ಈ ಬಾರಿಯ ಮುಂಗಾರು ಸಂಸತ್ ಅಧಿವೇಶನ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ಸಂಸದ ರಾಘವ್ ಚಡ್ಡಾಗೆ ಸಂಸತ್ ಹೊರಗಡೆ ಕಾಗೆಯೊಂದು ಕುಕ್ಕಿತ್ತು. ಅದರ ಪರಿಣಾಮ ಎನ್ನುವಂತೆ ಅವರಿಗೆ ಶನಿ ಕಾಟ ಆರಂಭವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ನವದೆಹಲಿ (ಆ.11): ದೆಹಲಿ ಸೇವಾ ಮಸೂದೆ ಬಿಲ್‌ಅನ್ನು ಸೆಲೆಕ್ಟ್ ಕಮಿಟಿಗೆ ಕಳಿಸಬೇಕು ಎನ್ನುವ ನಿಟ್ಟಿನಲ್ಲಿ ಸದಸ್ಯರ ಸಹಿ ಇರುವ ಪತ್ರವನ್ನು ಫೋರ್ಜರಿ ಮಾಡಿದ ಆರೋಪ ಹೊತ್ತಿರುವ ಆಮ್ ಆದ್ಮಿ ಪಾರ್ಟಿಯ ಸಂಸದ ರಾಘವ್ ಚಡ್ಡಾರನ್ನು ರಾಜ್ಯಸಭಾ ಚೇರ್ಮನ್ ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅನಿರ್ದಿಷ್ಟಾವಧಿಗೆ ಅಮಾನತು ಮಾಡಿದ್ದಾರೆ. ವಿಶೇಷಾಧಿಕಾರಿ ಸಮಿತಿ ತನ್ನ ವರದಿಯನ್ನು ಸಲ್ಲಿಸುವವರೆಗೆ ಅವರನ್ನು ರಾಜ್ಯಸಭೆಯಿಂದ ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ನಾಲ್ಕು ರಾಜ್ಯಸಭಾ ಸಂಸದರು ತಮ್ಮ ಅನುಮತಿಯಿಲ್ಲದೆ ತಮ್ಮ ಹೆಸರನ್ನು ಆಗಸ್ಟ್ 7 ರಂದು ನಿರ್ಣಯದಲ್ಲಿ ರಾಘವ್ ಚಡ್ಡಾ ಸೇರಿಸಿದ್ದಾರೆ ಎಂದು ಹೇಳಿಕೊಂಡಿದ್ದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಬುಧವಾರ ಈ ವಿಷಯವನ್ನು ಪರಿಶೀಲಿಸಲು ವಿಶೇಷಾಧಿಕಾರ ಸಮಿತಿಗೆ ಸಂಸದರ ದೂರುಗಳನ್ನು ಕಳುಹಿಸಿದ್ದಾರೆ. ಇನ್ನು ಈ ಸುದ್ದು ಪ್ರಕಟವಾದ ಬೆನ್ನಲ್ಲಿಯೇ ರಾಘವ್ ಚಡ್ಡಾಗೆ ಇದೆಲ್ಲವೂ ಅಗುತ್ತಿರುವುದು ಕಾಗೆ ಕುಕ್ಕಿದ ದಿನದಿಂದ. ಅದು ಅವರಿಗೆ ಶನಿಕಾಟ. ಒಬ್ಬ ಸರಿಯಾದ ಜ್ಯೋತಿಷಿಯನ್ನು ಭೇಟಿಯಾಗಿ ಶನಿದೇವರ ಪೂಜೆ ಮಾಡದ ಹೊರತು ಅವರಿಗೆ ಈ ಹಿನ್ನಡೆಗಳು ತಪ್ಪೋದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಸಂಸದರಾದ ಸಸ್ಮಿತ್ ಪಾತ್ರ, ಎಸ್ ಫಾಂಗ್ನಾನ್ ಕೊನ್ಯಾಕ್, ಎಂ ತಂಬಿದುರೈ ಮತ್ತು ನರಹರಿ ಅಮೀನ್ ಅವರು, ಆಪ್ ಸಂಸದ ರಾಘವ್ ಚಡ್ಡಾ ನಮ್ಮನ್ನು ಕೇಳದೆ ಸದನ ಸಮಿತಿಗೆ ತಮ್ಮ ಹೆಸರನ್ನು ಸೇರಿಸಿದ್ದಾರೆ ಎಂದು ಆರೋಪಿಸಿದರು.
ಮದುವೆಗೆ ಮುನ್ನವೇ ಶುರುವಾಯ್ತಾ ಅಪಶಕುನ? ಆಪ್ ಸಂಸದ ರಾಘವ್ ಚಡ್ಡಾ ಮೇಲೆ ಕಾಗೆ ದಾಳಿ!
ಈ ನಡುವೆ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಚಡ್ಡಾ ಅವರನ್ನು "ಉದ್ದೇಶಪೂರ್ವಕವಾಗಿ ಸಿಲುಕಿಸಲು ಪ್ರಯತ್ನಿಸುತ್ತಿದೆ" ಎಂದು ಎಎಪಿ ಆರೋಪಿಸಿದೆ. ರಾಘವ್ ಚಡ್ಡಾ ವಿರುದ್ಧದ 'ನಕಲಿ ಸಹಿ' ಆರೋಪಗಳು "ಸುಳ್ಳು ಮತ್ತು ರಾಜಕೀಯ ಪ್ರೇರಿತ" ಎಂದು ಪಕ್ಷವು ಹೇಳಿದೆ ಮತ್ತು ಪಕ್ಷದ ವಿರುದ್ಧ ಮಾತನಾಡುವುದಕ್ಕಾಗಿ ಬಿಜೆಪಿಯು ಚಡ್ಡಾ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದೆ.
ಕಾಗೆ ಕುಕ್ಕಿದ ಬಳಿಕ ಶುರುವಾಯ್ತು ರಾಘವ್ ಚಡ್ಡಾಗೆ ಶನಿಕಾಟ, 'ನಕಲಿ ಸಹಿ' ಆರೋಪಕ್ಕೆ ಆಪ್ ಸಂಸದ ಕಂಗಾಲು!