ಅರವಿಂದ್‌ ಕೇಜ್ರಿವಾಲ್‌ ಬಂಧನ ವಿರೋಧಿಸಿ ವಕೀಲರ ಪ್ರತಿಭಟನೆ, ಎಚ್ಚರಿಕೆ ನೀಡಿದ ದೆಹಲಿ ಹೈಕೋರ್ಟ್‌

By Santosh Naik  |  First Published Mar 27, 2024, 3:58 PM IST


ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಪ್ರತಿಭಟನೆಯ ಕರೆಗೆ ಸಂಬಂಧಿಸಿದಂತೆ ಎಎಪಿಯ ಲೀಗಲ್‌ ಸೆಲ್‌ಗೆ ಎಚ್ಚರಿಕೆ ನೀಡಿದ ದೆಹಲಿ ಹೈಕೋರ್ಟ್ ಸಂಭಾವ್ಯ ಪರಿಣಾಮಗಳ ಬಗ್ಗೆ ವಕೀಲರಿಗೆ ಎಚ್ಚರಿಕೆ ನೀಡಿದೆ.
 


ನವದೆಹಲಿ (ಮಾ.27): ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾನೂನು ಘಟಕಕ್ಕೆ ದೆಹಲಿ ಹೈಕೋರ್ಟ್ ಬುಧವಾರ ಕಠಿಣ ಎಚ್ಚರಿಕೆ ನೀಡಿದೆ. ಹಾಗೇನಾದರೂ ಪ್ರತಿಭಟನೆ ನಡೆಸಿದಲ್ಲಿ ಅವರ ತಮ್ಮನ್ನು ತಾವು ಅಪಾಯಕ್ಕೆ ಸಿಕ್ಕಿಸಿಕೊಂಡಂತಾಗುತ್ತದೆ ಎಂದು ತಿಳಿಸಿದೆ. ಮಾರ್ಚ್ 27 ರಂದು (ಇಂದು) ರಾಷ್ಟ್ರ ರಾಜಧಾನಿಯ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರತಿಭಟನೆಗೆ ಆಮ್‌ ಆದ್ಮಿ ಪಾರ್ಟಿಯ ಲೀಗಲ್‌ ಸೆಲ್‌ ಕರೆ ನೀಡಿದ ನಂತರ ನ್ಯಾಯಾಲಯದ ಈ ಹೇಳಿಕೆ ನೀಡಿದೆ. ಬಾರ್ ಅಂಡ್ ಬೆಂಚ್ ವರದಿಯ ಪ್ರಕಾರ ಕೇಜ್ರಿವಾಲ್ ಅವರ ಬಂಧನವನ್ನು ಪ್ರತಿಭಟಿಸಲು ವಕೀಲರು ಮಧ್ಯಾಹ್ನ 12.30 ರ ಸುಮಾರಿಗೆ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಜಮಾಯಿಸಲಿದ್ದಾರೆ ಎಂದು ಎಎಪಿಯ ಕಾನೂನು ಕೋಶದ ರಾಜ್ಯ ಅಧ್ಯಕ್ಷ ವಕೀಲ ಸಂಜೀವ್ ನಾಸಿಯಾರ್ ತಿಳಿಸಿದ್ದರು. ಈ ವಿಷಯವನ್ನು ಗುರುವಾರ (ಮಾರ್ಚ್ 28) ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ.

ನಾವು ಇದರ ವಿಚಾರಣೆಯನ್ನು ನಾಳೆ ಮಾಡುತ್ತೇವೆ. ಅದರ ಬಗ್ಗೆ ಚಿಂತೆ ಮಾಡಬೇಡಿ. ಕೋರ್ಟ್‌ ಇದನ್ನು ತಡೆಹಿಡಿಯಲಾಗುವುದಿಲ್ಲ ಅಥವಾ ನಿಲ್ಲಿಸಲಾಗುವುದಿಲ್ಲ. ನ್ಯಾಯಾಲಯವನ್ನು ಸಂಪರ್ಕಿಸಲು ಯಾರೊಬ್ಬರ ಮೂಲಭೂತ ಹಕ್ಕನ್ನು ನಾವು ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾರಾದರೂ ಅದನ್ನು ಮಾಡಿದರೆ, ಅವರು ಅದನ್ನು ತಮ್ಮ ಸ್ವಂತ ಗಂಡಾಂತರದಲ್ಲಿ ಮಾಡುತ್ತಾರೆ ಮತ್ತು ಅಗತ್ಯವಿದ್ದರೆ ಕ್ರಮ ಕೈಗೊಳ್ಳುತ್ತೇವೆ,’’ ಎಂದು ನ್ಯಾಯಾಲಯ ಹೇಳಿದೆ.

