'I.N.D.I.A' ಹೆಸರಿಟ್ಟುಕೊಂಡ ವಿಪಕ್ಷಗಳ ಒಕ್ಕೂಟಕ್ಕೆ ಶಾಕ್​: ಒಕ್ಕೂಟದ 26 ಪಕ್ಷಗಳಿಗೂ ಹೈಕೋರ್ಟ್‌ ನೋಟಿಸ್‌

Published : Aug 04, 2023, 12:15 PM ISTUpdated : Aug 04, 2023, 12:28 PM IST
'I.N.D.I.A' ಹೆಸರಿಟ್ಟುಕೊಂಡ ವಿಪಕ್ಷಗಳ ಒಕ್ಕೂಟಕ್ಕೆ ಶಾಕ್​: ಒಕ್ಕೂಟದ 26 ಪಕ್ಷಗಳಿಗೂ ಹೈಕೋರ್ಟ್‌ ನೋಟಿಸ್‌

ಸಾರಾಂಶ

ವಿಪಕ್ಷಗಳ ಮೈತ್ರಿಕೂಟಕ್ಕೆ 'I.N.D.I.A' ಹೆಸರಿಟ್ಟಿದ್ದಕ್ಕೆ ಬೆಂಗಳೂರಿನ ಗಿರೀಶ್​ ಭಾರಧ್ವಾಜ್ ಎಂಬುವವರು ಪಿಐಎಲ್‌ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ನೋಟಿಸ್‌ ನೀಡಿದೆ.

ದೆಹಲಿ (ಆಗಸ್ಟ್‌ 4, 2023): 'I.N.D.I.A' ಹೆಸರಿಟ್ಟುಕೊಂಡ ವಿಪಕ್ಷಗಳ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್‌ ಶಾಕ್‌ ನೀಡಿದ್ದು, ಒಕ್ಕೂಟದ 26 ಪಕ್ಷಗಳಿಗೂ ನೋಟಿಸ್‌ ನೀಡಿದೆ. ವಿಪಕ್ಷಗಳ ಮೈತ್ರಿಕೂಟಕ್ಕೆ 'I.N.D.I.A' ಹೆಸರಿಟ್ಟಿದ್ದಕ್ಕೆ ಬೆಂಗಳೂರಿನ ಗಿರೀಶ್​ ಭಾರಧ್ವಾಜ್ ಎಂಬುವವರು ಪಿಐಎಲ್‌ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ವಿಪಕ್ಷಗಳ ಒಕ್ಕೂಟಕ್ಕೆ ನೋಟಿಸ್‌ ನೀಡಿದೆ. ಅಲ್ಲದೆ, ಈ ಸಂಬಂಧ ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೂ ನೋಟಿಸ್‌ ನೀಡಿದೆ.

ಬೆಂಗಳೂರಿನ ಗಿರೀಶ್​ ಭಾರಧ್ವಾಜ್ ಪರ ವಕೀಲ ಅರುಣ್​ ಶ್ಯಾಮ್​​ ವಾದ ಮಾಡಿದ್ದು, ವಿಪಕ್ಷಗಳ ಮೈತ್ರಿಕೂಟಕ್ಕೆ 'I.N.D.I.A' ಹೆಸರು, ಧ್ವಜ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರಣೆಯನ್ನು ದೆಹಲ ಹೈಕೋರ್ಟ್‌ ಅಕ್ಟೋಬರ್‌ಗೆ ಮುಂದೂಡಿದ್ದು, ಪ್ರತಿವಾದಿಗಳಿಗೆ ಉತ್ತರ ನೀಡುವಂತೆ ಕೋರ್ಟ್‌ ನೋಟಿಸ್‌ನಲ್ಲಿ ಸೂಚನೆ ನೀಡಿದೆ. ಅಲ್ಲದೆ, ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಚುನಾವಣಾ ಆಯೋಗಕ್ಕೂ ನೋಟಿಸ್‌ ನೀಡಿದ್ದು, ಮುಂದಿನ ವಿಚಾರಣೆಯ ವೇಳೆಗೆ ಉತ್ತರಿಸುವಂತೆ ಹೇಳಿದೆ. 

ಇದನ್ನು ಓದಿ: ‘I.N.D.I.A.’ ಮೈತ್ರಿಕೂಟದ ಮರು ನಾಮಕರಣ ಮಾಡಿದ ಪ್ರಧಾನಿ: ಮೋದಿ ಇಟ್ಟ ಹೊಸ ಹೆಸರು ಹೀಗಿದೆ ನೋಡಿ..

