ನಿರ್ಭಯಾ ಹಂತಕರಿಗೆ ನೇಣು ನಿಶ್ಚಿತ : ಇದು ಕಾಲನ ಅಂತಿಮ ಕರೆ

By Kannadaprabha News  |  First Published Mar 2, 2020, 1:32 PM IST

ಗಲ್ಲು ಶಿಕ್ಷೆ ವಜಾಗೊಳಿಸಬೇಕು ಎಂದು ನಿರ್ಭಯಾ ಹಂತಕರು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಕೋರ್ಟ್ ವಜಾಗೊಳಿಸಿದೆ. ಇದರಿಂದ ಎಲ್ಲಾ ನಾಲ್ವರಿಗೂ ಗಲ್ಲು ಶಿಕ್ಷೆ ಖಾಯಂ ಆದಂತಾಗಿದೆ. 


ನವದೆಹಲಿ [ ಮಾ.02]: ನಿರ್ಭಯಾ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರರಣದ ನಾಲ್ವರು ಆರೋಪಿಗಳಿಗೆ ಡೆತ್ ವಾರೆಂಟ್ ನಂತೆ ಗಲ್ಲು ಶಿಕ್ಷೆಯಾಗುವುದು ಖಚಿತವಾಗಿದೆ. ಮೂವರು ದೋಷಿಗಳಾದ ಪವನ್ ಗುಲ್ತಾ, ಅಕ್ಷಯ್ ಸಿಂಗ್, ವಿನಯ್ ಶರ್ಮಾ ಗಲ್ಲು ಶಿಕ್ಷೆ ಪ್ರಶ್ನಿಸಿ ಹಾಗೂ ತಡೆ ಕೋರಿ  ಕೋರ್ಟ್ಗೆ  ಸರ್ಜಿ ವಜಾಗೊಂಡಿದೆ. 

"

Latest Videos

ಇನ್ನು ಮೂವರು ದೋಷಿಗಳು  ದಿಲ್ಲಿ ಪಟಿಯಾಲಾ ಹೌಸ್ ಕೋರ್ಟ್ನಲ್ಲಿ ಸಲ್ಲಿಸಿದ್ದ  ಅರ್ಜಿ ವಜಾ ಗೊಂಡಿದ್ದು, ಫೆಬ್ರವರಿ 17ರಂದು ಹೊರಡಿಸಿದ್ದ ಡೆತ್ ವಾರೆಂಟ್‌ನಂತೆ ಮಾರ್ಚ್ 3ರ ಮಂಗಳವಾರ ಗಲ್ಲು ಶಿಕ್ಷೆಯಾಗುವುದು ಖಚಿತವಾಗಿದೆ. 

ನಿರ್ಭಯಾ ದೋಷಿಗಳಿಗೆ ಗಲ್ಲು ಮತ್ತೆ ಮುಂದಕ್ಕೆ ?...

ಇನ್ನು ಪವನ್ ಗುಪ್ತಾ ಸಲ್ಲಿಸಿದ್ದ  ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.

ನಡೆಯಲಿಲ್ಲ ಆಟ, ನಿರ್ಭಯಾ ದೋಷಿಗಳ ನೇಣಿನ ಅಂತಿಮ ಸಿದ್ಧತೆ ಆರಂಭ!...

ಗಲ್ಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಇಳಿಸಬೇಕು ಎಂದು ಸುಪ್ರೀಂಕೋರ್ಟಿನಲ್ಲಿ ಪವನ್ ಗುಪ್ತಾ ಅರ್ಜಿ ಸಲ್ಲಿಸಿದ್ದ. ಆದರೆ ಇದೀಗ ದಿಲ್ಲಿ ಕೋರ್ಟ್ ಹಾಗೂ ಸುಪ್ರೀಂಕೋರ್ಟಿಂದ ಅರ್ಜಿ ವಜಾಗೊಂಡಿದ್ದು ದೋಷಿಗಳಿಗೆ ಗಲ್ಲು ಖಚಿತವಾಗಿದೆ. 

ಕ್ಷಮಾದಾನ ಅರ್ಜಿ : ಸುಪ್ರೀಂಕೋರ್ಟಿಂದ ಕ್ಯುರೇಟಿವ್ ಅರ್ಜಿ ವಜಾಗೊಳ್ಳುತ್ತಲೇ ದೋಷಿ ಪವನ್ ಗುಪ್ತಾ ಇದೀಗ ರಾಷ್ಟ್ರಪತಿಗಳಿಗೆ  ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ.  ತಮ್ಮ ಶಿಕ್ಷೆ ಕಡಿಮೆಗೊಳಿಸುವಂತೆ ಕೋರಿದ್ದಾನೆ.

ಆದರೆ ಈಗಾಗಲೇ ಹಲವು ಬಾರಿ ಕಾನೂನು ಸಮರದಿಂದ ಮುಂದೆ ಹೋಗುತ್ತಿದ್ದ ಗಲ್ಲು ಶಿಕ್ಷೆ ಇದೀಗ ಅಂತಿಮ ಹಂತ ಪಡೆದಂತಾಗಿದ್ದು, ಮಂಗಳವಾರ [ಮಾ.03] ಬಹುತೇಕ ಖಚಿತವಾಗಿದೆ.

"

ಮಾರ್ಚ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!