀಶ್ ಗುಪ್ತಾ ಅವರನ್ನು ವಿವಾಹವಾದರು. ಮನೀಶ್  ಸ್ಪೇರ್‌ ಪಾರ್ಟ್ಸ್‌ಗಳ ವ್ಯವಹಾರ ನಡೆಸುತ್ತಿದ್ದಾರೆ. ರೇಖಾ ಈ ಹಿಂದೆ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಮೊದಲ ಬಾರಿಗೆ ಅವರು 11 ಸಾವಿರ ಮತಗಳಿಂದ ಸೋತಿದ್ದರೆ, ಮತ್ತು ಕಳೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವಂದನಾ ವಿರುದ್ಧ ನಾಲ್ಕೂವರೆ ಸಾವಿರ ಮತಗಳಿಂದ ಸೋತಿದ್ದರು.

ರೇಖಾ ಅವರ ಅಜ್ಜ ಮಣಿರಾಮ್ ಮತ್ತು ಕುಟುಂಬ ಸದಸ್ಯರು ಹರಿಯಾಣದ ಜುಲಾನಾದಲ್ಲಿ ವಾಸಿಸುತ್ತಿದ್ದರು. ಅವರ ತಂದೆ ಜೈ ಭಗವಾನ್ 1972-73ರಲ್ಲಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮ್ಯಾನೇಜರ್‌ ಆದ ಬಳಿಕ, ಅವರನ್ನು ದೆಹಲಿಗೆ ಟ್ರಾನ್ಸಫರ್‌ ಮಾಡಲಾಯಿತು. ಆ ಬಳಿಕ ಅವರ ಇಡೀ ಕುಟುಂಬ ದೆಹಲಿಗೆ ಸ್ಥಳಾಂತರಗೊಂಡಿತು. ರೇಖಾ ಗುಪ್ತಾ ಅವರ ಇಡೀ ಶಾಲಾ ಶಿಕ್ಷಣ ದೆಹಲಿಯಲ್ಲಿಯೇ ಆಗಿತ್ತು.. ದೆಹಲಿಯ ದೌಲತ್ ರಾಮ್ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದ ಬಳಿಕ, ನಂತರ ಎಲ್‌ಎಲ್‌ಬಿ ಪದವಿಯನ್ನೂ ಪಡೆದರು. ಅವರು ಸ್ವಲ್ಪ ಕಾಲ ಕಾನೂನು ಅಭ್ಯಾಸ ಮಾಡಿದರು.

ದೆಹಲಿಯ ನಾಲ್ಕನೇ ಮಹಿಳಾ ಸಿಎಂ ಇವರಾಗಿದ್ದಾರೆ. 27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರಕ್ಕೆ ಗದ್ದುಗೆ ಏರಿದ ಬಿಜೆಪಿಯ 2ನೇ ಮಹಿಳಾ ಸಿಎಂ ಇವರಾಗಿದ್ದಾರೆ. ಕಾಂಗ್ರೆಸ್‌ನ ಶೀಲಾ ದೀಕ್ಷಿತ್‌ 15 ವರ್ಷ 25 ದಿನಗಳ ಕಾಲ ದೆಹಲಿ ಸಿಎಂ ಸ್ಥಾನದಲ್ಲಿದ್ದರು. ಸುಷ್ಮಾ ಸ್ವರಾಜ್‌ 52 ದಿನಗಳ ಕಾಲ ದೆಹಲಿಯ ಸಿಎಂ ಆಗಿದ್ದರೆ, ಆಮ್‌ ಆದ್ಮಿ ಪಾರ್ಟಿಯ ಆತಿಶಿ ಮರ್ಲೇನಾ 4 ತಿಂಗಳು 18 ದಿನಗಳ ಕಾಲ ಈ ಪದವಿಯಲ್ಲಿದ್ದರು. ರಾತ್ರಿ 8.50ಕ್ಕೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ಅನ್ನು ಭೇಟಿಯಾಗಲಿರುವ ರೇಖಾ ಗುಪ್ತಾ, ಹೊಸ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.

