
ನವದೆಹಲಿ (ನ.08) ವರ್ಕ್ ಫ್ರಮ್ ಹೋಮ್ ( ಮನೆಯಿಂದ ಕೆಲಸ) ಆಯ್ಕೆಯನ್ನು ಇತ್ತೀಚೆಗೆ ಬಹುತೇಕ ಕಂಪನಿಗಳು ಅಂತ್ಯಗೊಳಿಸಿದೆ. ಕೋವಿಡ್ ಸಮಯದಲ್ಲಿ ನೀಡಿದ್ದ ಈ ಸೌಲಭ್ಯವನ್ನು ಅಂತ್ಯಗೊಳಿಸಿ ಎಲ್ಲರೂ ಕಚೇರಿಯಿಂದ ಕೆಲಸ ಮಾಡುವಂತೆ ಕಂಪನಿಗಳು ಆದೇಶಿಸಿದೆ. ಆದರೆ ಇದೀಗ ಮುಖ್ಯಮಂತ್ರಿ ಕನಿಷ್ಠ ಶೇಕಡಾ 50 ರಷ್ಟು ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ. ಖಾಸಗಿ ಕಂಪನಿಗಳಿಗೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಇದರ ಜೊತೆಗೆ ಸರ್ಕಾರಿ ಕಚೇರಿಗಳ ಸಮಯವನ್ನೂ ಬದಲಾವಣೆ ಮಾಡಲಾಗಿದೆ. ಹೊಸ ಬದಲಾವಣೆ ಮಾಡಿರುವುದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಮುಖ್ಯಮಂತ್ರಿ ರೇಖಾ ಗುಪ್ತಾ ಈ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಂದಲೇ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಸೂಚಿಸಿದ್ದರೆ. ಇದಕ್ಕೆ ಮುಖ್ಯ ಕಾರಣ ದೆಹಲಿಯ ವಾಯು ಮಾಲಿನ್ಯ. ದೆಹಲಿಯಲ್ಲಿನ ವಾಯು ವಿಷವಾಗಿದೆ. ನಿಮಿಷದಿಂದ ನಿಮಿಷಕ್ಕೆ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ದೆಹಲಿ ವಾಯು ಮಾಲಿನ್ಯದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಶೇ .50 ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದ್ದಾರೆ.
ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿಸಿ ಎಂದು ಖಾಸಗಿ ಕಂಪನಿಗಳಿಗೆ ರೇಖಾ ಗುಪ್ತ ಮನವಿ ಮಾಡಿದ್ದಾರೆ. ಇದೇ ವೇಳೆ ಸಾರ್ವಜನಿಕ ವಾಹನಗಳನ್ನು ಬಳಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ಕಾರ್ ಪುಲ್ಲಿಂಗ್ ಸೇರಿದಂತೆ ಹಲವು ಉಪಕ್ರಮಗಳ ಕುರಿತು ರೇಖಾ ಗುಪ್ತ ಸೂಚಿಸಿದ್ದಾರೆ. ಇದರಿಂದ ಒಬ್ಬೊಬ್ಬರೇ ಒಂದೊಂದು ವಾಹನದಲ್ಲಿ ತರಳಿ ಮಾಲಿನ್ಯ ಹೆಚ್ಚಿಸುವ ಬದಲು ಸಹಕರಿಸಬೇಕಾಗಿ ವಿನಂತಿಸಿದ್ದಾರೆ.
ದೆಹಲಿಯಲ್ಲಿ ವಾಯು ಗುಣಮಟ್ಟ ಕಳಪೆಯಾಗಿದೆ. ಇಂದು ಬೆಳಗ್ಗೆ ದೆಹಲಿಯಲ್ಲಿ ವಾಯು ಗುಣಮಟ್ಟ 655 ಸೂಚ್ಯಂಕ ದಾಖಲಾಗಿದೆ. ಇದು ಅತ್ಯಂತ ಕಳಪೆಯಾಗಿದೆ. ವಾಯು ಮಾಲಿನ್ಯದಿಂದ ದೆಹಲಿ ಜನತೆ ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಸಂಚಾರ ದಟ್ಟಣೆ, ವಿಪರೀತ ವಾಹನ ಬಳಕೆಯಿಂದ ದೆಹಲಿ ವಾಯು ಮಾಲಿನ್ಯ ವಿಪರೀತವಾಗುತ್ತಿದೆ. ಹೀಗಾಗಿ ದೆಹಲಿ ಸರ್ಕಾರ ಕಚೇರಿ ಸಮಯವನ್ನೂ ಬದಲಾವಣೆ ಮಾಡಿದೆ. ನವೆಂಬರ್ 15 ರಿಂದ ಫೆಬ್ರವರಿ 15 ರ ತನಕ ಹೊಸ ನಿಯಮ ಅನ್ವಯವಾಗುತ್ತಿದೆ. ಸರ್ಕಾರಿ ಕಚೇರಿಗಳು ಬೆಳಗ್ಗೆ 10 ರಿಂದ ಸಂಜೆ 6:30 ರ ತನಕ ಹಾಗೂ ಎಂಸಿಡಿಗಳು ಬೆಳಗ್ಗೆ 8:30 ರಿಂದ ಸಂಜೆ 5 ಗಂಟೆಯ ತನಕ ಕರ್ತವ್ಯ ನಿರ್ವಹಣೆಗೆ ಸೂಚನೆ ನೀಡಲಾಗಿದೆ. ಅರ್ಧಗಂಟೆಯ ಬದಲಾವಣೆ ಹಿನ್ನೆಲೆ ವಾಹನ ದಟ್ಟಣೆ ಕಡಿಮೆ ಆಗಲಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