ರಾಷ್ಟ್ರ ರಾಜಧಾನಿಯಲ್ಲಿ ಅನಿಲ ಸೋರಿಕೆ; ಅಸ್ವಸ್ಥಗೊಂಡ 28 ಶಾಲಾ ವಿದ್ಯಾರ್ಥಿಗಳು ಆಸ್ಪತ್ರೆ ದಾಖಲು!

Published : Aug 11, 2023, 03:17 PM ISTUpdated : Aug 11, 2023, 03:26 PM IST
ರಾಷ್ಟ್ರ ರಾಜಧಾನಿಯಲ್ಲಿ ಅನಿಲ ಸೋರಿಕೆ; ಅಸ್ವಸ್ಥಗೊಂಡ 28 ಶಾಲಾ ವಿದ್ಯಾರ್ಥಿಗಳು ಆಸ್ಪತ್ರೆ ದಾಖಲು!

ಸಾರಾಂಶ

ದೆಹಲಿಯಲ್ಲಿ ಭೀಕರ ಅನಿಲ ದುರಂತ ಸಂಭವಿಸಿದೆ. ಗ್ಯಾಸ್ ಲೀಕ್ ಆದರ ಕಾರಣ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ವಿದ್ಯಾರ್ಥಿಗಳನ್ನು ಆಸ್ಪತ್ರೆ ದಾಖಲಿಸಲಾಗಿದೆ. ಇದೀಗ 28ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ನವದೆಹಲಿ(ಆ.11) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನಿಲ ದುರಂತ ಸಂಭವಿಸಿದೆ. ದೆಹಲಿಯ ನರೈನಾ ಏರಿಯಾ ಬಳಿ ಇರುವ ಮುನ್ಸಿಪಲ್ ಶಾಲಾ ಬಳಿ ಗ್ಯಾಸ್ ಲೀಕ್‌ ಅನಾಹುತ ಸಂಭವಿಸಿದೆ. ಇದರ ಪರಿಣಾಮ ಮುನ್ಸಿಪಲ್ ಶಾಲೆಯ 28ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ 19 ವಿದ್ಯಾರ್ಥಿಗಳನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು 9 ವಿದ್ಯಾರ್ಥಿಗಳನ್ನು ಆಚಾರ್ಯ ಶ್ರೀ ಭಿಕ್ಷು ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಇದೀಗ ಆಸ್ಪತ್ರೆಗೆ ದೌಡಾಯಿಸಿದೆ.

ಶಾಲಾ ಅವರಣ ಪಕ್ಕದಲ್ಲೇ ಗ್ಯಾಸ್ ಲೀಕ್ ಆಗಿದೆ. ಈ ಗ್ಯಾಸ್‌‌ ಮಿಶ್ರಿತ ವಾಯು ಸೇವನೆಯಿಂದ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಇದೀಗ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ತಜ್ಞ ವೈದ್ಯಾಧಿಕಾರಿಗಳ ತಂಡ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಚೇತರಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಕೆಲ ಸಮಯ ಬೇಕಿದೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಲುಧಿಯಾನ ವಿಷಾನಿಲ ಸೋರಿಕೆಯಿಂದ ಅನಾಥವಾದ 8 ತಿಂಗಳ ಮಗುವಿನಿಂದ ಪೋಷಕರ ಅಂತ್ಯಸಂಸ್ಕಾರ!

ಮಾಹಿತಿ ತಿಳಿಯುತ್ತಿದ್ದಂತೆ ಮಕ್ಕಳ ಪೋಷಕರು ಆಸ್ಪತ್ರೆ ದೌಡಾಯಿಸಿದ್ದಾರೆ. ಮಕ್ಕಳ ಸುರಕ್ಷತೆ ಕುರಿತು ಶಾಲಾ ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಮಕ್ಕಳು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಗ್ಯಾಸ್ ಸೋರಿಕೆಯಿಂದ ಮಕ್ಕಳು ಅಸ್ವಸ್ಥರಾಗಿರುವ ಸಾಧ್ಯತೆಯನ್ನು ವೈದ್ಯರು ಹೇಳಿದ್ದಾರೆ. ಇತ್ತ ಮಕ್ಕಳು ಸೇವಿಸಿದ ಆಹಾರದ ಕುರಿತು ವಿಚಾರಣೆಗಳು ನಡೆಯುತ್ತಿದೆ.

