ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸೊಬ್ಬರನ್ನು ಗೂಳಿಯೊಂದು ಎತ್ತಿ ಬಿಸಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯಲ್ಲಿ ಮೊಬೈಲ್ ಹಿಡಿದುಕೊಂಡು ರಸ್ತೆ ಬದಿ ನಿಂತಿದ್ದ ಪೊಲೀಸ್ ಪೇದೆಯನ್ನು ಗೂಳಿ ಎತ್ತಿ ಬಿಸಾಕಿದೆ. ಗುರುವಾರ ಸಂಜೆ ದಯಾಲ್‌ಪುರದ (Dayalpur) ಶೇರ್‌ಪುರ್ ಚೌಕ್‌ನಲ್ಲಿ (Sherpur Chowk) ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಅಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ರಸ್ತೆ ಬದಿ ನಿಂತಿದ್ದ ಪೊಲೀಸ್ ಪೇದೆಯನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟರಲ್ಲಿ ಎಲ್ಲಿಂದಲೋ ಬಂದ ಗೂಳಿ ರಸ್ತೆಯ ಬದಿಯಲ್ಲಿ ನಿಂತಿದ್ದ ಪೊಲೀಸರ ಮೇಲೆ ದಾಳಿ ಮಾಡಿ ದೂರ ಎಸೆದಿದೆ.
ನಂತರ ಕೆಳಗೆ ಬಿದ್ದ ಪೊಲೀಸ್ ಪೇದೆಯನ್ನು ಅವರ ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆದೊಯ್ದರು. ಗೂಳಿಯಿಂದ ಏಟು ತಿಂದ ಆತನನ್ನು ಜ್ಞಾನ್ ಸಿಂಗ್ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸ್ ಪೇದೆ ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ದೆಹಲಿಯಲ್ಲಿ ಬಿಡಾಡಿ ದನಗಳ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಹಲವರು ಹೇಳಿದ್ದಾರೆ. ದೆಹಲಿಯ ಮೇಯರ್ ಮತ್ತು ದೇಶದ ಗೃಹ ಸಚಿವರು ಈ ಪೊಲೀಸ್ ಪೇದೆಯ ಬಳಿ ಕ್ಷಮೆ ಕೇಳುತ್ತಾರೆಯೇ ಎಂದು ಒಬ್ಬರು ನೋಡುಗರು ಕಾಮೆಂಟ್ ಮಾಡಿದ್ದಾರೆ.
ಎರಡು ಎತ್ತುಗಳ ನಡುವಿನ ಜಗಳ ಬಿಡಿಸಿದ ಗೂಳಿ... ನೋಡಿ ವೈರಲ್ ವಿಡಿಯೋ
ನಗರಗಳಲ್ಲಿ ಬಿಡಾಡಿ ದನಗಳ ಹಾವಳಿ ಇತ್ತೀಚೆಗೆ ಸಾಮಾನ್ಯವಾಗಿದೆ. ತಿಂಗಳ ಹಿಂದೆ ಕ್ಯಾಲಿಫೋರ್ನಿಯಾದಲ್ಲಿ ಸೈಕ್ಲಿಂಗ್ ರೇಸ್ ವೇಳೆ ಧುತ್ತನೇ ಎದುರಾದ ಗೂಳಿಯೊಂದು ಓರ್ವ ಸೈಕ್ಲಿಸ್ಟ್‌ನ ಮೇಲೆ ಎರಗಿ, ಆತನನ್ನು ಗಾಳಿಯಲ್ಲಿ ಟಾಸ್ ಹಾಕಿದಂತೆ ಗಾಳಿಯಲ್ಲಿ ಮೇಲೆಸೆದಿದೆ. ಸೆಂಟ್ರಲ್ ಕ್ಯಾಲಿಫೋರ್ನಿಯಾದಲ್ಲಿ ಘಟನೆ ನಡೆದಿತ್ತು. ಗೂಳಿ ದಾಳಿಗೊಳಗಾದ ಸೈಕ್ಲಿಸ್ಟ್ ಟೋನಿ ಇಂಡರ್‌ಬಿಟ್ಜೆನ್ (Tony Inderbitzen) ಅವರು ಈ ಸಿಟ್ಟುಗೊಂಡಿದ್ದ ಗೂಳಿಯನ್ನು ಸಾಧು ಗೂಳಿಯೆಂದು ತಪ್ಪಾಗಿ ಭಾವಿಸಿದ್ದರಂತೆ. ಅಲ್ಲದೇ ಗೂಳಿ ತಮ್ಮನ್ನು ತಲುಪುವ ಮೊದಲು ಅಲ್ಲಿಂದ ಮುಂದೆ ಸಾಗಬಹುದು ಎಂದು ಅವರು ಅಂದುಕೊಂಡಿದ್ದರಂತೆ ಅಷ್ಟರಲ್ಲೇ ಒಮ್ಮೆಗೆ ನುಗ್ಗಿದ ಗೂಳಿ ಇವರ ಎಣಿಕೆಯನ್ನು ತಲೆಕೆಳಗೆ ಮಾಡಿದೆ.
