ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತೆಲಂಗಾಣ ಸಿಎಂ ಕೆಸಿಆರ್ ಅವರ ಪುತ್ರಿ ಕೆ.ಕವಿತಾ ಅವರ ಹೆಸರು ಕೂಡ ಇರುವ ರಿಮಾಂಡ್ ನೋಟ್‌ಅನ್ನು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಸಲ್ಲಿಸಿದೆ.
ನವದೆಹಲಿ (ಡಿ.1): ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ಕೊನೆಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕುಟುಂಬದವರೆಗೆ ಬಂದು ಮುಟ್ಟಿದೆ. ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಕೆಸಿಆರ್ ಪುತ್ರಿ ಕೆ.ಕವಿತಾ ಅವರ ಹೆಸರನ್ನು ಜಾರಿ ನಿರ್ದೇಶನಾಲಯ ಕೋರ್ಟ್‌ಗೆ ಸಲ್ಲಿಸಿರುವ ರಿಮಾಂಡ್ ನೋಟ್‌ನಲ್ಲಿ ಹೆಸರಿದೆ. ಆಮ್ ಆದ್ಮಿ ಪಾರ್ಟಿಗೆ ಹೆಜ್ಜೆ ಹೆಜ್ಜೆಗೂ ಕಂಟಕವಾಗಿರುವ ದೆಹಲಿ ಸರ್ಕಾರದ ನೂತನ ಮದ್ಯ ನೀತಿಯ ಕುರಿತಾಗಿ ಇಡಿಯ ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಭಾಗಿಯಾಗಿರುವ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿ ಕೆ ಕವಿತಾ ಅವರನ್ನು ಹೆಸರಿಸಲಾಗಿದೆ. ಇಡಿ ನಡೆಸಿದ ತನಿಖೆಯಲ್ಲಿ ಕೆ ಕವಿತಾ "ಸೌತ್ ಗ್ಯಾಂಗ್" ನ ಸದಸ್ಯೆಯಾಗಿದ್ದು, ಮದ್ಯದ ಅಬಕಾರಿ ನೀತಿ ಜಾರಿಯ ಸಮಯದಲ್ಲಿ ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರಕ್ಕೆ 100 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಪಾವತಿ ಮಾಡಿದೆ ಎನ್ನಲಾಗಿದೆ. ರಿಮಾಂಡ್ ವರದಿಯ ಪ್ರಕಾರ, ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಉದ್ಯಮಿ ವಿಜಯ್ ನಾಯರ್ ಅವರು ‘ಸೌತ್ ಗ್ರೂಪ್’ ಎಂಬ ಗುಂಪಿನಿಂದ ಎಎಪಿ ನಾಯಕರ ಪರವಾಗಿ 100 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
Telangana | Modi govt came 8 yrs ago & in these 8 yrs democratically elected govt in 9 states were toppled while BJP formed its govts in inappropriate way. Every child in country knows ED arrives before PM Modi in poll-bound states.This has happened in Telangana:TRS MLC K Kavitha pic.twitter.com/69rhaLiV3e
— ANI (@ANI)
ಎಎಪಿ ನಾಯಕರ ಕ್ರಿಮಿನಲ್ ಪಿತೂರಿಯ ಕಾರಣದಿಂದಾಗಿ ನೀತಿಯು ಅಕ್ರಮವಾಗಿ ಕಾರ್ಟೆಲ್ ರಚನೆಗಳನ್ನು ಉತ್ತೇಜಿಸಿದೆ ಎಂದು ಹೇಳುತ್ತದೆ, ಅತಿಯಾದ ಸಗಟು (ಶೇ. 12) ಮತ್ತು ಭಾರಿ ಚಿಲ್ಲರೆ (ಶೇ. 185) ಲಾಭಾಂಶ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಇದು ಉತ್ತೇಜನ ನೀಡಿತ್ತು ಎನ್ನಲಾಗಿದೆ. ಇನ್ನು ತಮ್ಮ ವಿರುದ್ಧ ಬಂದಿರುವ ಆರೋಪಗಳಿಗೆ ಕೆ.ಕವಿತಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತೆಲಂಗಾಣದಲ್ಲಿ ಟಿಆರ್‌ಎಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ತಮ್ಮ ವಿರೋಧಿ ಪಕ್ಷದವರಿಗೆ ಕೇಂದ್ರದ ಏಜೆನ್ಸಿಗಳ ಮೂಲಕ ಬೆದರಿಸುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭ್ಯಾಸ ಎಂದು ಆರೋಪ ಮಾಡಿದ್ದಾರೆ.
