ರಾಷ್ಟ್ರ ರಾಜಧಾನಿಯಲ್ಲಿ ಪತ್ರಕರ್ತರಿಗೆ ಉಚಿತ ಕೊರೋನಾ ಲಸಿಕೆ!

By Suvarna NewsFirst Published May 8, 2021, 1:27 PM IST
Highlights

ರಾ‍ಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ನರ್ತನ| ಪತ್ರಕರ್ತರಿಗೆ ಉಚಿತ ಕೊರೋನಾ ಲಸಿಕೆ ಘೋಷಿಸಿದ ಕೇಜ್ರೀವಾಲ್ ಸರ್ಕಾರ| ಇದಕ್ಕೆ ತಗುಲುವ ಖರ್ಚು ಸರ್ಕಾರದ್ದೇ

ನವದೆಹಲಿ(ಮೇ.08): ಕೊರೋನಾ ಅಬ್ಬರ ಇಡೀ ದೇಶವನ್ನೇ ಬೆಂಬಿಡದಂತೆ ಕಾಡಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಹಾವಳಿ ಅಲ್ಲೋಲ ಕಲ್ಲೋಲ ಸೃಷ್ಟ್ಇದೆ. ಈ ನಡುವೆಯೂ ಲಸಿಕೆ ಅಭಿಯಾನ ಭರದಿಂದ ಸಾಗಿದೆ.. ಸದ್ಯ ದೆಹಲಿ ಸಿಎಂ ಕೇಜ್ರೀವಾಲ್ ಲಸಿಕೆ ವಿಚಾರವಾಗಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.

ಪತ್ರಕರ್ತರೂ ಕೋವಿಡ್‌ ವಾರಿಯರ್ಸ್‌: ಉಚಿತವಾಗಿ ಲಸಿಕೆ ವಿತರಿಸಲು ನಿರ್ಧಾರ!

ಹೌದು ಏರುತ್ತಿರುವ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಮಾಧ್ಯಮ(ಪತ್ರಿಕೆ, ಟೀವಿ, ಡಿಜಿಟಲ್)ದಲ್ಲಿ ಕಾರ್ಯ ನಿರ್ವಹಿಸುವ ಎಲ್ಲರಿಗೂ ಸಾಮೂಹಿಕ ಉಚಿತ ಲಸಿಕೆ ಅಭಿಯಾನ ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಇದಕ್ಕೆ ತಗುಲುವ ಖರ್ಚಮನ್ನು ಸರ್ಕಾರವೇ ಭರಿಸಲಿದೆ ಎಂದೂ ತಿಳಿಸಿದ್ದಾರೆ. ಮಹಾಮಾರಿಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಸಾವಿರಾರು ಮಂದಿ ಮೃತಪಡುತ್ತಿದ್ದಾರೆ. ಹೀಗಿರುವಾಗ ಸಚಿವರ ಸಭೆ ಕರೆದ ಕೇಜ್ರೀವಾಲ್ ಇಂತಹುದ್ದೊಂದು ಘೋಷಣೆ ಮಾಡಿದ್ದಾರೆ. 

ದೆಹಲಿಯ ಡಿಸಿಎಂ, ಆರೋಗ್ಯ ಸಚಿವ, ಆರೋಗ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳಿದ್ದ ಈ ಸಭೆಯಲ್ಲಿ, ದೆಹಲಿಯ ಯಾವ ಕಡೆಯೂ ಬೆಡ್‌ ಕೊರತೆ ಎದುರಾಗದಂತೆ ಎಚ್ಚರ ವಹಿಸಿ ಎಂದು ಕೇಜ್ರೀವಾಲ್ ಸೂಚಿಸಿದ್ದಾರೆ. ಆಕ್ಸಿಜನ್ ಕೊರತೆಯಿಂದ ಯಾರೊಬ್ಬರೂ ಸಾವನ್ನಪ್ಪಬಾರದೆಂದು ಸೂಚಿಸಿರುವ ಕೇಜ್ರೀವಾಲ್, ಮುಂದಿನ ಮೂರು ತಿಂಗಳಲ್ಲಿ ಎಲ್ಲರಿಗೂ ಲಸಿಕೆ ಹಾಕಿಸಬೇಕೆಂದು ತಿಳಿಸಿದ್ದಾರೆ. 

ಪತ್ರಕರ್ತರೂ ಕೊರೋನಾ ವಾರಿಯರ್ಸ್: ಸೋಂಕಿನಿಂದ ಸತ್ತರೆ ಕುಟುಂಬಕ್ಕೆ 15 ಲಕ್ಷ

ಕರ್ನಾಟಕದ ಪತ್ರಕರ್ತರಿಗೂ ಉಚಿತ ಲಸಿಕೆ

ಮೂರು ದಿನಗಳ ಹಿಂದಷ್ಟೇ ಕರ್ನಾಟಕದಲ್ಲೂ ಇಂತಹುದೇ ಒಂದು ಘೋಷಣೆ ಮಾಡಲಾಗಿತ್ತು. ಮಾಧ್ಯಮ ಸಿಬ್ಬಂದಿಯನ್ನು ಫ್ರಂಟ್‌ಲೈನ್ ವರ್ಕರ್ಸ್‌ ಎಂದು ಗೋಷಿಸಿದ್ದ ಸಿಎಂ ಎಲ್ಲಾ ಪತ್ರಕರ್ತರಿಗೂ ಉಚಿತ ಲಸಿಕೆ ನಿಡಲು ನಿರ್ಧರಿಸಲಾಗಿದೆ ಎಂದಿದ್ದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!