ಪಾರ್ಲೆ ಹಾಗೂ ಬ್ರಿಟಾನಿಯಾ ಗುಡ್ಡೇ ಬಿಸ್ಕಟ್ ಕಂಪನಿಗಳ ಮುಸುಕಿನ ಗುದ್ದಾಟ ಕೋರ್ಟ್ ಮೆಟ್ಟಿಲೇರಿದ್ದು, ಈಗ ಜಾಗೀರಾತು ಬದಲಿಸುವಂತೆ ಕೋರ್ಟ್ ಪಾರ್ಲೆ ಕಂಪನಿಗೆ ಆದೇಶ ನೀಡಿದೆ. ಗುಡ್ ಡೇ ಬಿಸ್ಕೆಟ್‌ಗಳಂತಿರುವ ಬಿಸ್ಕೆಟ್‌ಗಳ ಚಿತ್ರವನ್ನು ಅಸ್ಪಷ್ಟಗೊಳಿಸಿ ಜಾಹೀರಾತು ಮಾರ್ಪಡಿಸುವಂತೆ ದೆಹಲಿ ಹೈಕೋರ್ಟ್ ಪಾರ್ಲೆಗೆ ನಿರ್ದೇಶನ ನೀಡಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು, ನಿಮ್ಮ ಯಾವುದೇ ಜಾಹೀರಾತುಗಳಲ್ಲಿ ಗುಡ್ ಡೇ ವಿನ್ಯಾಸವನ್ನು ಹೋಲುವ ಯಾವುದೇ ಕುಕೀ ಬಿಸ್ಕೆಟ್ ಚಿತ್ರ ಇಲ್ಲ ಎಂಬುದನ್ನು ಖಚಿತಪಡಿಸುವಂತೆ ಪಾರ್ಲೆಗೆ ನಿರ್ದೇಶನ ನೀಡಿದರು.
ಬ್ರಿಟಾನಿಯಾದ ಗುಡ್ ಡೇ ಬಿಸ್ಕೆಟ್‌ಗಳನ್ನು ಹೋಲುವ ಕಾರಣ ಜಾಹೀರಾತುಗಳಲ್ಲಿ ಬಳಸಲಾದ ಕುಕೀಗಳ ಚಿತ್ರವನ್ನು ಮಸುಕುಗೊಳಿಸುವ ಮೂಲಕ ತನ್ನ ಎರಡು ಜಾಹೀರಾತುಗಳನ್ನು ಮಾರ್ಪಡಿಸುವಂತೆ ದೆಹಲಿ ಹೈಕೋರ್ಟ್ ಪಾರ್ಲೆ ಬಿಸ್ಕೆಟ್ ಸಂಸ್ಥೆಗೆ ಆದೇಶ ನೀಡಿದೆ. ನಿರ್ದೇಶಿಸಿದೆ. ಮೇ 1 ರಿಂದ ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ತೋರಿಸಲಾಗುವ ಜಾಹೀರಾತುಗಳಲ್ಲಿ ಗುಡ್ ಡೇ ಬಿಸ್ಕೆಟ್‌ಗಳನ್ನು ಹೋಲುವ ಕುಕೀ ಚಿತ್ರವು ಇನ್ನು ಮುಂದೆ ಗೋಚರಿಸದಂತೆ ಎರಡು ವಾರಗಳಲ್ಲಿ ಅದರ ಎರಡು ಜಾಹೀರಾತುಗಳನ್ನು ಮಾರ್ಪಡಿಸುವಂತೆ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ (Prathiba M Singh) ಅವರು ಪಾರ್ಲೆಗೆ ನಿರ್ದೇಶನ ನೀಡಿದರು.
ಲಾಕ್‌ಡೌನ್ ಟೈಮಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಬಿಸ್ಕತ್ ಇದು..
ಗುಡ್ ಡೇ ಶ್ರೇಣಿಯ ಕುಕೀಗಳ ವಿನ್ಯಾಸವನ್ನು ಅವಹೇಳನ ಮಾಡಿದ ಹಾಗೂ ನಿಯಮ ಉಲ್ಲಂಘನೆಗಾಗಿ ಪಾರ್ಲೆ ವಿರುದ್ಧ ಶಾಶ್ವತ ತಡೆಯಾಜ್ಞೆ ಕೋರಿ ಬ್ರಿಟಾನಿಯಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ (Britannia Industries Private Limited) ಸಲ್ಲಿಸಿದ ಮೊಕದ್ದಮೆಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಪಾರ್ಲೆ ಬಿಸ್ಕತ್ ಪ್ರೈವೇಟ್ ಲಿಮಿಟೆಡ್ (Parle Biscuits Pvt Ltd) ತನ್ನ ಪಾರ್ಲೆ 20-20 ಕುಕೀಗಳನ್ನು ಪ್ರಚಾರ ಮಾಡಲು ಬಳಸುವ ಮೂರು ಜಾಹೀರಾತುಗಳಿಗೆ ಸಂಬಂಧಿಸಿದಂತೆ ಬ್ರಿಟಾನಿಯಾ ದೂರು ನೀಡಿದೆ. ಮಾರ್ಚ್‌ನಲ್ಲಿ, ಪಾರ್ಲೆ ತನ್ನ ಜಾಹೀರಾತಿನಲ್ಲಿ ಪ್ಯಾಕೇಜಿಂಗ್ ಮತ್ತು ಕುಕೀಗಳ ವಿನ್ಯಾಸವನ್ನು ಬದಲಾಯಿಸಲು ಒಪ್ಪಿಕೊಂಡಿತು. ಆದರೆ ದೂರುದಾರರು ಎರಡು ಉಳಿದ ಜಾಹೀರಾತುಗಳಲ್ಲಿ ಪ್ಯಾಕೇಜಿಂಗ್‌ನ ಸಮಸ್ಯೆಯಿಲ್ಲ ಆದರೆ ಕುಕೀ ವಿನ್ಯಾಸ ಒಂದೇ ಆಗಿದೆ ಎಂದು ಮತ್ತೆ ದೂರು ನೀಡಿದರು.