'ಪ್ರಧಾನಿ ಮೋದಿ ನಮ್ಮನ್ನು ಬೇಕಾದರೆ ಜೈಲಿಗೆ ಕಳಿಸಲಿ. ಆದರೆ, ಜನರಿಗಾಗಿ ನಮ್ಮ ಕೆಲಸ ಖಂಡಿತವಾಗಿ ಮುಂದುವರಿಯುತ್ತದೆ. ನಾವು ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಲೇ ಇರುತ್ತೇವೆ. ತೆಲಂಗಾಣದಲ್ಲಿ ಟಿಆರ್‌ಎಸ್ ಸರ್ಕಾರ ಸರಾಗವಾಗಿ ಮುನ್ನಡೆಯುತ್ತಿದೆ. ತೆಲಂಗಾಣ ಸರ್ಕಾರವನ್ನು ಉರುಳಿಸುವ ಅವರ ತಂತ್ರವನ್ನು ನಾವು ಬಹಿರಂಗ ಮಾಡಿದ್ದೆವು. ತೆಲಂಗಾಣದ ಜನತೆ ಕೂಡ ಇದನ್ನು ನೋಡಿದ್ದಾರೆ' ಎಂದು ಕೆಸಿಆರ್ ಪುತ್ರಿ ಹೇಳಿದ್ದಾರೆ. ಮುಂದಿನ ವರ್ಷ ತೆಲಂಗಾಣದಲ್ಲಿ ಚುನಾವಣೆ ನಡೆಯಬೇಕಿದೆ. ನಿರೀಕ್ಷೆಯಂತೆ ಪ್ರಧಾನಿ ಮೋದಿಗೂ ಮುನ್ನ ಕೇಂದ್ರದ ಏಜೆನ್ಸಿಯಾಗಿರುವ ಇಡಿ ತೆಲಂಗಾಣವನ್ನು ತಲುಪಿದೆ. ನಾವು ಅವರನ್ನು ಸ್ವಾಗತಿಸಿದ್ದೇವೆ ಹಾಗೂ ಅವರಿಗೆ ಸಹಕಾರ ನೀಡುತ್ತೇವೆ. ಹಾಗಿದ್ದರೂ ಬಿಜೆಪಿ ಅಗ್ಗದ ತಂತ್ರಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಸತತ 9 ಗಂಟೆ ಮನೀಶ್ ಸಿಸೋಡಿಯಾ ವಿಚಾರಣೆ, ಇದು ಆಪರೇಶನ್ ಕಮಲದ ಪ್ರಯತ್ನ ಎಂದ ಆಪ್ ನಾಯಕ
ಇಡಿ ಹೆಸರಿಸಿರುವ ಸೌತ್ ಗ್ರೂಪ್‌ನಲ್ಲಿ ಕೆ.ಕವಿತಾ ಅಲ್ಲದೆ, ಶರತ್ ರೆಡ್ಡಿ ಹಾಗೂ ಮಾಗುಂಟಾ ಶ್ರೀನಿವಾಸುಲು ರೆಡ್ಡಿ ಅವರ ಹೆಸರು ಕೂಡ ಇದೆ. ವಿಜಯ್ ನಾಯರ್ ಅಲ್ಲದೆ, ಅಮಿತ್ ಅರೋರಾ ವ್ಯಕ್ತಿಯನ್ನು ಕೂಡ ಬಂಧಿಸಲಾಗಿದ್ದು, ಸೌತ್ ಗ್ರೂಪ್‌ನ ಪಾತ್ರವನ್ನು ಆತ ಕೂಡ ತಿಳಿಸಿದ್ದಾನೆ.
ಅಬಕಾರಿ ಹಗರಣ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪಿಎ ಅರೆಸ್ಟ್!
ಮದ್ಯದ ಕಂಪನಿ ಬಡ್ಡಿ ರೀಟೇಲ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಮಿತ್ ಅರೋರಾ ಅವರನ್ನು ಮಂಗಳವಾರ ರಾತ್ರಿ ಬಂಧಿಸಿದ ನಂತರ ಸ್ಥಳೀಯ ನ್ಯಾಯಾಲಯದಿಂದ ಕಸ್ಟಡಿಗೆ ಕೋರುವಾಗ ಇಡಿಯು ಈ ಹಕ್ಕುಗಳನ್ನು ಕೇಳಿದೆ. ನಂತರ ಅವರನ್ನು ನ್ಯಾಯಾಲಯ ಡಿಸೆಂಬರ್ 7 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಿದೆ. ಕೋರ್ಟ್‌ಗೆ ಇಡಿ ಸಲ್ಲಿಸಿರುವ ರಿಮಾಂಡ್ ನೋಟ್‌ನಲ್ಲಿ, ಸರ್ಕಾರದ ಭಾಗವಾಗಿರುವ ಕೆಲವು ಆಪ್ ನಾಯಕರು ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರಾಜ್ಯದ ಖಜಾನೆಯ ವೆಚ್ಚದಲ್ಲಿ ಅಕ್ರಮ ಹಣವನ್ನು ಉತ್ಪಾದಿಸುವ "ಸಾಧನ" ಎಂದು ಪರಿಗಣಿಸಿದ್ದರು ಎಂದು ಸಂಸ್ಥೆ ಹೇಳಿಕೊಂಡಿದೆ.