ಸೆಂಟ್ರಲ್ ಕ್ಯಾಲಿಫೋರ್ನಿಯಾದಾದ್ಯಂತ ಮಣ್ಣಿನ ರಸ್ತೆ ಅಥವಾ ಗುಡ್ಡಗಾಡು ಸೈಕ್ಲಿಂಗ್‌ನಲ್ಲಿ ಭಾಗವಹಿಸುವ ಸೈಕ್ಲಿಸ್ಟ್‌ಗಳಿಗೆ, ಈ ಘಟನೆಯ ನಂತರ ಸೈಕ್ಲಿಂಗ್ ಸ್ಪರ್ಧೆಯು ಭಯಾನಕ ಅನುಭವವಾಗಿ ಮಾರ್ಪಟ್ಟಿತ್ತು. ಈ ಆಘಾತಕಾರಿ ಕ್ಷಣವು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಪ್ರಾಣಿಗಳ ನಡವಳಿಕೆ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ.
ರೇಸ್ ವೇಳೆ ಟಾಸ್ ಹಾಕಿದಂತೆ ಸೈಕ್ಲಿಸ್ಟ್‌ನನ್ನು ಎತ್ತಿ ಬಿಸಾಕಿದ ಗೂಳಿ... ವಿಡಿಯೋ ವೈರಲ್
ಈ ರೇಸ್ ನಡೆಸುವ ಬಿಯಾಂಚಿ ರಾಕ್ ಕಾಬ್ಲರ್‌ನ (Bianchi Rock Cobbler) ವೆಬ್‌ಸೈಟ್‌ನಲ್ಲಿ ಈ ರೇಸ್‌ಗೆ ಸ್ಟುಪಿಡ್ಲಿ ಹಾರ್ಡ್ ರೈಡ್ ಎಂದು ಮೊದಲೇ ಪ್ರಚಾರ ನೀಡಲಾಗಿತ್ತು. ಈ ನಡುವೆ ಈ ರೇಸ್ ಮಧ್ಯೆ ಗೂಳಿಯೊಂದು ಪ್ರವೇಶಿಸಿದ ಪರಿಣಾಮ ಸೈಕ್ಲಿಸ್ಟ್‌ಗಳಿಗೆ ಈ ರೇಸ್ ಮತ್ತಷ್ಟು ಸವಾಲಾಗಿ ಪರಿಣಮಿಸಿತ್ತು. ಈ ಗೂಳಿಯು ಒಟ್ಟು ನಾಲ್ವರು ಸೈಕ್ಲಿಸ್ಟ್‌ಗಳ ಮೇಲೆ ದಾಳಿ ಮಾಡಿದೆ ಎಂದು ವರದಿಯಾಗಿದೆ.ಆದರೆ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ತಿಳಿದು ಬಂದಿದೆ. ಬೇಕರ್ಸ್‌ಫೀಲ್ಡ್ (Bakersfield) ಬಳಿ ಖಾಸಗಿಯಾಗಿ ನಡೆಯುತ್ತಿರುವ ಗೋಶಾಲೆಯೊಂದರ ಬಳಿ ಹೋಗುತ್ತಿದ್ದಾಗ ಈ ಅನಾಹುತ ಸಂಭವಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