ಸ್ವಲ್ಪ ಚರ್ಚೆಯ ನಂತರ, ಕುಕೀಗಳ ಚಿತ್ರವನ್ನು ಮಸುಕುಗೊಳಿಸಲು ನಾವು ಸಿದ್ಧರಿದ್ದೇವೆ ಎಂದು ಪಾರ್ಲೆ ಪರ ವಕೀಲರು ಹೇಳಿದರು. ಹೀಗಾಗಿ ಇಂದಿನಿಂದ ಎರಡು ವಾರಗಳಲ್ಲಿ ಪ್ರತಿವಾದಿಗಳು ಕುಕ್ಕಿಗಳ ಚಿತ್ರ ಮಸುಕುಗೊಳಿಸಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ. ಕುಕೀಯ ಮಸುಕಾದ ಚಿತ್ರದೊಂದಿಗೆ ದೋಷಪೂರಿತ ಜಾಹೀರಾತು ಸಂಖ್ಯೆ 2 ಮತ್ತು ಜಾಹೀರಾತು ಸಂಖ್ಯೆ 3 ಅನ್ನು ಮಾರ್ಪಡಿಸಬೇಕು ಮತ್ತು ಮೇ 1, 2022 ರಿಂದ ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸ್ತುತ ಬಳಸುತ್ತಿರುವ ಕುಕೀ ಚಿತ್ರವು ಇನ್ನು ಮುಂದೆ ಗೋಚರಿಸಬಾರದು ಎಂದು ನ್ಯಾಯಾಲಯ ಹೇಳಿದೆ.
Health Tips : ಚಹಾದೊಂದಿಗೆ ಬಿಸ್ಕೆಟ್ ತಿನ್ನೋಂದ್ರಿಂದ ಏನೇನ್ ಸಮಸ್ಯೆಗಳಾಗುತ್ತೆ ?
ಬ್ರಿಟಾನಿಯಾದ ನೋಂದಾಯಿತ ವಿನ್ಯಾಸವನ್ನು ಉಲ್ಲಂಘಿಸುವ ಯಾವುದೇ ಕುಕೀ ಚಿತ್ರವನ್ನು ತಮ್ಮ ಜಾಹೀರಾತಿನಲ್ಲಿ ಬಳಸಬಾರದು ಎಂದು ಖಚಿತಪಡಿಸಿಕೊಳ್ಳುವಂತೆ ಕೋರ್ಟ್ ಪಾರ್ಲೆಗೆ ನಿರ್ದೇಶನ ನೀಡಿತ್ತು. ಬ್ರಿಟಾನಿಯಾ ಪರ ವಕೀಲರಾದ ಸಾಗರ್ ಚಂದ್ರ(Sagar Chandra), ಇಶಾನಿ ಚಂದ್ರ (Ishani Chandra), ಶುಭಿ ವಾಹಿ (Shubhie Wahi), ಸನ್ಯಾ ಕಪೂರ್ (Sanya Kapoor) ಹಾಗೂ ಕಾನೂನು ಅಧಿಕಾರಿ ಒಮರ್ ವಜೀರಿ (Omar Waziri)ವಾದ ಮಂಡಿಸಿದ್ದರು. ಪಾರ್ಲೆ ಪರ ವಕೀಲರಾದ ಎನ್‌ಕೆ ಭಾರದ್ವಾಜ್ (NK Bhardwaj) ಮತ್ತು ಬಿಕಾಶ್ ಘೋರೈ (Bikash Ghorai) ಮತ್ತು ಅದರ ಅಸೋಸಿಯೇಟ್ ಸೀನಿಯರ್ ಮ್ಯಾನೇಜರ್ ವೃಷಲ್ ಉತ್ತರಡೆ (Vrushal Uttarde) ಅವರು ವಕಾಲತ್ತು ವಹಿಸಿದ್ದರು.