Breaking: ಆರೆಸ್ಸೆಸ್‌ ಸೂಚಿಸಿದ್ದ ರೇಖಾ ಗುಪ್ತಾಗೆ ಒಲಿದ ದೆಹಲಿ ಸಿಎಂ ಪಟ್ಟ!

ರೇಖಾ ಗುಪ್ತಾ ಆಯ್ಕೆಗೆ ಮೂರು ಕಾರಣಗಳು:  ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಂತೆಯೇ ರೇಖಾ ಕೂಡ ಬನಿಯಾ ಸಮುದಾಯದವರು. ದೆಹಲಿಯಲ್ಲಿ  ಬನಿಯಾ ಸಮುದಾಯ ಪ್ರಾಬಲ್ಯ ಹೊಂದಿದೆ. ಅವರನ್ನು ಯಾವಾಗಲೂ ಬಿಜೆಪಿಯ ಪ್ರಮುಖ ಮತದಾರರೆಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ, ಮುಖ್ಯಮಂತ್ರಿ ಹುದ್ದೆಗೆ ಮೂವರು ಬಿಜೆಪಿ ನಾಯಕರ ಹೆಸರುಗಳು ರೇಸ್‌ನಲ್ಲಿದ್ದವು.  ದೆಹಲಿ ಮಹಿಳಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು 48 ಸ್ಥಾನಗಳನ್ನು ಗೆದ್ದು, ಒಟ್ಟು 45.56% ಮತಗಳನ್ನು ಗಳಿಸಿತು. ಇದಕ್ಕೆ ಪ್ರಮುಖ ಕಾರಣವೆಂದರೆ ಬಿಜೆಪಿ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಘೋಷಿಸಿತ್ತು. ಮಹಿಳಾ ಮತಗಳನ್ನು ಹೆಚ್ಚಾಗಿ ಸೆಳೆದ ಕಾರಣಕ್ಕಾಗಿ ಮಹಿಳೆಯನ್ನೇ ಸಿಎಂ ಮಾಡುವ ನಿರ್ಧಾರ ಬಿಜೆಪಿ ಮಾಡಿತ್ತು.

ದೆಹಲಿ ಸಿಎಂ ಇಂದು ಸಂಜೆ ಘೋಷಣೆ, ರಾಮ್‌ಲೀಲಾ ಮೈದಾನದಲ್ಲಿ ಪ್ರಮಾಣ ವಚನಕ್ಕೆ ಬಿಜೆಪಿ ಭರದ ಸಿದ್ದತೆ

ದೆಹಲಿಯಲ್ಲಿ ಇಲ್ಲಿಯವರೆಗೆ ಶೀಲಾ ದೀಕ್ಷಿತ್, ಸುಷ್ಮಾ ಸ್ವರಾಜ್ ಮತ್ತು ಅತಿಶಿ ಎಂಬ ಮೂವರು ಮಹಿಳಾ ಮುಖ್ಯಮಂತ್ರಿಗಳಿದ್ದಾರೆ. ರೇಖಾ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಬಿಜೆಪಿ ಮಹಿಳೆಯರನ್ನು ಓಲೈಸಲು ಪ್ರಯತ್ನ ಮಾಡಿತ್ತು.ಮೂಲಗಳ ಪ್ರಕಾರ, ಶಾಸಕಾಂಗ ಪಕ್ಷದ ಸಭೆಗೆ ಮೊದಲು, ಆರ್‌ಎಸ್‌ಎಸ್ ಅವರ ಹೆಸರನ್ನು ಪ್ರಸ್ತಾಪಿಸಿತು, ಅದನ್ನು ಬಿಜೆಪಿ ಅಂಗೀಕರಿಸಿತು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಹರಿಯಾಣ ಸಿಎಂ ನಯಾಬ್ ಸೈನಿ ಅವರಂತಹ ಬಿಜೆಪಿಯ ಪ್ರಮುಖರು ಅವರ ಪರವಾಗಿ ಪ್ರಚಾರ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