ಅನಿಲ ಸೋರಿಕೆ ಪ್ರಕರಣಗಳು ಅತ್ಯಂತ ಅಪಾಯಕಾರಿಯಾಗಿದೆ.  2020ರಲ್ಲಿ ವಿಶಾಖಪಟ್ಟಣ ಬಳಿಯ ರಾಸಾಯನಿಕ ಕಾರ್ಖಾನೆಯಿಂದ ಭಾರೀ ವಿಷಾನಿಲ ಸೋರಿಕೆಯಾಗಿ 5 ಕಿ.ಮೀ. ಪ್ರದೇಶದಲ್ಲಿ ಹಬ್ಬಿದ್ದರಿಂದ 11 ಮಂದಿ ಸಾವಿಗೀಡಾಗಿ, 1000ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾದ ಹೃದಯ ವಿದ್ರಾವಕ ದುರ್ಘಟನೆ ಗುರುವಾರದ ಕರಾಳ ನಸುಕಿನಲ್ಲಿ ಸಂಭವಿಸಿದೆ. 36 ವರ್ಷಗಳ ಹಿಂದೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ 3500ಕ್ಕೂ ಹೆಚ್ಚು ಬಲಿ ಪಡೆದಿದ್ದ ವಿಶ್ವದ ಘನಘೋರ ಅನಿಲ ದುರಂತವನ್ನು ನೆನಪಿಸುವಂತಹ ಘಟನೆ ಇದಾಗಿದ್ದು, ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು.

ನಸುಕಿನ ಜಾವ 2.30ರ ವೇಳೆಗೆ ಅನಿಲ ಸೋರಿಕೆಯಾದ ಕಾರಣ ನಿದ್ದೆಯಲ್ಲಿದ್ದ ಸಾವಿರಾರು ಜನ ವಿಷಾನಿಲ ಸೇವಿಸಿ ಉಸಿರಾಡಲು ಕಷ್ಟಪಟ್ಟಿದ್ದಾರೆ. ಈ ಪೈಕಿ ನೂರಾರು ಮಂದಿ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಓಡುವಾಗ ಎಲ್ಲೆಂದರಲ್ಲಿ ಕುಸಿದುಬಿದ್ದಿದ್ದಾರೆ. ವಿಷಾನಿಲ ಸೇವಿಸಿ ಅಸ್ವಸ್ಥರಾಗಿರುವವರ ಪೈಕಿ 20 ಮಂದಿಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಮೃತರಲ್ಲಿ 6 ಮತ್ತು 9 ವರ್ಷದ ಇಬ್ಬರು ಮಕ್ಕಳು, ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿ ಕೂಡಾ ಸೇರಿದ್ದಾರೆ.

 

Gas leak in Ludhiana: 9 ಜನರ ಸಾವು, 11 ಮಂದಿ ಗಂಭೀರ, 1 ಕಿಲೋಮೀಟರ್‌ ವ್ಯಾಪ್ತಿ ಸೀಲ್‌ಡೌನ್‌!

2013 ಎಪ್ರಿಲ್‌ 9 ರಂದು ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿ ಅಡುಗೆ ಅನಿಲ ಸಾಗಾಟದ ಟ್ಯಾಂಕರ್‌ ಅಪಘಾತಕ್ಕೀಡಾಗಿ ಅನಿಲ ಸೋರಿಕೆಯೊಂದಿಗೆ ಅಗ್ನಿ ಅನಾಹುತ ಸಂಭವಿಸಿದ ಭೀಕರ ಘಟನೆಯಿಂದ ಹಲವು ಕುಟುಂಬಗಳಿಗೆ ಸೇರಿದ 13 ಮಂದಿ ಮೃತಪಟ್ಟು ಹಲವು ಮಂದಿ ಗಾಯಗೊಂಡ ಘಟನೆಗೆ ಹತ್ತು ವರ್ಷ ಸಂದರೂ ಅದರ ಕಹಿ ನೆನಪು ಇನ್ನೂ ಮಾಸದೆ ಹಚ್ಚಳಿಯದೆ ಉಳಿದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!