ಸಸ್ಯಹಾರಿಗಳಿಗೊಂದು ಗುಡ್‌ ನ್ಯೂಸ್‌... ಇಲ್ಲಿದೆ ವೆಜಿಟೇರಿಯನ್ ಫಿಶ್

Suvarna News   | Asianet News
Published : Jan 27, 2022, 05:38 PM IST
ಸಸ್ಯಹಾರಿಗಳಿಗೊಂದು ಗುಡ್‌ ನ್ಯೂಸ್‌... ಇಲ್ಲಿದೆ ವೆಜಿಟೇರಿಯನ್ ಫಿಶ್

ಸಾರಾಂಶ

ಇದು ಮಾಂಸವಲ್ಲ, ಶುದ್ಧ ಸಸ್ಯಹಾರಿ ಸಸ್ಯಹಾರಿ ಮೀನು ಫ್ರೈ ತಯಾರಿಸಿದ ಆಹಾರ ಘಟಕ ದೆಹಲಿ ಹೊಟೇಲೊಂದರ ಅವಿಷ್ಕಾರ

ದೆಹಲಿ(ಜ. 27): ಕರಿದ ಮೀನು ಯಾರಿಗೆ ಇಷ್ಟ ಇಲ್ಲ ಹೇಳಿ. ಆದರೆ ಸಸ್ಯಹಾರಿಗಳಿಗೆ ಇದು ನಿಷಿದ್ಧ. ಆದರೆ ನೋಡಿದಾಗ ತಿನ್ನಬೇಕೆನಿಸುವ ಆಹಾರ ಪ್ರಿಯ ಸಸ್ಯಹಾರಿಗಳಿದ್ದರೆ ಅವರಿಗೊಂದು ಗುಡ್‌ನ್ಯೂಸ್ ಇಲ್ಲಿದೆ. ದೆಹಲಿಯ ದೆಹಲಿಯ ಒಂದು ಉಪಾಹಾರ ಗೃಹವೂ ಶುದ್ಧ ಸಸ್ಯಾಹಾರದ ಮೀನಿನ ಫ್ರೈವೊಂದನ್ನು ತಯಾರಿಸಿದೆ.  ಸೋಯಾ ಬೀನ್ಸ್‌ನಿಂದ ಮಾಡಿದ 'ವೆಜ್ ಫಿಶ್' ಇದಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಾಗೆಯೇ ಜನರು ಈ ವೆಜ್‌ ಫಿಶ್‌ಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 

ಆಹಾರ ಬ್ಲಾಗರ್ ಅಮರ್ ಸಿರೋಹಿ (Amar Sirohi) ಅವರ ಅಧಿಕೃತ Instagram ಪುಟದಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಹಿಂದಿಯಲ್ಲಿ ಶುದ್ಧ ಸಸ್ಯಹಾರಿ ಫಿಶ್‌ ಪ್ರೈ ಎಂದು ಬರೆಯಲಾಗಿದೆ. ವಿಡಿಯೋದಲ್ಲಿ ಫುಡ್‌ ಬ್ಲಾಗರ್  ಈ ವೆಜ್ ಫಿಶ್‌ ಫ್ರೈ  ಅನ್ನು ಹೇಗೆ ತಯಾರಿಸಲಾಗಿದೆ ಎಂಬುದನ್ನು ತೋರಿಸುವ ಜೊತೆ ಹೇಳುತ್ತಾರೆ. ಅಲ್ಲದೇ ಇದು ಕೂಡ ಮಾಮೂಲಿ ಮೀನಿನ ತರಹವೇ ರುಚಿಯನ್ನು ಹೊಂದಿದೆ ಎಂದು ಇದನ್ನು ತಯಾರಿಸುವವರು ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. 

 

ಕೆಲ ದಿನಗಳ ಹಿಂದೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು,  ಇದುವರೆಗೂ 3.8 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದಕ್ಕೆ ಸಾಕಷ್ಟು ಲೈಕ್‌ ಹಾಗೂ ಕಾಮೆಂಟ್‌ಗಳು ಬಂದಿದ್ದು, ಇದು ಕುತೂಹಲಕಾರಿಯಾಗಿದೆ, ಬಾಯಲ್ಲಿ ನೀರೂರಿಸುವಂತಿದೆ ಎಂದೆಲ್ಲಾ ನೋಡುಗರು ಕಾಮೆಂಟ್ ಮಾಡಿದ್ದಾರೆ. 

Fish Cake Recipe: ಟೇಸ್ಟೀ ಫಿಶ್ ಕೇಕ್ ತಯಾರಿಸುವುದು ಹೇಗೆ ?

ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಸಂಖ್ಯೆಗಳು ಹೆಚ್ಚುತ್ತಿವೆ. ಈ ಹಂಚಿಕೆಯು ವಿವಿಧ ರೀತಿಯ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ. ಕೆಲವರು ತಮ್ಮ ಆತಂಕಗಳನ್ನು ಹಂಚಿಕೊಂಡರೆ, ಇತರರು ತಾವು ಹೇಗೆ ಖಾದ್ಯವನ್ನು ಪ್ರಯತ್ನಿಸಲು ಬಯಸುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.