Tap to resize

Latest Videos

ತನ್ನ ಬಂಧನವನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸುತ್ತಿದೆ. ಕೇಜ್ರಿವಾಲ್ ತಮ್ಮ ಅರ್ಜಿಯಲ್ಲಿ, ತಮ್ಮನ್ನು ಬಂಧಿಸಿರುವುದದು ಕಾನೂನುವಾಹಿರ ಆದ ಕಾರಣದಿಂದ ತಕ್ಷಣವೇ ತಮ್ಮನ್ನು ಬಿಡುಗಡೆ ಮಾಡಬೇಕು ಎಂದು ಸೂಚಿಸುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಬಂಧಿಸಲಾಗಿದ್ದರೆ, ನಂತರ ದೆಹಲಿ ನ್ಯಾಯಾಲಯವು ಮಾರ್ಚ್ 28 ರವರೆಗೆ ತನಿಖಾ ಸಂಸ್ಥೆಯ ಕಸ್ಟಡಿಗೆ ನೀಡಿತು.

ಅದಾದ ಬಳಿಕ ಈ ವಾರದ ಆರಂಭದಲ್ಲಿಯೇ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು ಎಂದು ಮೂಲಗಳು ತಿಳಿಸಿದ್ದವು. ಆದರೆ, ಹೋಳಿಯ ಕಾರಣದಿಂದಾಗಿ ಈ ಅರ್ಜಿಯ ತುರ್ತು ವಿಚಾರಣೆಯಲ್ಲಿ ದೆಹಲಿ ಹೈಕೋರ್ಟ್‌ ನಿರಾಕರಣೆ ಮಾಡಿತ್ತು.  ಶುಕ್ರವಾರ, ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್ ಅವರನ್ನು "ವಿವರವಾದ ಮತ್ತು ನಿರಂತರ ವಿಚಾರಣೆಗಾಗಿ" ಮಾರ್ಚ್ 28 ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿತ್ತು.

ಬಂಧಿತ ವ್ಯಕ್ತಿ ಹುದ್ದೆ ತ್ಯಜಿಸಬೇಕು ಅಂತ ಕಾನೂನು ಹೇಳಲ್ಲ: ತಜ್ಞರು

ಫೆಡರಲ್ ಆಂಟಿ ಮನಿ ಲಾಂಡರಿಂಗ್ ಏಜೆನ್ಸಿಯ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರನ್ನು ಬಂಧನ ಮಾಡಿತ್ತು. ಕೇಜ್ರಿವಾಲ್ ಅವರು ಈ ಹಿಂದೆ ತಮ್ಮ ವಿರುದ್ಧ ನೀಡಲಾದ ಸಮನ್ಸ್ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು.

ಜೈಲಿನಿಂದ ಕೇಜ್ರಿವಾಲ್ ಸಂದೇಶದ ಜೊತೆಗೆ ಮುಂದಿನ ಸಿಎಂ ಸೂಚನೆ ನೀಡಿದ್ರಾ ಪತ್ನಿ ಸುನೀತಾ?

ಏನಿದು ಲಿಕ್ಕರ್‌ ಕೇಸ್‌: ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ, ವಿವಾದದ ನಂತರ ಇದನ್ನು ರದ್ದುಗೊಳಿಸಲಾಯಿತು. ಎಎಪಿಯ ಪ್ರಮುಖ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರು ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಕೇಜ್ರಿವಾಲ್ ಹೆಸರು ಹಲವು ಬಾರಿ ಪ್ರಸ್ತಾಪವಾಗಿದೆ. ಆರೋಪಿಗಳು ಅಬಕಾರಿ ನೀತಿಯನ್ನು ರೂಪಿಸಲು ಕೇಜ್ರಿವಾಲ್ ಅವರೊಂದಿಗೆ ಸಂಪರ್ಕದಲ್ಲಿದ್ದರು, ಇದರಿಂದಾಗಿ ಅವರಿಗೆ ಅನಗತ್ಯ ಲಾಭಗಳು ಉಂಟಾಗಿವೆ, ಇದಕ್ಕೆ ಪ್ರತಿಯಾಗಿ ಅವರು ಎಎಪಿಗೆ ಕಿಕ್‌ಬ್ಯಾಕ್ ನೀಡಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.
 

click me!