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು INDIA ಎಂಬ ಹೆಸರಲ್ಲಿ ಮೈತ್ರಿಕೂಟ ರಚನೆ ಮಾಡಿಕೊಂಡಿದ್ದ ಪಕ್ಷಗಳಿಗೆ ಹೈಕೋರ್ಟ್ ಶಾಕ್ ನೀಡಿದೆ. ಇಂಡಿಯಾ ಎಂಬ ಹೆಸರಿನ ಬಳಕೆ ಮಾಡಿಕೊಂಡಿದ್ದನ್ನು ಪ್ರಶ್ನೆ ಮಾಡಿ ಬೆಂಗಳೂರು ಮೂಲದ ಗಿರೀಶ್ ಭಾರದ್ವಾಜ್ ಎಂಬುವವರು ದೆಹಲಿಯ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದರು. ಇಂದು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ, ಕೇಂದ್ರ ಚುನಾವಣಾ ಆಯೋಗ ಹಾಗೂ 26 ಮಿತ್ರ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ. 

'I.N.D.I.A' ಹೆಸರು ದುರ್ಬಳಕೆ ಪ್ರಶ್ನಿಸಿ ಅರ್ಜಿದಾರ ಗಿರೀಶ್ ಭಾರದ್ವಾಜ್ ಜುಲೈ 19 ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೂ ಕೇಂದ್ರ ಚುನಾವಣಾ ಆಯೋಗ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಯಿತು ಎಂದು ಅರ್ಜಿದಾರರ ಪರ ವಕೀಲ ಅರುಣ್ ಶಾಮ್ ವಾದ ಮಂಡಿಸಿದರು. 

ಇದನ್ನೂ ಓದಿ: 20 ವಿಪಕ್ಷ ಸಂಸದರ ನಿಯೋಗ ಇಂದು, ನಾಳೆ ಮಣಿಪುರ ಭೇಟಿ: ನಿಮಗೆ ಚೀನಾ, ಪಾಕಲ್ಲಿ ಬೇಡಿಕೆಯಿದೆ ಹೋಗಿ; ಬಿಜೆಪಿ ವ್ಯಂಗ್ಯ

ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನಗತ್ಯ ಪ್ರಯೋಜನ ಪಡೆಯಲು ಹಾಗೂ ಜನರ ಸಹಾನುಭೂತಿ ಪಡೆಯಲು 'I.N.D.I.A' ಹೆಸರು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಇಂಡಿಯನ್ ನ್ಯಾಷನಲ್ ಎಂಬ್ಲೆಮ್ ಅನ್ನು ವೃತ್ತಿ ವ್ಯಾಪಾರ ಹಾಗೂ ರಾಜಕೀಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬಾರದು ಎಂದು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಆದರೂ ಮಿತ್ರಪಕ್ಷಗಳು ಕಾನೂನು ಉಲ್ಲಂಘಿಸಿ 'I.N.D.I.A'  ಹೆಸರಿನ ದುರ್ಬಳಕೆ ಮಾಡಿಕೊಳ್ಳುತ್ತಿವೆ. 'I.N.D.I.A'  ಹೆಸರು ದುರ್ಬಳಕೆ ಮಾಡಿಕೊಂಡ ರಾಜಕೀಯ ಪಕ್ಷಗಳ ವಿರುದ್ಧ ಕ್ರಮ ಹಾಗೂ 'I.N.D.I.A' ಹೆಸರು ಬಳಕೆಗೆ ನಿರ್ಬಂಧ ಹೇರುವಂತೆ ವಕೀಲ ಅರುಣ್ ಶಾಮ್ ವಾದಿಸಿದರು. 

ಅರ್ಜಿದಾರರ ವಾದವನ್ನು ಪರಿಗಣಿಸಿದ ದೆಹಲಿ ಹೈಕೋರ್ಟ್ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ. ಅಲ್ಲದೆ ಈ ಸಂಬಂಧ ಎಲ್ಲಾ ಪ್ರತಿವಾದಿಗಳು ನೀಡುವಂತೆ ಸೂಚಿಸಿದೆ. ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಹಾಗೂ ಅಮಿತ್ ಮಹಾಜನ್ ಅರ್ಜಿ ವಿಚಾರಣೆ ನಡೆಸಿ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಸಂಸತ್ತಿನ ಮುಂಗಾರು ಸಮರ: NDA vs I.N.D.I.A ಮೈತ್ರಿಕೂಟಗಳ ಮೊದಲ ಹಣಾಹಣಿಗೆ ವೇದಿಕೆ ಸಜ್ಜು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana