
11 ವರ್ಷದ ಪುಟ್ಟ ಮಗಳ ಮೇಲೆ ಮೃಗದಂತೆ ಮುಗಿಬಿದ್ದು,ಅತ್ಯಾ*ಚಾರವೆಸಗಿದ ಕಾಮುಕ ತಂದೆಗೆ ನ್ಯಾಯಾಲಯವೂ ಜೀವಾವಧಿ ಶಿಕ್ಷೆ ನೀಡಿದೆ. ಈ ಪ್ರಕರಣದ ತೀರ್ಪು ನೀಡುವ ವೇಳೆ ಮಗಳ ಹಾಗೂ ತಂದೆ ನಡುವಿನ ಅತ್ಯಂತ ಪವಿತ್ರವೆನಿಸುವ ಸಂಬಂಧವನ್ನು ನೀವು ನಾಶ ಮಾಡಿದಿರಿ ಎಂದು ಅಪರಾಧಿಗೆ ನ್ಯಾಯಾಲಯ ಹೇಳಿದೆ. ಆರೋಪಿ 37 ವರ್ಷದ ವ್ಯಕ್ತಿ ತನ್ನ 11 ವರ್ಷದ ಮಗಳ ಮೇಲೆ ಪದೇ ಪದೇಅತ್ಯಾ*ಚಾರ ಎಸಗಿದ್ದ. ಈ ಆರೋಪ ಸಾಬೀತಾದ ಹಿನ್ನೆಲೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಅಪರಾಧಿಗೆ ಈ ಹಿಂದೆಅತ್ಯಾ*ಚಾರ ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 6 (ಉಗ್ರವಾದ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತ್ ಸಹರಾವತ್ ಅವರು 37 ವರ್ಷದ ವ್ಯಕ್ತಿಗೆ ಶಿಕ್ಷೆ ವಿಧಿಸುವ ಕುರಿತು ವಾದಗಳನ್ನು ಆಲಿಸುತ್ತಾ, ಅಪರಾಧಿ ಅತ್ಯಂತ ಪವಿತ್ರ ಸಂಬಂಧವನ್ನು ಅವಮಾನಕಾರಿಯಾಗಿ ನಾಶ ಮಾಡಿದ್ದಾನೆ ಎಂದು ಹೇಳಿದ್ದಾರೆ. ಅಪರಾಧಿ ಸಮಾಜದ ಆತ್ಮಸಾಕ್ಷಿಯನ್ನು ಕಲಕಿರುವುದರಿಂದ ಯಾವುದೇ ವಿನಾಯ್ತಿಗೆ ಅರ್ಹನಲ್ಲ ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ಆದಿತ್ಯ ಕುಮಾರ್ ಈ ಪ್ರಕರಣದಲ್ಲಿ ವಾದಿಸಿದರು.
ಜನವರಿ 9 ರಂದು ಹೊರಡಿಸಲಾದ ಆದೇಶದಲ್ಲಿ ನ್ಯಾಯಾಲಯವು, ಅಪರಾಧಿಯು ಮಾನವೀಯತೆಯ ಈ ಅತ್ಯಂತ ಪವಿತ್ರ ಸಂಬಂಧವನ್ನು ನಾಚಿಕೆಗೇಡಿನ ರೀತಿಯಲ್ಲಿ ಮುರಿದಿದ್ದಾನೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸರಿಯಾಗಿಯೇ ಸಲ್ಲಿಸಿದ್ದಾರೆ. ಬಲಿಪಶುವಿನ ಮೇಲೆ ಪದೇ ಪದೇಅತ್ಯಾ*ಚಾರ ಮಾಡಿದ್ದರಿಂದ ಅಪರಾಧವು ಮತ್ತಷ್ಟು ಉಲ್ಬಣಗೊಂಡಿದೆ. ಅಪರಾಧಿಯು ಬಲಿಪಶುವಿನ ತಂದೆಯೇ ಆಗಿರುವುದರಿಂದ ಆತನ ವಿರುದ್ಧ ಕಬ್ಬಿಣದ ಕೈಗಳಿಂದ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: 400 ಕೆಜಿ ಚಿನ್ನ, 2.5 ದಶಲಕ್ಷ ಡಾಲರ್ ವಿದೇಶಿ ಹಣ ದರೋಡೆ ಕೇಸ್‌ನ ಆರೋಪಿ ಗಡೀಪಾರಿಗೆ ಭಾರತಕ್ಕೆ ಕೆನಡಾ ಮನವಿ
ನಂತರ ನ್ಯಾಯಾಲಯವು ಅವನಿಗೆ ಜೀವನದ ಉಳಿದ ಭಾಗಕ್ಕೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ ಸಂತ್ರಸ್ತೆಗೆ 10.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹೇಳಿದೆ. ಈ ಘಟನೆಯಿಂದಾಗಿ ಬಾಲಕಿಯೂ ಇನ್ನೂ ಮಾನಸಿಕ ಆಘಾತದಲ್ಲೇ ಇದ್ದಾಳೆ. ಭಯಾನಕ ನೆನಪುಗಳು ಅವಳನ್ನು ಆವರಿಸಿವೆ ಎಂಬುದನ್ನು ನ್ಯಾಯಾಲಯ ಗಮನಿಸಿದ್ದು, ಪರಿಹಾರ ನೀಡಲು ಇದು ಸೂಕ್ತವಾದ ಪ್ರಕರಣ ಎಂದು ಗಮನಿಸಿದ ನ್ಯಾಯಾಲಯವು ಆಕೆಗೆ 10.5 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಹೇಳಿದೆ.
ಇದನ್ನೂ ಓದಿ: ಬೆಳ್ತಂಗಡಿ ಬಾಲಕ ಸುಮಂತ್ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್ : ಶವ ಪತ್ತೆಯಾದ ಕೆರೆಯಲ್ಲಿ ಕತ್ತಿ ಟಾರ್ಚ್ ಪತ್ತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