ರಾಜಕೀಯ ಪ್ರೇರಿತ ಬಂಧನ ಎಂದ ಆಪ್‌ಗೆ ತೀವ್ರ ಹಿನ್ನಡೆಯಾಗಿದೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಜೈಲೈ ಗತಿಯಾಗಿದೆ. ಉಪಮುಖ್ಯಮಂತ್ರಿಯನ್ನು 5 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಲು ಕೋರ್ಟ್ ಸೂಚಿಸಿದೆ
ದೆಹಲಿ(ಫೆ.27): ಅಬಕಾರಿ ನೀತಿ ಹಗರಣ ಆಮ್ ಆದ್ಮಿ ಪಾರ್ಟಿ ಓಟಕ್ಕೆ ತೀವ್ರ ಆಘಾತ ನೀಡಿದೆ. ಅಬಕಾರಿ ನೀತಿ ಅಕ್ರಮ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಹಲವು ಬಾರಿ ಮನೀಶ್ ಸಿಸೋಡಿಯಾ ವಿಚಾರಣೆ ನಡೆಸಿದೆ. ಫೆ.26 ರಂದು ಸತತ 8 ಗಂಟೆಗಳ ವಿಚಾರಣೆ ನಡೆಸಿದ ಸಿಬಿಐ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಬಂಧಿಸಿತ್ತು. ಇದು ಆಮ್ ಆದ್ಮಿ ಪಾರ್ಟಿ ಕೆರಳಿಸಿತ್ತು. ಇದು ರಾಜಕೀಯ ಪ್ರೇರಿತ ದಾಳಿ ಎಂದು ಕೇಂದ್ರ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡಿತ್ತು. ಇದೀಗ ಆಮ್ ಆದ್ಮಿ ಪಾರ್ಟಿಗೆ ಮತ್ತೆ ಹಿನ್ನಡೆಯಾಗಿದೆ. ಬಂಧಿತ ಮನೀಶ್ ಸಿಸೋಡಿಯರನ್ನು ದೆಹಲಿ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. ಇದೀಗ ಕೋರ್ಟ್ 5 ದಿನಗಳ ಕಾಲ ಮತ್ತೆ ಸಿಬಿಐ ವಶಕ್ಕೆ ನೀಡಿದೆ. ದೆಹಲಿ. ರೌಸ್ ಅವೆನ್ಯೂ ಕೋರ್ಟ್ ನ್ಯಾಯಾಧೀಶ ಎಂಕೆ ನಾಗಪಾಲ್ ಮಹತ್ವದ ಆದೇಶ ನೀಡಿದ್ದಾರೆ.ಮಾರ್ಚ್ 4ರ ವೆರೆಗೆ ಸಿಸೋಡಿಯಾ ಸಿಬಿಐ ಕಸ್ಟಡಯಲ್ಲಿ ಇರಲಿದ್ದಾರೆ. ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.
ಸಿಬಿಐ ಪರವಾಗಿ ಅಡ್ವೋಕೇಟ್ ಪಂಕಜ್ ಗುಪ್ತಾ ವಾದಿಸಿ 5 ದಿನಗಳ ಕಾಲ ಸಿಬಿಐ ಕಸ್ಡಡಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮನೀಶ್ ಸಿಸೋಡಿಯಾ ಪರ ವಕೀಲ ಧ್ಯಾನ್ ಕೃಷ್ಣನ್ ವಾದಿಸಿದ್ದಾರೆ. ದೆಹಲಿ ಸಿಎಂ, ಆಪ್ ಮುಖ್ಯಸ್ಥ ಅರವಿಂದ್ ಮಾಡಿದ ಆರೋಪಗಳನ್ನು ನ್ಯಾಯಾಲದಲ್ಲಿ ಪ್ರಸ್ತಾಪಿಸಲಾಗಿದೆ. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಧ್ಯಾನ್ ಕೃಷ್ಣನ್ ವಾದಿಸಿದ್ದರು.
ಮನೀಶ್ ಸಿಸೋಡಿಯಾ ಬಂಧನ ವಿರೋಧಿಸಿ ದೇಶಾದ್ಯಂತ ಆಪ್ ಪ್ರತಿಭಟನೆ!
