ನೈನಿ ಜೈಲಿನಲ್ಲಿ 516 ಕೈದಿಗಳಿಂದ ನವರಾತ್ರಿ ಉಪವಾಸ, 450 ಕೈದಿಗಳಿಂದ ರೋಜಾ!

By Suvarna NewsFirst Published Apr 6, 2022, 12:08 PM IST
Highlights

* ಉತ್ತರ ಪ್ರದೇಶದ ಪ್ರಯಾಗರಾಜ್ ಬಳಿಯ ನೈನಿ ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ಉಪವಾಸ

* 516 ಕೈದಿಗಳಿಂದ ನವರಾತ್ರಿ ಉಪವಾಸ, 450 ಕೈದಿಗಳಿಂದ ರೋಜಾ

* ಉಪವಾಸ ಆಚರಿಸುತ್ತಿರುವ ಕೈದಿಗಳಿಗಾಗಿ ವಿಶೇಷ ವ್ಯವಸ್ಥೆ

ಲಕ್ನೋ(ಏ. 06): ಉತ್ತರ ಪ್ರದೇಶದ ಪ್ರಯಾಗರಾಜ್ ಬಳಿಯ ನೈನಿ ಸೆಂಟ್ರಲ್ ಜೈಲಿನಲ್ಲಿರುವ ಮಹಿಳೆಯರು ಸೇರಿದಂತೆ ಒಟ್ಟು 516 ಕೈದಿಗಳು ನವರಾತ್ರಿಯಲ್ಲಿ ಒಂಬತ್ತು ದಿನಗಳ ಉಪವಾಸವನ್ನು ಆಚರಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಸುಮಾರು 450 ಕೈದಿಗಳು ರಂಜಾನ್ ಉಪವಾಸವನ್ನು ಆಚರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜೈಲು ಅಧಿಕಾರಿಗಳು ವಿಶೇಷ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಚೈತ್ರ ನವರಾತ್ರಿಯ ಮೊದಲ ದಿನದಂದು ಒಟ್ಟು 1,532 ಕೈದಿಗಳು ಉಪವಾಸವನ್ನು ಆಚರಿಸಿದ್ದಾರೆ ಇಷ್ಟೇ ಮಂದಿ ಕೈದಿಗಳು ನವರಾತ್ರಿಯ ಎಂಟನೇ ದಿನದಂದು ಉಪವಾಸ ಮಾಡುವ ನಿರೀಕ್ಷೆಯಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಈ 1,532 ಕೈದಿಗಳಲ್ಲಿ, 516 ಕೈದಿಗಳು ನವರಾತ್ರಿಯ ಎಲ್ಲಾ ಧಾರ್ಮಿಕ ಆಚರಣೆಗಳನ್ನು ಆಚರಿಸುತ್ತಿದ್ದಾರೆ, ಸಂಪೂರ್ಣ ಒಂಬತ್ತು ದಿನಗಳ ಕಾಲ ಉಪವಾಸವನ್ನು ಆಚರಿಸುತ್ತಾರೆ.

Latest Videos

ಪತ್ರಿಕೆಯ ಪ್ರಕಾರ, ನೈನಿ ಕೇಂದ್ರ ಕಾರಾಗೃಹದ ಹಿರಿಯ ಜೈಲು ಅಧೀಕ್ಷಕ ಪಿಎನ್ ಪಾಂಡೆ, “ನವರಾತ್ರಿಯ ಮೊದಲ ದಿನದಂದು ಒಟ್ಟು 1,532 ಕೈದಿಗಳು ಉಪವಾಸವನ್ನು ಆಚರಿಸಿದ್ದರು ಮತ್ತು ಅಷ್ಟಮಿಯಂದು ಅದೇ ಸಂಖ್ಯೆಯ ಜನರು ಉಪವಾಸವನ್ನು ಆಚರಿಸುವ ನಿರೀಕ್ಷೆಯಿದೆ. ಈ 1,532 ಕೈದಿಗಳಲ್ಲಿ 516 ಕೈದಿಗಳು ಒಂಬತ್ತು ದಿನಗಳ ಸಂಪೂರ್ಣ ಉಪವಾಸದಲ್ಲಿದ್ದಾರೆ.

ಅದೇ ಸಮಯದಲ್ಲಿ, ರಂಜಾನ್ ಉಪವಾಸ ಮಾಡುವ ಕೈದಿಗಳಿಗೆ ಸಂಜೆ ಹೆಚ್ಚುವರಿ ಆಹಾರವನ್ನು ನೀಡಲಾಗುತ್ತಿದೆ, ಇದರಲ್ಲಿ 200 ಗ್ರಾಂ ಹಾಲು, ಮೂರು ಬಾಳೆಹಣ್ಣು, 30 ಗ್ರಾಂ ಖರ್ಜೂರ, ನಿಂಬೆ, ರೊಟ್ಟಿ ಮತ್ತು ಬಿಸ್ಕತ್ತುಗಳು ಸೇರಿವೆ.

ಅಧಿಕಾರಿಗಳು ಉಪವಾಸಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿದ್ದು, ಉಪವಾಸ ಆಚರಿಸುವ ಕೈದಿಗಳಿಗೆ ಹಾಲು, ಹಣ್ಣುಗಳಂತಹ ಎಲ್ಲಾ ಅಗತ್ಯ ಆಹಾರ ಪದಾರ್ಥಗಳನ್ನು ಒದಗಿಸಲಾಗುತ್ತಿದೆ ಎಂದು ಹಿರಿಯ ಜೈಲು ಅಧೀಕ್ಷಕ ಪಾಂಡೆ ಹೇಳಿದ್ದಾರೆ. ನವರಾತ್ರಿ ವ್ರತವನ್ನು ಆಚರಿಸುವ ಕೈದಿಗಳು ತಮ್ಮ ಬ್ಯಾರಕ್‌ಗಳಲ್ಲಿ ಮತ್ತು ಜೈಲು ಆವರಣದಲ್ಲಿ ಭಜನೆ-ಕೀರ್ತನೆ ಮತ್ತು ಇತರ ಆಚರಣೆಗಳಲ್ಲಿ ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.

ಇದರೊಂದಿಗೆ ವ್ರತ ಆಚರಿಸುವ ಕೈದಿಗಳು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಾರೆ ಎಂದು ತಿಳಿಸಿದರು. ಇದರೊಂದಿಗೆ ಈ ವರ್ಷವೂ ಉಪವಾಸ ಆಚರಿಸುವ ಕೈದಿಗಳ ಸಂಖ್ಯೆ ಹಿಂದಿನ ವರ್ಷಗಳಿಗಿಂತ ಹೆಚ್ಚಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

click me!