
ಕೇರಳ (ಮಾ. 2): ತಲಶ್ಶೇರಿ ಹಾಗೂ ಪಾಲಕ್ಕಾಡ್ ಜಿಲ್ಲೆ ಮಲಮಪ್ಪುಳದ ಸರ್ಕಾರಿ ಕಾಲೇಜುಗಳಲ್ಲಿ ಭಾರತ ವಿರೋಧಿ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಶುಕ್ರವಾರ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇವುಗಳನ್ನು ಅಂಟಿಸಿದವರಿಗೆ ಬಲೆ ಬೀಸಿದ್ದಾರೆ.
ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸಂಘಟನೆ ಈ ಪೋಸ್ಟರ್‌ಗಳನ್ನು ಅಂಟಿಸಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಆರೋಪಗಳನ್ನು ಎಸ್‌ಎಫ್‌ಐ ತಳ್ಳಿಹಾಕಿದೆ.
ಕೊಬ್ಬೇನೂ ಕರಗಿಲ್ಲ.. ಪೊಲೀಸರಿಗೆ ಪ್ರಶ್ನೆ ಮಾಡ್ತಿದ್ದಾಳೆ ಕ್ರಿಮಿ ಅಮೂಲ್ಯಾ!
ತಲಶ್ಶೇರಿಯ ಬ್ರೆನೆನ್ ಕಾಲೇಜು ಹಾಗೂ ಮಲಮಪ್ಪುಳದ ಐಟಿಐ ಕಾಲೇಜುಗಳಲ್ಲಿ ಮಲಯಾಳಂನಲ್ಲಿ ಬರೆಯಲಾಗಿರುವ ಈ ಪೋಸ್ಟರ್‌ಳು ಪ್ರತ್ಯಕ್ಷವಾಗಿವೆ. ‘ಭಾರತ ನನ್ನ ದೇಶವಲ್ಲ. ಈ ಸ್ಕೌಂಡ್ರಲ್‌ಗಳು (ಫಟಿಂಗರು) ನನ್ನ ಸೋದರ-ಸೋದರಿಯರಲ್ಲ. ನಾನು ಇಂಥ ದೇಶವನ್ನು ಪ್ರೀತಿಸುವುದಿಲ್ಲ. ಇಂಥ ಸ್ಥಿತಿಯಲ್ಲಿ ಈ ದೇಶದ ಬಗ್ಗೆ ಹೆಮ್ಮೆ ಪಡಲ್ಲ. ಭಾರತದಲ್ಲಿ ಇಂತಹ ವಾತಾವರಣದಲ್ಲಿ ಈ ಭಯೋತ್ಪಾದಕರ ಜತೆ ವಾಸಿಸುತ್ತಿರುವುದಕ್ಕೆ ನನಗೆ ನಾಚಿಕೆಯಾಗುತ್ತದೆ. ಎಸ್‌ಎಫ್‌ಐ’ ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ.
ಗೌರಿ ಲಂಕೇಶ್ ಹೆಸರು ಹೇಳಿದಾಗ ದೇಶದ್ರೋಹಿ ಅಮೂಲ್ಯಾ ರಿಯಾಕ್ಷನ್!
ಈ ಬಗ್ಗೆ ಪ್ರತಿಕ್ರಿಯಿಸಿರುವ ಧರ್ಮಾದಂ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹೇಶ್, ‘ಗಲಭೆಗೆ ಪ್ರಚೋದನೆ (ಐಪಿಸಿ ಸೆಕ್ಷನ್ 153) ಆರೋಪ ಹೊರಿಸಿ ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪೋಸ್ಟರ್ ಅಂಟಿಸಿದ್ಯಾರು ಎಂಬ ತನಿಖೆ ಆರಂಭಿಸಿದ್ದೇವೆ’ ಎಂದರು.
- ಸಾಂದರ್ಭಿಕ ಚಿತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