ಸಿಂಗಾಪುರದಲ್ಲಿ ಪತ್ತೆಯಾದ ವೈರಸ್‌ನಿಂದ ಭಾರತಕ್ಕೆ ಕೊರೋನಾ 3ನೇ ಅಲೆ; ಎಚ್ಚರಿಕೆ ನೀಡಿದ ಸಿಎಂ!

By Suvarna News  |  First Published May 18, 2021, 5:57 PM IST
  • ಸಿಂಗಾಪುರದಲ್ಲಿ ಮಕ್ಕಳಲ್ಲಿ ಕೊರೋನಾ ರೂಪಾಂತರಿ ವೈರಸ್ ಪತ್ತೆ
  • ಭಾರತಕ್ಕೆ ಸಿಂಗಾಪುರದಿಂದಲೇ 3ನೇ ಕೊರೋನಾ ಅಲೆ ಭೀತಿ
  • ಸಿಂಗಾಪುರ ವಿಮಾನ, ಆಗಮನ ನಿರ್ಬಂಧಿಸಲು ಮನವಿ

ನವದೆಹಲಿ(ಮೇ.18): ಕೊರೋನಾ ವೈರಸ್ 2ನೇ ಅಲೆ ಹೊಡೆತದಿಂದ ಭಾರತ ಇನ್ನು ಮೇಲೆದ್ದಿಲ್ಲ. ಇದರ ಬೆನ್ನಲ್ಲೇ ಸಿಂಗಾಪುರದಿಂದ ಭಾರತಕ್ಕೆ 3ನೇ ಅಲೆ ಅಪಾಯ ಕಾದಿದೆ. ಕಾರಣ ಸಿಂಗಾಪುರದಲ್ಲಿ ಇದೀಗ ಮಕ್ಕಳಲ್ಲಿ ಹೆಚ್ಚಿನ ಕೊರೋನಾ ಪ್ರಕರಣ ಕಾಣಿಸಿಕೊಳ್ಳುತ್ತಿದೆ. ಇಷ್ಟೇ ಅಲ್ಲ ಇದು ರೂಪಾಂತರಿ ವೈರಸ್ ಆಗಿದ್ದು, ಇದೇ ವೈರಸ್ ಇದೀಗ ಸಿಂಗಾಪುರದಿಂದ ಭಾರತಕ್ಕೆ ಅಪ್ಪಳಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಚ್ಚರಿಸಿದ್ದಾರೆ.

ಡಿಸಿಗಳಿಗೆ ಶಹಬ್ಬಾಸ್ ಎಂದ ಮೋದಿ : ಜಿಲ್ಲಾಧಿಕಾರಿಗಳಿಗೇ ಲಾಕ್‌ಡೌನ್ ನಿರ್ಧಾರ!

Latest Videos

undefined

ಭಾರತದ ತಜ್ಞ ವೈದ್ಯರು 3ನೇ ಕೊರೋನಾ ಅಲೆ ಕುರಿತು ಎಚ್ಚರಿಸಿದ್ದಾರೆ. ಇದು ಮಕ್ಕಳಿಗೆ ತೀವ್ರ ಅಪಾಯ ತಂದೊಡ್ಡಲಿದೆ ಎಂದಿದ್ದಾರೆ. ಇದೀಗ ಸಿಂಗಾಪುರದಲ್ಲಿ ಮಕ್ಕಳಲ್ಲಿ ರೂಪಾಂತರಿ ವೈರಸ್ ಕಾಣಿಸಿಕೊಂಡು ಅಸ್ವಸ್ಥರಾಗುತ್ತಿದ್ದಾರೆ. ಹೀಗಾಗಿ ಸಿಂಗಾಪುರದಿಂದ ಭಾರತಕ್ಕೆ 3ನೇ ಅಲೆ ಅಪಾಯ ಎದುರಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಕೈಬಿಟ್ಟ ಸರ್ಕಾರ!

ಕೊರೋನಾ 3ನೇ ಅಲೆ ಅಪಾಯ ಎದುರಾಗಿದೆ. ಹೀಗಾಗಿ ಸಿಂಗಾಪುರದ ವಿಮಾನಗಳಿಗೆ ನಿರ್ಬಂಧ ಹೇರಬೇಕು ಎಂದು ಅರವಿಂದ್ ಕೇಜ್ರಿವಾಲ್ ಕೇಂದ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಮಕ್ಕಳಿಗೆ ಲಸಿಕೆ ನೀಡುವಿಕೆ ಕಾರ್ಯಕ್ಕೇ ವೇಗ ನೀಡಬೇಕು ಎಂದು 2 ಮನವಿ ಮಾಡಿದ್ದಾರೆ.

ಮಕ್ಕಳಲ್ಲಿ ಕೊರೋನಾ ರೂಪಾಂತರಿ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಶಾಲೆಗಳನ್ನು ಮೇ19 ರಿಂದ ಮುಚ್ಚಲಾಗಿದೆ.  B.1.617 ವೈರಸ್ ಭಾರತದಲ್ಲಿ ಪತ್ತೆಯಾಗಿದೆ. ಇದೀಗ ಇದೇ ವೈರಸ್ ರೂಪಾಂತರಗೊಂಡು ಸಿಂಗಾಪುರದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಸಿಂಗಾಪುರ ಆರೋಗ್ಯ ಸಚಿವ ಆಂಗ್ ಯೇ ಕುಂಗ್ ಹೇಳಿದ್ದಾರೆ.

click me!