ಬೇಯಿಸಿದ ಮೀನು (coocked fish)
ಬೇಯಿಸಿದ ಮೀನುಗಳಲ್ಲಿ ಸೆಲೆನಿಯಂ ಮತ್ತು ಒಮೆಗಾ-3 ಸಮೃದ್ಧವಾಗಿದೆ, ಇದು  ಥೈರಾಯ್ಡ್ ಗೆ ಒಳ್ಳೆಯದು. ಮಿತವಾಗಿ ಬಳಸಬೇಕಾಗುತ್ತದೆ (ವಾರಕ್ಕೆ ಒಂದು ಅಥವಾ ಎರಡು ಬಾರಿ ಮೀನನ್ನು ಸೇವಿಸಬಹುದು. ಅದರೆ ರಾತ್ರಿ ಸೇವಿಸಬೇಡಿ) ಆರೋಗ್ಯಕರ ಥೈರಾಯ್ಡ್ ಗೆ ಅಗತ್ಯವಿರುವ ಸೂಕ್ಷ್ಮ ಪೋಷಕಾಂಶಗಳ ಜೊತೆಗೆ ಅತ್ಯುತ್ತಮ ಅಮೈನೋ ಆಮ್ಲ ಮೀನಿನಲ್ಲಿದೆ.

Endangered Species: ಅಪರೂಪದ ನಡೆದಾಡುವ ಪಿಂಕ್‌ ಹ್ಯಾಂಡ್‌ಫಿಶ್‌ ಪತ್ತೆ

ಇತ್ತೀಚೆಗೆ ಬೀದಿ ಬದಿ ಉಪಾಹಾರ ಮಳಿಗೆಗಳು ಗ್ರಾಹಕರನ್ನು ಸೆಳೆಯುವ ಸಲುವಾಗಿ ವಿವಿಧ ರೀತಿಯ ವಿಶಿಷ್ಟ ತಿನಿಸುಗಳನ್ನು ತಯಾರಿಸುತ್ತಿದ್ದಾರೆ.  ಇಂತಹ ವಿಭಿನ್ನ ಆಹಾರಗಳ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದ್ದನ್ನು ನೀವು ನೋಡಿರಬಹುದು. ಹಾಗೆಯೇ ದೆಹಲಿಯ ಜನಪ್ರಿಯ ಪರಾಟೆ ವಾಲೆ ಗಲ್ಲಿಯ ಫುಡ್‌ ಸ್ಟಾಲ್‌ ವೊಂದರಲ್ಲಿ ಫೇಮಸ್‌ ಕ್ಯಾಂಡಿ ಕ್ರಶ್‌ ಪರೋಟಾ ವನ್ನು ಈ ಹಿಂದೆ ಮಾಡಲಾಗಿತ್ತು. ಫುಡ್‌ ಬ್ಲಾಗರ್ ಒಬ್ಬರು ಇನ್ಸ್ಟಾಗ್ರಾಮ್‌ನಲ್ಲಿ ಈ ಕ್ಯಾಂಡಿಕ್ರಶ್‌ ಪರೋಟಾ ತಿಂದು ಹೇಗಿದೆ ಎಂದು ಹೇಳುತ್ತಿರುವ ವಿಡಿಯೋ ಇದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇನ್ನು ಈ ಪರಾಟೆ ವಾಲಿ ಗಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಚಾಂದಿನಿ ಚೌಕ್‌ ಬಳಿ ಇದ್ದು, ಭಿನ್ನ ವಿಭಿನ್ನ ಪರೋಟಗಳಿಗೆ ಇದು ಫೇಮಸ್‌ ಆಗಿದೆ.  ಇಲ್ಲಿ ನೀವು ನೂರಾರು ಬಗೆಯ ಪರೋಟಾಗಳನ್ನು ಕಾಣಬಹುದು ಹಾಗೂ ರುಚಿ ನೋಡಬಹುದು. ಖಾರವಾದ ಮಿರ್ಚಿ ಪರೋಟಾದಿಂದ ಹಿಡಿದು ಸವೊರಿ ಪಪಡ್ ಪರೋಟಾ, ಬಿಂಡಿ ಪರೋಟಾ, ಮವಾ ಪರೋಟಾದವರೆಗೆ ಇಲ್ಲಿ ಸಿಗುವ ಪರೋಟಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಲ್ಲಿನ ಶಾಪ್‌ಗಳು  ಅಲೂಗಡ್ಡೆ ಕರಿಯೊಂದಿಗೆ ಬಿಸಿ ಬಿಸಿಯಾದ ಪರೋಟಾಗಳನ್ನು ನೀಡುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!