ಮನೀಶ್ ಸಿಸೋಡಿಯಾ ಸಿಬಿಐ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಅಬಕಾರಿ ನೀತಿಯ ಮೊದಲ ಕರಡಿನಲ್ಲಿರುವ 6 ವಿವಾದಾತ್ಮ ನಿಬಂಧನೆ ವಿವರಿಸಲು ಸಿಸೋಡಿಯ ವಿಫಲರಾಗಿದ್ದಾರೆ. ಮದ್ಯ ಲಾಬಿ ಕಾರಣಕ್ಕೆ ಕೆಲ ಬದಲಾವಣೆ ಮಾಡಲಾಗಿದೆ ಅನ್ನೋ ಆರೋಪಕ್ಕೂ ಉತ್ತರ ನೀಡಿಲ್ಲ ಎಂದು ಸಿಬಿಐ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸಿಸಿಡಿಯೋ ಅವರ ಕಂಪ್ಯೂಟರ್‌ನಿಂದ ಕರಡು ಪ್ರತಿ ಪಡೆಯಲಾಗಿದೆ. ಇದರಲ್ಲಿ ಲಾಭದ ಶೇಕಡಾವನ್ನು 5 ರಿಂದ 12ಕ್ಕೆ ಏರಿಸಲಾಗಿದೆ. ಈ ಕುರಿತು ಕಾನೂನು ತಜ್ಞರ ಅಭಿಪ್ರಾಯ ಕಡೆಗಣಿಸಿದ್ದಾರೆ ಎಂದು ನ್ಯಾಯಾಲಕ್ಕೆ ವಿವರಿಸಲಾಗಿದೆ.
Delhi Excise Policy Case: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ!
ಸಿಸೋಡಿಯಾ ಬಂಧನ ವಿರುದ್ಧ ದೇಶಾದ್ಯಂತ ಆಪ್ ಪ್ರತಿಭಟನೆ
ದೆಹಲಿಯ ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನವನ್ನು ಖಂಡಿಸಿ ಆಮ್ ಆದ್ಮಿ ಪಕ್ಷ ಸೋಮವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದೆ.ದೆಹಲಿ, ಭೋಪಾಲ್ ಮತ್ತು ಚಂಡೀಗಢದಲ್ಲಿ ಬಿಜೆಪಿ ಕಚೇರಿಗಳ ಮುಂದೆ ಆಪ್ ಪ್ರತಿಭಟನೆ ನಡೆಸಿದೆ.ದೆಹಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 200 ಮಂದಿಯನ್ನು ಕರೆತರುವಂತೆ ಪ್ರತಿ ಶಾಸಕರಿಗೂ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರಿ ಜನರು ಸೇರಿ ಸಾಂಕೇತಿಕವಾಗಿ ಕೈಗೆ ಕೋಳ ತೊಟ್ಟು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಾಗೆಯೇ ಈ ದಿನವನ್ನು ಆಪ್ ‘ಬ್ಲಾಕ್ ಡೇ’ ಎಂದು ಕರೆದಿದೆ. ಬಹುತೇಕ ಆಪ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದೆ. ಅಲ್ಲದೆ, ಗೌತಮ್ ಅದಾನಿ ವಿವಾದ ಮುಚ್ಚಿಹಾಕಲು ಸಿಸೋಡಿಯಾರನ್ನು ಬಂಧಿಸಲಾಗಿದೆ ಎಂದು ಆಪ್ ಆರೋಪಿಸಿದೆ.ದೆಹಲಿಯಲ್ಲಿ ಭಾನುವಾರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಸದ ಸಂಸದ ಸಂಜಯ್ ಸಿಂಗ್, ಸಚಿವ ಗೋಪಾಲ್ ರೈ ಸೇರಿದಂತೆ 50 ಜನರನ್ನು ಬಂಧಿಸಲಾಗಿತ್ತು. ಎಲ್ಲರನ್ನೂ ಸೋಮವಾರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಇದೇ ವೇಳೆ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಸಿಸೋಡಿಯಾ ಅವರ ಬಂಧನವನ್ನು ಸಿಬಿಐ ಅಧಿಕಾರಿಗಳೇ ವಿರೋಧಿಸಿದ್ದಾರೆ ಎಂದು ಹೇಳಿದ್ದಾರೆ.