
ದೆಹಲಿ(ಮೇ.28): ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ ಕೊರೋನಾ ರೋಗಿಗಳ ರಕ್ತಸಂಬಂಧಿಗಳಿಗೆ 5 ಲಕ್ಷ ರೂ.ವರೆಗೆ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಪ್ರಕಟಿಸಿದೆ. ಪರಿಹಾರ ನೀಡುವ ಕೆಲಸಕ್ಕಾಗಿ ಪೂರ್ವ ಸಿದ್ಧತೆ ಮಾಡಲು ಸರ್ಕಾರ ಆರು ವೈದ್ಯರ ಸಮಿತಿಯನ್ನು ರಚಿಸಿದೆ.
ಗರಿಷ್ಠ 5 ಲಕ್ಷ ರೂ.ಗಳ ಪರಿಹಾರವನ್ನು ಯಾವ ಮಾನದಂಡಗಳ ಮೇಲೆ ನೀಡಬೇಕೆಂಬುದನ್ನು ಸಮಿತಿ ನಿರ್ಧರಿಸುತ್ತದೆ. ಸಂಬಂಧಪಟ್ಟ ಆಸ್ಪತ್ರೆಯಿಂದ ಆಮ್ಲಜನಕ ಪೂರೈಕೆ, ಸ್ಟಾಕ್ ಮತ್ತು ಶೇಖರಣೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪರೀಕ್ಷಿಸುವ ಹಕ್ಕನ್ನು ಈ ಸಮಿತಿ ಹೊಂದಿರುತ್ತದೆ.
12-18 ವರ್ಷದವರಿಗೂ ದೇಶೀ ಕೋವಿಡ್ ಲಸಿಕೆ ಸುರಕ್ಷಿತ
ಈ ಸಮಿತಿಯು ತನ್ನ ವರದಿಯನ್ನು ದೆಹಲಿಯ ಪ್ರಧಾನ ಆರೋಗ್ಯ ಕಾರ್ಯದರ್ಶಿಗೆ ವಾರಕ್ಕೊಮ್ಮೆ ಕಳುಹಿಸಲಿದೆ. COVID-19 ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಈಗಾಗಲೇ ಘೋಷಿಸಲಾದ 50,000 ರೂ.ಗಳ ಪರಿಹಾರಕ್ಕೆ ಈ ಮೊತ್ತವು ಆಡ್-ಆನ್ ಆಗಿರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